“ಉದಯವಾಣಿ’ ಹಿರಿಯ ಪತ್ರಕರ್ತ ಜೀಯುಗೆ ಅಮೃತಾಭಿನಂದನೆ
Team Udayavani, Dec 14, 2022, 6:43 AM IST
ಭಟ್ಕಳ: ಪತ್ರಕರ್ತರಾಗಿ ಐವತ್ತು ವಸಂತ ಹಾಗೂ 75 ವರ್ಷ ಪೂರೈಸಿದ ಜೀಯು ಖ್ಯಾತಿಯ “ಉದಯವಾಣಿ’ ಪತ್ರಿಕೆಯ ಹಿರಿಯ ವರದಿಗಾರ ಗಜಾನನ ಉಮಾ ಮಹೇಶ್ವರ ಭಟ್ಟರಿಗೆ ಮಂಗಳವಾರ ಅಮೃತಾಭಿನಂದನೆ ಸಲ್ಲಿಸಲಾಯಿತು.
ಅಭಿವೃದ್ಧಿಪರ ವರದಿ
ಕರಾವಳಿಯ ದ.ಕ. ಹಾಗೂ ಉಡುಪಿ ಜಿಲ್ಲೆಗೆ ಹೋಲಿಸಿದರೆ ಮೊದಲಿನಿಂದಲೂ ಉತ್ತರ ಕನ್ನಡ ಸ್ವಲ್ಪ ಹಿಂದುಳಿದಿದೆ. ಆ ಭಾಗದಲ್ಲಿ ಆದಷ್ಟು ಅಭಿವೃದ್ಧಿ ಇಲ್ಲಿ ಆಗಿಲ್ಲ. ಆದರೆ ಜೀಯು ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಶೋತ್ತರ ಪರ ವರದಿಗಳನ್ನು ಬರೆಯುತ್ತಾ ಜನರ ಧ್ವನಿಯಾಗಿರುವುದು ಈ ಭಾಗದ ಜನರ ಹೆಮ್ಮೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ್ ಯು. ಪೈ ಅವರು ಜೀಯು ದಂಪತಿಗೆ ಶುಭ ಹಾರೈಸಿದರು.
ಸಾಹಿತಿ ಗಜಾನನ ಶರ್ಮ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಆರ್.ಎಸ್. ರಾಯ್ಕರ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನ ಸಮಿತಿ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ ಉಪಸ್ಥಿತರಿದ್ದರು.
“ಸಾಮಾಜಿಕ ಮನ್ನಣೆಯಿಂದ ಸಾರ್ಥಕತೆ’
ಮನುಷ್ಯನ ಜೀವನದಲ್ಲಿ ಸಾರ್ಥಕತೆ ಎನ್ನುವುದು ಅವನು ಬದುಕುವ ಸಮಾಜದಲ್ಲಿ ಯಾವ ಸ್ಥಾನ ಗಳಿಸಿದ್ದಾನೆ ಎನ್ನುವುದರಿಂದ ನಿರ್ಣಯಿಸಲ್ಪ ಡುತ್ತದೆ. ಈ ಕಾರ್ಯಕ್ರಮದಲ್ಲಿ ಸೇರಿದ ಜನತೆಯೇ ಜೀಯು ಅವರು ಬದುಕಿನಲ್ಲಿ ಸಮಾಜದಲ್ಲಿ ಗಳಿಸಿದ ಸ್ಥಾನ ತೋರಿಸುತ್ತದೆ ಎಂದು “ತರಂಗ’ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರು ಹೇಳಿದರು.
“ಉದಯವಾಣಿ’ ರಾಜ್ಯದ ಹೆಮ್ಮೆ
ಪೈ ಕುಟುಂಬ ರಾಜಧಾನಿ ಬೆಂಗಳೂರು ಬಿಟ್ಟು ಮಣಿಪಾಲ ಎನ್ನುವ ಚಿಕ್ಕ ಹಳ್ಳಿಯಿಂದ ರಾಜ್ಯ ಮಟ್ಟದ ಪತ್ರಿಕೆ “ಉದಯವಾಣಿ’ ಯನ್ನು ಆರಂಭಿಸಿ ಕರ್ನಾಟಕದ ಹೆಮ್ಮೆಯ ಪತ್ರಿಕೆಯನ್ನಾಗಿ ಬೆಳೆಸಿದೆ. ಉತ್ತಮ ಮುದ್ರಣ ಹಾಗೂ ಮಾಹಿತಿ-ಹೂರಣಗಳಿಂದ “ಉದಯವಾಣಿ’ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ. ಪೈ ಸಹೋದರರ ಶ್ರಮ ಅನನ್ಯವಾದದ್ದು. ಇಂದು ಮುದ್ರಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಮಣಿಪಾಲ ಜಗತ್ತಿನಲ್ಲಿಯೇ ಗುರುತಿಸಿಕೊಂಡಿದೆ. ಅಲ್ಲದೇ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಗೂ ಇವರ ಕೊಡುಗೆ ದೊಡ್ಡದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.