ಕೊರೋನಾ ಕಾಲದಲ್ಲಿ ಸ್ಥಗಿತವಾಗಿದ್ದ ಸಾರಿಗೆ ಬಸ್ಸುಗಳು ಶೀಘ್ರ ಪುನರಾರಂಭ: ರಾಮಲಿಂಗಾರೆಡ್ಡಿ
Team Udayavani, Mar 11, 2024, 3:06 PM IST
ಶಿರಸಿ: ಕರೋನಾ ಕಾಲದಲ್ಲಿ ಅನಿವಾರ‍್ಯವಾಗಿ ಸ್ಥಗಿತವಾಗಿದ್ದ ಸಾರಿಗೆ ಸಂಸ್ಥೆಯ ಬಸ್ಸಿನ ಎಲ್ಲ ಮಾರ್ಗಗಳನ್ನೂ ಶೀಘ್ರ ಪುನಃರಾಂಭ ಮಾಡಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಅವರು ನಗರದ ಮಾರಿಕಾಂಬಾ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆನಾಡಿದ ಅವರು, ಶಕ್ತಿ ಯೋಜನೆಯ ಪರಿಣಾಮದಿಂದ ಮಹಿಳೆಯರ ಉಚಿತ ಪ್ರವಾಸಕ್ಕೆ ಅನುಕೂಲ ಆಗಿದೆ. ಆದರೆ, ಇದರಿಂದ ಹಲವು ಕಡೆ ಗ್ರಾಮೀಣ ಮಾರ್ಗದಲ್ಲಿ ಶಾಲಾ ಮಕ್ಕಳಿಗೆ ಶಾಲಾ ಸಮಯಕ್ಕೆ ತೆರಳಲು ಸಮಸ್ಯೆ ಆಗುತ್ತಿದೆ. ಇದನ್ನು ಮನಗಂಡ ಸರಕಾರ ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಹೊಸ ಬಸ್ ಖರೀದಿಗೆ ಮುಂದಾಗಿದೆ. ಈಗಾಗಲೇ ವಾಯುವ್ಯ ಸಾರಿಗೆ ಸಂಸ್ಥೆಗೂ 175 ಬಸ್ಸುಗಳನ್ನು ನೀಡಲಾಗಿದ್ದು, ಶೀಘ್ರ ಇನ್ನೂ 200 ಹೊಸ ಬಸ್ಸು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. 2016 ರಲ್ಲಿ 14 ಸಾವಿರ ಜನರ ನೇಮಕಾತಿ ಮಾಡಿಕೊಂಡ ಬಳಿಕ ನಂತರ ಆಗಿರಲಿಲ್ಲ. ಈ ಕಾರಣದಿಂದ ಚಾಲಕರು, ನಿರ್ವಾಹಕರ ಕೊರತೆ ಹೋಗಲಾಡಿಸಲು 9000 ಜನರನ್ನು ಹೊರ ಗುತ್ತಿಗೆಯಲ್ಲಿ ನೇಮಕಾತಿಗೆ ಮುಂದಗಿದೆ ಎಂದೂ ಹೇಳಿದರು.
ಸಾರಿಗೆ ಬಸ್ ವ್ಯವಸ್ಥೆ ಲಾಭದಾಯಕ ವ್ಯವಸ್ಥೆ ಅಲ್ಲ. ಶೇ.೪೦ರಷ್ಟು ಬಸ್‌ಗಳು ನಷ್ಟವಾಗುತ್ತವೆ ಎಂಬುದು ಗೊತ್ತಿದ್ದರೂ ಓಡಿಸಲಾಗುತ್ತದೆ. ಶೇ.35 ರಷ್ಟು ಬಸ್ ಯಾವುದೇ ಲಾಭ, ನಷ್ಟವಿಲ್ಲದೇ ಓಡುತ್ತಿವೆ ಎಂದ ರೆಡ್ಡಿ, ಶಕ್ತಿ ಯೋಜನೆ ಬರುವದಕ್ಕಿಂತ ಮೊದಲು 84 ಲಕ್ಷ ಇತ್ತು ನಿತ್ಯ ಪ್ರಯಾಣಿಸುತ್ತಿದ್ದರು. ಆದರೆ, ಈ ಯೋಜನೆಯ ಬಳಿಕ ನಿತ್ಯ 1.10 ಕೋಟಿ ಇದೆ. ಶಕ್ತಿ ಯೋಜನೆಯ ಹಣ ನಿಗಮಗಳಗೆ ಪಾವತಿಸಲು ವಿಳಂಬ ಆದರೂ ನೀಡಲಾಗುತ್ತದೆ. ಬಹುಕಾಲದಿಂದ ನಿಂತಿದ್ದ ನಿವೃತ್ತ ನೌಕರರಿಗೆ ನೀಡ ಬೇಕಾಗಿದ್ದ ಬಾಕಿ ಹಣ 200 ಕೋಟಿ ರೂ. ಈಗ ನಮ್ಮ ಸರಕಾರದಿಂದ ನೀಡಲು ನಿರ್ಧರಿಸಲಾಗಿದೆ. ನಿಗಮ ವ್ಯಾಪ್ತಿಯಲ್ಲಿ 350 ಇಲೆಕ್ಟ್ರಿಕಲ್ ಬಸ್ ಓಡಿಸಲು ಟೆಂಡರ್ ಕರೆದರೂ ಯಾರೂ ಭಾಗವಹಿಸಲಿಲ್ಲ. ಆದರೆ, ಮುಂದೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಆರ್ಟಿಒ ಕಚೇರಿ ಸಿಬಂದಿ ಕೊರತೆ ಕೂಡ ನೀಗಿಸಲಾಗುತ್ತದೆ ಎಂದರು.
ಶಿರಸಿ ಹಳೆ ಬಸ್ ನಿಲ್ದಾಣದ ಹೊಸ ಕಟ್ಟಡ ಮೇ ಕೊನೆಯೊಳಗೆ ಅಂತಿಮವಾಗಲಿದೆ. ಸಿದ್ದಾಪುರದಲ್ಲಿ ಜಾಗದ ಕೊರತೆ ಉಂಟಾಗಿದ್ದರಿಂದ ಸಮಸ್ಯೆ ಆಗಿದೆ.
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಇದನ್ನೂ ಓದಿ: ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆತಂದ ಅಡ್ಯನಡ್ಕ ಪೊಲೀಸರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.