ತುಂಬೇಬೀಳು: ಮೇಲ್ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ
Team Udayavani, Dec 25, 2019, 3:18 PM IST
ಹೊನ್ನಾವರ: ಕಳೆದ ಕೆಲವಾರು ವರ್ಷಗಳಿಂದ ಮಂಕಿ ಗ್ರಾಮದ ತುಂಬೆಬೀಳು ಗ್ರಾಮದಲ್ಲಿ ಜನಸಂಚಾರವಿರುವ ಮುಖ್ಯ ರಸ್ತೆ ಮೇಲೆ ಅಡ್ಡ ಹಾದು ಹೋಗುವ ರೇಲ್ವೆ ಹಳಿಗೆ ಒಂದು ಸಣ್ಣ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲಿಯೇ ಇರುವ ಗ್ರಾಮದ ರಸ್ತೆಗೆ ಅಡ್ಡವಾಗಿ ರೇಲ್ವೆ ಹಳಿ ಹಾದು ಹೋಗಿದೆ. ಈ ರಸ್ತೆಯ ಆಸುಪಾಸು ನಾಲ್ಕು ಹಳ್ಳಿಗಳಿದ್ದು ಸುಮಾರು ಎರಡು ಸಾವಿರ ಜನರ ವಾಸ್ತವ್ಯವಿದೆ. ಗ್ರಾಮಸ್ಥರು ಸಂಚರಿಸುವ ಈ ರಸ್ತೆಗೆ ಅಡ್ಡವಾಗಿ ರೇಲ್ವೇ ಹಳಿ ಇದ್ದರಿಂದ ರೈಲು ಬರುವಾಗೆಲ್ಲ ಸಹಜವಾಗಿಯೇ ಗೇಟ್ ಹಾಕಲಾಗುತ್ತದೆ. ಪದೇ ಪದೇ ರೇಲ್ವೇ ಗೇಟ್ ಹಾಕುವುದರಿಂದ ಪಾದಚಾರಿಗಳಿಗೆ ಸುಮಾರು ಒಂದು ತಾಸು ವ್ಯರ್ಥವಾಗುತ್ತದೆ.
ಇದರಿಂದಾಗಿ ಕಳೆದ 20 ವರ್ಷಗಳಿಂದ ಜನರು ಇದೇ ಬವಣೆ ಅನುಭವಿಸುತ್ತಿದ್ದು ಸಣ್ಣ ಮೇಲ್ಸೇತುವೆಗಾಗಿ ಹಿರಿಯ ಅಧಿಕಾರಿಗಳಿಗೆ ಮಾಡಿಕೊಂಡ ಮನವಿಗಳೆಲ್ಲ ವ್ಯರ್ಥವಾಗಿವೆ. ಕೆಲವಾರು ವರ್ಷಗಳಿಂದ ರೇಲ್ವೆ ಇಲಾಖೆ ಇಲ್ಲಿ ಸಣ್ಣ ಮೇಲ್ಸೇತುವೆ ನಿರ್ಮಿಸಲು ಸರ್ವೇ ಪ್ರಕ್ರಿಯೆ ನಡೆಸಿತ್ತಾದರೂ ಅನಂತರ ಅದು ನನೆಗುದಿಗೆ ಬಿತ್ತು. ಈ ಬಗ್ಗೆ ಮತ್ತೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರಾದ ಗಜಾನನ ನಾಯ್ಕ, ನಾಗಮ್ಮ ಸುಬ್ಬಯ್ಯ ನಾಯ್ಕ, ಗಣಪತಿ ನಾಯ್ಕ ಕೋಟಾ, ಕೇಶವ ನಾಯ್ಕ ತುಂಬೆಬೀಳು, ಸುಬ್ರಹ್ಮಣ್ಯ ಜಟ್ಟ ಗೌಡ, ಗುರುರಾಜ ವೆಂಕಟೇಶ ಗೌಡ, ಸತೀಶ ಕೃಷ್ಣ ನಾಯ್ಕ, ದುರ್ಗು ಕುಪ್ಪು ನಾಯ್ಕ, ಭಾಸ್ಕರ ನಾರಾಯಣ ಗೌಡ, ದಿನೇಶ ನಾರಾಯಣ ನಾಯ್ಕ, ಸುಶೀಲ ಕೃಷ್ಣ ಮೊಗೇರ, ವಿದ್ಯಾ ಶಂಕರ ದೇವಾಡಿಗ, ಪದ್ಮಾವತಿ ಮೋಹನ ಜಾಯ್ಕ, ದೇವಕಿ ನಾಯ್ಕ ಮನವಿ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.