![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 21, 2022, 6:35 PM IST
ಭಟ್ಕಳ: ಅಂಗನವಾಡಿಗೆ ಹೋಗಿ ಬಂದಿದ್ದ ಬಾಲಕನೋರ್ವ ಮನೆಯ ಹಿಂದುಗಡೆ ಆಟವಾಡುತ್ತಾ ಇರುವಾಗ ಮಳೆ ನೀರಿನ ಕಾಲುವೆಯಲ್ಲಿ ಬಿದ್ದು ನೀರು ಕುಡಿದು ಮೃತಪಟ್ಟ ಘಟನೆ ತಾಲೂಕಿನ ಪಡುಶಿರಾಲಿಯಲ್ಲಿ ಸಂಭವಿಸಿದೆ.
ಮೃತ ಬಾಲಕನನ್ನು ವಿಜೇತ ಗಣಪತಿ ನಾಯ್ಕ (4) ಎಂದು ಗುರುತಿಸಲಾಗಿದೆ. ಈತನು ಅಂಗನವಾಡಿಗೆ ಹೋಗಿದ್ದು ಮೇ.20 (ಶುಕ್ರವಾರ) ರಂದು ಮಧ್ಯಾಹ್ನ ಮನೆಗೆ ಬಂದಿದ್ದು ತಾಯಿ ಮನೆಗೆಲಸದಲ್ಲಿರುವಾಗ ಮನೆಯ ಹಿಂದುಗಡೆ ಆಟವಾಡಿಕೊಂಡಿದ್ದ ಎನ್ನಲಾಗಿದೆ.
ಅಕಸ್ಮಿಕವಾಗಿ ಮಳೆ ನೀರು ಹರಿಯುವ ಕಾಲುವೆಗೆ ಬಿದ್ದ ಈತ ನೀರು ಕುಡಿದಿದ್ದು ತಕ್ಷಣ ಗಮನಿಸಿದ ತಾಯಿ ಆತನನ್ನು ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ವೈದ್ಯರು ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದಾರೆನ್ನಲಾಗಿದೆ.
ಈ ಕುರಿತು ಮೃತ ಬಾಲಕನ ತಂದೆ ಗಣಪತಿ ಕೃಷ್ಣಾ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ದೂರನ್ನು ದಾಖಲಿಸಿಕೊಂಡ ಸಬ್ ಇನ್ಸ್ಪೆಕ್ಟರ್ ಪರಮಾನಂದ ಕೊಣ್ಣೂರ ತನಿಖೆ ನಡೆಸಿದ್ದಾರೆ.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.