Dandeli : ಸರಣಿ ಕಳ್ಳತನ ಪ್ರಕರಣ… ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
Team Udayavani, Sep 30, 2024, 4:52 PM IST
ದಾಂಡೇಲಿ: ನಗರದ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿಗಳಾದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ ಘಟನೆ ಸೋಮವಾರ(ಸೆ. 30) ನಡೆದಿದೆ.
ಇದೇ ಸೆ: 19 ರಂದು ನಗರದ ಲಿಂಕ್ ರಸ್ತೆಯಲ್ಲಿರುವ ಅಭಿಷೇಕ್ ಕಾಳೆ ಮಾಲಕತ್ವದ ಮೆಡಿಕಲ್ ಅಂಗಡಿಯೊಳಗಿದ್ದ ನಗದು 4 ಲಕ್ಷ ರೂಪಾಯಿ ಮತ್ತು ಚಿನ್ನದ ಆಭರಣಗಳು, ಇದೇ ಕಟ್ಟಡದಲ್ಲಿರುವ ಪಕ್ಕದ ಶರಣ್.ಸಿ.ಅರಳಿಯವರ ಕಿರಾಣಿ ಅಂಗಡಿಯಿಂದ 5 ರಿಂದ 50 ಸಾವಿರ ರೂಪಾಯಿ ನಗದು, ಅಲ್ಲೇ ಹತ್ತಿರದಲ್ಲಿರುವ ವಿಷ್ಣು ಕಲಾಲ್ ಅವರು ನಡೆಸುತ್ತಿರುವ ಮೈಲಾರ ವೈನ್ ಸೆಂಟರಿನಿಂದ ಸರಿ ಸುಮಾರು 35 ಸಾವಿರ ನಗದು ಹಾಗೂ ವಿವಿಧ ಮದ್ಯದ ಬಾಟಲಿಗಳನ್ನು ಮತ್ತು ಮೈಲಾರ ವೈನ್ ಸೆಂಟರಿನ ಮುಂಭಾಗದಲ್ಲಿರುವ ಕಿರಣ್ ಕರಡಿ ಅವರ ಎಲ್ ಜಿ ಕಿರಾಣಿ ಅಂಗಡಿಗೆ ನುಗ್ಗಿ ರೂ : 2,000/- ನಗದನ್ನು ಕಳವು ಮಾಡಿದ್ದ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ದಾಂಡೇಲಿಯ ಡಿವೈಎಸ್ಪಿಯವರ ಮಾರ್ಗದರ್ಶನದಡಿ ದಾಂಡೇಲಿಯ ಸಿಪಿಐ ಅವರ ನೇತೃತ್ವದಲ್ಲಿ ನಗರ ಠಾಣೆಯ ಪಿಎಸ್ಐ ಗಳು ಮತ್ತು ಪೊಲೀಸರ ತಂಡವೊಂದನ್ನು ರಚಿಸಿ ಪ್ರಕರಣವನ್ನು ಅತ್ಯಲ್ಪ ಅವಧಿಯಲ್ಲೆ ಭೇದಿಸಲಾಗಿದೆ.
ಬಂಧಿತ ಆರೋಪಿಗಳಿಬ್ಬರು ಅಂತರ್ ರಾಜ್ಯ ಕಳ್ಳರೆಂದು ತಿಳಿದು ಬಂದಿದ್ದು, ಈವರೆಗೆ ಅಂದಾಜು 19 ವಿವಿಧ ಕಳ್ಳತನ ಪ್ರಕರಣಗಳು ಇವರ ಮೇಲೆ ಬೇರೆ ಬೇರೆ ಕಡೆ ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ಒಬ್ಬ ಹುಬ್ಬಳ್ಳಿ ಮೂಲದ ಹಸನ್ ಸಾಬ್ ಬೇಗ್ ಮತ್ತು ಹಳಿಯಾಳದ ಆಸೀಪ್ ಬೇಗ್ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್‌ಬುಕ್ ಖಾತೆ ಹ್ಯಾಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.