ದಲ್ಲಾಳಿ ಮುಕ್ತ ಮಾರುಕಟ್ಟೆ ಒದಗಿಸಲು ಯತ್ನ
ಮಾವಿನ ಹಣ್ಣು ಕೆಡದಂತೆ ರಕ್ಷಿಸಲು ಶೀತಲಿಕರಣ ಘಟಕದ ವ್ಯವಸ್ಥೆಗೆ ಶೀಘ್ರ ಕ್ರಮ: ಸಚಿವ ಹೆಬ್ಟಾರ್
Team Udayavani, May 22, 2022, 2:10 PM IST
ಅಂಕೋಲಾ: ಬೆಳೆಗಾರರ ಸಮಿತಿ ಆಶ್ರಯದಲ್ಲಿ ದಲ್ಲಾಳಿ ಮುಕ್ತ ಮಾರುಕಟ್ಟೆ ಒದಗಿಸುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಮಾವು ಮೇಳವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ ಉದ್ಘಾಟಿಸಿ ಎರಡು ದಿನಗಳ ಮೇಳಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ಅಂಕೋಲಾದ ಕರಿ ಈಶಾಡ ಮಾವಿನ ಹಣ್ಣು ಇಲ್ಲಿಯ ಮಣ್ಣಿನ ವಿಶೇಷ ಗುಣ ಹೊಂದಿದೆ. ಇಲ್ಲಿ ಬೆಳೆಯುವ ಕರಿ ಈಶಾಡದ ಸವಿ ಎಲ್ಲಿಯೂ ಸಿಗುವುದಿಲ್ಲ. ಕರಿ ಈಶಾಡ ಮತ್ತು ಬೇರೆ ಬೇರೆ ಜಾತಿಯ ಮಾವಿನ ಹಣ್ಣಿಗೆ ಸೂಕ್ತ ಮಾರುಕಟ್ಟೆ ಸಿಗಬೇಕು. ತಾಲೂಕಿನಾದ್ಯಂತ ಹೇರಳವಾಗಿ ಬೆಳೆಯುವ ವಿವಿಧ ಜಾತಿಯ ಅನೇಕ ಮಾವಿನ ಹಣ್ಣುಗಳನ್ನು ಕೆಡದಂತೆ ರಕ್ಷಿಸಲು ಶೀತಲಿಕರಣ ಘಟಕದ ವ್ಯವಸ್ಥೆಯಾಗಬೇಕಿದೆ ಎಂದರು.
ಬೆಳೆಗಾರರ ಸಮಿತಿ ಅಧ್ಯಕ್ಷ ನಾಗರಾಜ ನಾಯಕ ಪ್ರಾಸ್ತಾವಿಕ ಮಾತನಾಡಿ ಇಲ್ಲಿನ ಮಾವಿನ ಹಣ್ಣುಗಳು ಅತ್ಯಂತ ಜನಪ್ರಿಯತೆ ಪಡೆದಿದ್ದರೂ ಮಾರುಕಟ್ಟೆಯ ಕೊರತೆ ಇದೆ. ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಲಾಭಾಂಶವೆಲ್ಲ ದಲ್ಲಾಳಿಗಳ ಪಾಲಾಗುತ್ತಿದೆ. ಅಂಕೋಲಾದಲ್ಲಿ ಹಣ್ಣುಗಳನ್ನು ಸಂರಕ್ಷಿಸಲು ಒಂದು ಐಸ್ ಪ್ಲಾಂಟ್ ಅವಶ್ಯಕತೆ ಇದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ ಅಧ್ಯಕ್ಷತೆ ವಹಿಸಿ, ಮಾವು ಮೇಳದ ಆಯೋಜನೆ ಪ್ರಾಯೋಗಿಕವಾಗಿದ್ದರೂ ಮುಂದಿನ ದಿನಗಳಲ್ಲಿ ಇದು ರೈತರಿಗೆ ಅನುಕೂಲ ಮಾಡಿಕೊಡಲಿದೆ ಎಂದರು.
ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ಭಾಸ್ಕರ ನಾರ್ವೇಕರ, ಉಪಾಧ್ಯಕ್ಷ ಹನುಮಂತ ಗೌಡ, ದೇವರಾಯ ನಾಯಕ, ಜೈಹಿಂದ ಸಂಸ್ಥೆ ಅಧ್ಯಕ್ಷ ಪದ್ಮನಾಭ ಪ್ರಭು ಉಪಸ್ಥಿತರಿದ್ದರು.
ಹನುಮಂತ ಗೌಡ ವಿಶೇಷವಾಗಿ ತಯಾರಿಸಿದ ಮಾವಿನ ಹಣ್ಣಿನ ಹಾರವನ್ನು ಶಿವರಾಮ ಹೆಬ್ಟಾರರಿಗೆ ಹಾಕಿ ಸ್ವಾಗತಿಸಿದರು. ಬೆಳೆಗಾರರ ಸಮಿತಿ ಕಾರ್ಯದರ್ಶಿ ರಾಮಚಂದ್ರ ಹೆಗಡೆ ನಿರೂಪಿಸಿದರು. ರಾಘು ಕಾಕರಮಠ ವಂದಿಸಿದರು.
ಮಾವು ಮೇಳದಲ್ಲಿ ಅಂಕೋಲೆಯ ಪ್ರಸಿದ್ಧ ಕರಿ ಈಶಾಡು ಹಣ್ಣಿನ ಜೊತೆಗೆ ಆಪೂಸ್, ಚಾಲ್ತಿ, ನೀಲಂ, ರತ್ನಾಗಿರಿ ಆಪೂಸ್, ತೋತಾಪುರಿ ಸೇರಿದಂತೆ ವಿವಿಧ ಜಾತಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿದ್ದವು. ಕಸಿ ಮಾಡಿದ ಮಾವಿನ ಗಿಡಗಳು ಮಾರಾಟವಾದವು. ಮಾವಿನ ಉಪ ಉತ್ಪನ್ನಗಳಾದ ಮಾವಿನ ಉಪ್ಪಿನ ಕಾಯಿ, ಮಾವಿನ ಹುಳಿ, ಹಪ್ಪಳ ಮತ್ತಿತರ ಉತ್ಪನ್ನಗಳು ಗಮನ ಸೆಳೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.