ಇದು ಚುನಾವಣೆಯಲ್ಲ, ಯುದ್ಧ: ಅನಂತ
Team Udayavani, Apr 22, 2019, 4:03 PM IST
ಭಟ್ಕಳ: ಯಾರ ಮನಸ್ಸಿನಲ್ಲಿ ದೇಶ ಇದೆ, ಯಾರ ಮನಸ್ಸಿನಲ್ಲಿ ದೇಶದ ಅಖಂಡತೆ ಇದೆ ಅವರೆಲ್ಲರೂ ಮೋದಿಗೆ ಮತ ಹಾಕಿ ಎನ್ನುತ್ತಿದ್ದಾರೆ. ಅದರಲ್ಲಿ ಕಾಂಗ್ರೆಸ್‌ನವರು, ಜೆಡಿಎಸ್‌ನವರೂ ಇದ್ದಾರೆ ಎಂದು ಕೆನರಾ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಹೇಳಿದರು.
ಪಟ್ಟಣದಲ್ಲಿ ರೋಡ್ ಶೋ ನಂತರ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಸೇರಿದ್ದ ನೂರಾರು ಜನರನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ನಡೆಯುತ್ತಿರುವ ಚುನಾವಣೆ ಕೇವಲ ಚುನಾವಣೆಯಲ್ಲ, ಇದೊಂದು ಯುದ್ಧವಾಗಿದೆ. ನಮ್ಮ ದೇಶದಲ್ಲಿ ನಾವು ಕಳೆದುಕೊಂಡಿರುವ ವೈಭವದತ್ತ ಕೊಂಡೊ ಯ್ಯುವ ಯುದ್ಧವಾಗಿದೆ ಎಂದರು.
ನಾವು ಮೋದಿಯ ಹೆಸರಿನಲ್ಲಿ ಓಟ್ ಕೇಳುತ್ತಾರೆ ಎನ್ನುತ್ತಾರೆ. ನಾವು ದೇಶಕ್ಕಾಗಿ ಮೋದಿ ಹೆಸರಿನಲ್ಲಿ ಮತಕೇಳುತ್ತಿದ್ದೇವೆ. ಆದರೆ ನೀವು ಕುಟುಂಬದ ಹೆಸರಿನಲ್ಲಿ ಮತ ಕೇಳುತ್ತಿದ್ದೀರಿ, ನಾಚಿಕೆಯಾಗಬೇಕು. ನಾವು ಭಾರತ್ ಮಾತಾಕಿ ಜೈ ಎಂದರೆ ನೀವು ನಿಮ್ಮ ಪಕ್ಷದ ಕುಟುಂಬಕ್ಕೆ ಜೈ ಎನ್ನುತ್ತೀರಿ ಇದು ನಾಚಿಕೆಗೇಡಿನ ವಿಚಾರ ಎಂದು ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷವನ್ನು ಕಟುಕಿದರು.
ಕಳೆದ 60 ವರ್ಷಗಳಿಂದ ನಮ್ಮನ್ನು ಲೂಟಿ ಮಾಡಿ ಮತ್ತೆ ಮತಕೇಳುತ್ತಿದ್ದಾರೆ. ಇಂದು ಹಿಂದುಳಿದವರ ಹೆಸರಿನಲ್ಲಿ, ಮುಂದುಳಿದವರ ಹೆಸರಿನಲ್ಲಿ ಮತ ಕೇಳುತ್ತಾರೆ. ಇವರಿಗೆ ಅಲ್ಪ ಸಂಖ್ಯಾತರ ಮೇಲೆ ದಾಳಿಯಾದಾಗ ತಕ್ಷಣ ಭಾರತೀಯತೆ ನೆನಪಾಗುತ್ತಾರೆ ಎಂದರು.
ಶಾಸಕ ಸುನಿಲ್ ನಾಯ್ಕ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಕೆ.ಜಿ.ನಾಯ್ಕ, ಮಂಡಳ ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾ ಪ್ರಮುಖ ಗೋವಿಂದ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ ಮುಂತಾದವರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.