ಈ ಆಸ್ಪತ್ರೆ ಬಾಗಿಲು ತೆರೆದಿದ್ದು ಎರಡೇ ತಿಂಗಳು!
•ಬರಲೇ ಇಲ್ಲ ವೈದ್ಯರು•39 ಲಕ್ಷ ರೂ. ನೀರಲ್ಲಿ ಹೋಮ•ತಗ್ಗದ ಡಿಗ್ಗಿ ಗೋಳು
Team Udayavani, Jul 15, 2019, 11:01 AM IST
ಕಾರವಾರ: ಜೊಯಿಡಾ ತಾಲೂಕಿನ ಬಜಾರಕೊಣಂಗ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರ ಒಂದು ಆಸ್ಪತ್ರೆ ಕಟ್ಟಿ 14 ವರ್ಷಗಳು ಕಳೆಯಿತು. ಆದರೆ ಆಸ್ಪತ್ರೆ ತೆರೆದದ್ದು ಮಾತ್ರ ಕೇವಲ ಎರಡು ತಿಂಗಳು!
ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ. ಜಿಲ್ಲೆಯ ಅತ್ಯಂತ ಸಂಪದ್ಭರಿತ ತಾಲೂಕು ಜೋಯಿಡಾ. ರಾಜ್ಯಕ್ಕೆ ವಿದ್ಯುತ್ ನೀಡಿದ ಈ ತಾಲೂಕಿನ ಅತ್ಯಂತ ಕುಗ್ರಾಮವೇ ಡಿಗ್ಗಿ. ಬ್ರಿಟಿಷರ ಕಾಲದಲ್ಲೇ ಮೈನಿಂಗ್ ವಲಯವಾಗಿದ್ದ ಡಿಗ್ಗಿ ಮ್ಯಾಂಗನೀಸ್ ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು. ಈಗಲೂ ಗಣಿಗಾರಿಕೆಯ ಅವಶೇಷಗಳು ಡಿಗ್ಗಿ ಗ್ರಾಮದ ಸುತ್ತಮುತ್ತ ಉಳಿದಿವೆ. ಅದಿರು ಮತ್ತು ಅರಣ್ಯ ಸಂಪತ್ತಿನ ಡಿಗ್ಗಿ ಗ್ರಾಮ ರಸ್ತೆ, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲದ ಅತ್ಯಂತ ಬಡ ಗ್ರಾಮ. ಇಲ್ಲಿ ವೈದ್ಯರು, ಶಿಕ್ಷಕರು ಉಳಿಯಲಾರರು. ಬ್ರಿಟಿಷರ ಕಾಲದಲ್ಲಿದ್ದ ದಟ್ಟ ಅರಣ್ಯ, ಅದಿರು ಸಂಪತ್ತು, ಮೈದುಂಬಿ ಹರಿಯುವ ಕಾಳಿ ನದಿ, ಸ್ವಚ್ಛಂದವಾಗಿ ಓಡಾಡುವ ಕಾಡು ಪ್ರಾಣಿಗಳ ಕಾರಣವಾಗಿ ನಾಗರಿಕ ಜಗತ್ತಿನಿಂದ ಹೋದ ಸರ್ಕಾರಿ ನೌಕರರು ಡಿಗ್ಗಿಯಲ್ಲಂತೂ ಉಳಿಯಲಾರರು.
ಮಳೆಗಾಲದಲ್ಲಂತೂ ಡಿಗ್ಗಿ ಕಾಳಿ ನದಿಯ ಅಬ್ಬರದಿಂದ ದ್ವೀಪವಾಗುತ್ತದೆ. ಮಳೆಗಾಲದಲ್ಲಿ ಡಿಗ್ಗಿ ಹಾಗೂ ಇತರ ಗ್ರಾಮಗಳ ಜನರ ಕಷ್ಟಗಳು ಇಮ್ಮಡಿಸುತ್ತವೆ. ರಸ್ತೆ, ವಿದ್ಯುತ್ ದೀಪ, ಶಾಲೆ, ಆಸ್ಪತ್ರೆ ಇಲ್ಲದೇ ಜನ ಸ್ವತಂತ್ರ ಭಾರತದಲ್ಲಿ ಸಹ ಜೀವನ ಕಳೆದರು. 24 ಚಿಕ್ಕ ಚಿಕ್ಕ ಹಳ್ಳಿಗಳು ಸೇರಿ 4000 ಜನಸಂಖ್ಯೆ ಇರುವ ಬಜಾರಕೊಣಂಗ ಗ್ರಾಪಂ ಆರೋಗ್ಯ ಸೌಲಭ್ಯದಿಂದ ವಂಚಿತವಾಗಿಯೇ ಇತ್ತು. ಅನಾರೋಗ್ಯಕ್ಕೆ ತುತ್ತಾದವರನ್ನು ಕಂಬಳಿಯಲ್ಲಿ ಹೊತ್ತು 10 ಕಿಮೀ ನಡೆದು ಕಾಳಿ ನದಿ ದಾಟಿ ನಂತರ 48 ಕಿಮೀ ಸಾಗಿ ದಾಂಡೇಲಿ ತಲುಪಿ ಚಿಕಿತ್ಸೆ ಪಡೆಯುವ ಸನ್ನಿವೇಶ ಇತ್ತು. ಇಲ್ಲಿನ 24 ಹಳ್ಳಿಗಳ ಜನರು ಆರೋಗ್ಯ ಸೌಲಭ್ಯಕ್ಕಾಗಿ ಜೋಯಿಡಾ, ದಾಂಡೇಲಿ ಇಲ್ಲವೇ ಪಕ್ಕದ ಗೋವಾ ರಾಜ್ಯವನ್ನು ಅವಲಂಬಿಸಿದ್ದರು.
ಮಳೆಗಾಲದಲ್ಲಿ ಡಿಗ್ಗಿ ಹಾಗೂ ಅದರ ಸುತ್ತಲ ಸಣ್ಣ ಸಣ್ಣ ಗ್ರಾಮಗಳ ಜನರ ಕಷ್ಟ ಹೇಳತೀರದ್ದು. ನಮ್ಮ ಬವಣೆ ಸ್ವಾತಂತ್ರ್ಯ ಬಂದು ಏಳು ದಶಕಗಳು ದಾಟಿದರೂ ಮುಗಿದಿಲ್ಲ. ಇನ್ನಾದರೂ ಸರ್ಕಾರ ಡಿಗ್ಗಿ ಗ್ರಾಮದತ್ತ ಕಣ್ತೆರೆದು ನೋಡಬೇಕು.•ಅಜಿತ್ ಮಿರಾಶಿ, ಉಪಾಧ್ಯಕ್ಷ, ಬಜಾರ ಕೊಣಂಗ್ ಗ್ರಾಪಂ
•ನಾಗರಾಜ ಹರಪನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.