Gokarna ಬೀಚಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಸಾವು
Team Udayavani, Nov 29, 2024, 11:53 AM IST
ಗೋಕರ್ಣ: ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ 8 ಜನರಲ್ಲಿ ಇಬ್ಬರು ಈಜಲು ತೆರಳಿ ಮೃತಪಟ್ಟ ಘಟನೆ ನ.28ರ ಗುರುವಾರ ಸಂಜೆ ಮಿಡ್ಲ್ ಬೀಚ್ನಲ್ಲಿ (ಗಂಗಾವಳಿ- ಗೋಕರ್ಣ ಮಧ್ಯದಲ್ಲಿ) ನಡೆದಿದೆ.
ಬೆಂಗಳೂರು ವಿಜಯನಗರ ನಿವಾಸಿಗಳಾದ ಪ್ರತೀಕ ಪಾಲಾಕ್ಷಪ್ಪ (32), ರವಿ ನಾಗರಾಜ (26) ಮೃತ ದುರ್ದೈವಿಗಳು.
ಗುರುವಾರ, ಶುಕ್ರವಾರ ಕಚೇರಿಗೆ ರಜೆ, ಶನಿವಾರ, ಭಾನುವಾರ ಸರ್ಕಾರಿ ರಜೆ ಇರುವುದರಿಂದ ನಾಲ್ಕು ದಿನದ ರಜೆ ನಿಮಿತ್ತ 8 ಗೆಳೆಯರು ಗೋಕರ್ಣಕ್ಕೆ ಗುರುವಾರ ಬೆಳಗ್ಗೆ ಆಗಮಿಸಿದ್ದರು. ಪ್ರಕೃತಿ ರೆಸಾರ್ಟ್ನಲ್ಲಿ ರೂಮ್ ಮಾಡಿಕೊಂಡಿದ್ದ 8 ಜನರ ಪೈಕಿ ಐದು ಜನ ಈಜಾಡಲು ತೆರಳಿದ್ದರು.
ಅದರಲ್ಲಿ ಮೂವರು ಸೊಂಟದ ಅಳತೆ ನೀರಿನಲ್ಲಿದ್ದರೆ, ಇನ್ನಿಬ್ಬರು ಈಜಾಡುತ್ತ ಮುಂದೆ ತೆರಳಿದ್ದರು. ಆದರೆ ಕಡಲ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರು ಪಾಲಾಗಿದ್ದರು. ನಂತರ ಸ್ಥಳದಲ್ಲಿದ್ದ ಗೆಳೆಯರು ಕೂಗಿಕೊಂಡಾಗ ಅಕ್ಕಪಕ್ಕ ದವರು ಬಂದು ಕಾಪಾಡುವಷ್ಟರಲ್ಲಿ ಮೃತಪಟ್ಟಿದ್ದರು.
ಸ್ಥಳದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ನೀರಿನಿಂದ ಶವವನ್ನು ಮೇಲಕ್ಕೆ ತಂದಿದ್ದಾರೆ. ಗೆಳೆಯರ ಆಕ್ರಂದನ ಮುಗಿದು ಮುಟ್ಟಿತ್ತು.
ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.