ವನಶ್ರೀನಗರದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ತಂದಿಟ್ಟ ಯುಜಿಡಿ ಕಾಮಗಾರಿ
Team Udayavani, Sep 3, 2021, 5:41 PM IST
ದಾಂಡೇಲಿ : ಸದಾ ಒಂದಲ್ಲ ಒಂದು ಸಮಸ್ಯೆಗಳ ಮೂಲಕವೆ ಗಮನ ಸೆಳೆದ ಯುಜಿಡಿ ಕಾಮಗಾರಿಯಂತೂ ನಗರದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ, ಕಾಡುತ್ತಿದೆ, ಮುಂದೆಯೂ ಕಾಡಬಹುದಾದ ಸಾಧ್ಯತೆ ಕಂಡುಬರುವಂತಾಗಿದೆ. ನಗರದ ಬಹುತೇಕ ಸುಂದರ ರಸ್ತೆಗಳು ಹದಗೆಡುವಲ್ಲಿ ಯುಜಿಡಿ ಕಾಮಗಾರಿಯ ಪಾತ್ರ ಬಹುಮುಖ್ಯವಾಗಿದೆ. ಸಾರ್ವಜನಿಕ ಜನಜೀವನಕ್ಕೆ ದೈನಂದಿನವಾಗಿ ಸಮಸ್ಯೆಗಳ ರೂಪದಲ್ಲಿ ಕಾಡುತ್ತಿರುವ ಯುಜಿಡಿ ಕಾಮಗಾರಿ ಶುಕ್ರವಾರ ನಗರದ ವನಶ್ರೀನಗರದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ತಂದೊಡ್ಡಿದೆ.
ಅಂದ ಹಾಗೆ ಸಾರ್ವಜನಿಕರ ಅಹವಾಲು ಸಭೆ ಕರೆಯದೆ ಕಳೆದ ಮೂರ್ನಾಲ್ಕು ವರ್ಷಗಳಿಂದ ನಗರದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿದ್ದು, ನಗರದೆಲ್ಲೆಡೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಯುಜಿಡಿ ಕಾಮಗಾರಿಯಿಂದಾಗಿ ನಗರದ ಅನೇಕ ರಸ್ತೆಗಳು ಅಸ್ತವ್ಯಸ್ತಗೊಂಡು ಸಂಚಾರಕ್ಕೆ ಸಂಕಷ್ಟವಾಗಿರುವುದಲ್ಲದೆ, ಇತ್ತ ಯುಜಿಡಿ ಪೈಪ್ಲೈನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆಯುವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಗಳು ಒಡೆದು ಹೋಗುವುದು ಸಾಮಾನ್ಯ ಎಂಬಂತಾಗಿದೆ.
ಇದನ್ನೂ ಓದಿ:ಗೋವಾ: ಕ್ರೇನ್ ಬಿಡಿಭಾಗ ತುಂಡಾಗಿ ಇಬ್ಬರು ಕಾರ್ಮಿಕರು ಸಾವು
ಶುಕ್ರವಾರ ಬೆಳ್ಳಂ ಬೆಳಗ್ಗೆ ನಗರದ ವನಶ್ರೀನಗರದಲ್ಲಿ ಯುಜಿಡಿ ಕಾಮಗಾರಿಯಿಂದಾಗಿ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ಸುಮಾರು ಒಂದು ಗಂಟೆಗಳವರೆಗೆ ಕುಡಿಯುವ ನೀರು ರಸ್ತೆಯಲ್ಲಿ ಹರಿದುಕೊಂಡು ಹೋಗಿದೆ.
ನಗರದಲ್ಲಿ ಮೊದಲೆ ಡೆಂಗ್ಯೂ, ಹಳದಿ ಕಾಮಾಲೆ ಬಹು ಪ್ರಮಾಣದಲ್ಲಿ ನಗರದ ಜನತೆಯನ್ನು ತಲ್ಲಣಗೊಳಿಸಿದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಹೋದ ತಕ್ಷಣವೇ ದುರಸ್ತಿ ಮಾಡಬೇಕಾದ ಅನಿವಾರ್ಯತೆಯಿದೆ. ದುರಸ್ತಿಗೆ ವಿಳಂಭವಾಗುತ್ತಿದ್ದಂತೆಯೆ ಒಡೆದು ಹೋದ ಪೈಪಿನೊಳಗೆ ಅಶುದ್ದ ನೀರು, ತ್ಯಾಜ್ಯಗಳು ಒಳಗಡೆ ಹೋಗುವುದರಿಂದ, ಈ ನೀರನ್ನು ಕುಡಿಯುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ನಿರ್ಮಾಣವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ವನಶ್ರೀನಗರದಲ್ಲಿ ಕುಡಿಯುವ ನೀರಿನ ಪೈಪ್ ಒಡೆದ ಸಂದರ್ಭದಲ್ಲೆ ಯುಜಿಡಿ ಕಾಮಗಾರಿ ಸಂಸ್ಥೆಯವರು ಒಡೆದ ಪೈಪನ್ನು ದುರಸ್ತಿ ಮಾಡುತ್ತಿದ್ದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ತ್ಯಾಜ್ಯವೆಲ್ಲ ಒಡೆದ ಪೈಪಿನೊಳಗಡೆ ಸೇರಿದ ಮೇಲೆ ದುರಸ್ತಿ ಮಾಡಿದಂತಾಗಿದೆ ಇಲ್ಲಿಯ ವಾಸ್ತವಿಕ ಸ್ಥಿತಿ.
ಇನ್ನೂ ಯುಜಿಡಿ ಕಾಮಗಾರಿಯನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಬೇಕಾದ ಒಳಚರಂಡಿ ಮಂಡಳಿಯ ಅಧಿಕಾರಿಗಳು ನಗರಕ್ಕೆ ಭೇಟಿ ಕೊಡುತ್ತಿದ್ದಾರೆಯೆ? ಭೇಟಿ ಕೊಡುತ್ತಿದ್ದಲ್ಲಿ ಇಂಥಹ ಸಮಸ್ಯೆಗಳು ಸೃಷ್ಟಿಯಾಗಲು ಸಾಧ್ಯವೆ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ಒಟ್ಟಿನಲ್ಲಿ ಕಾಮಗಾರಿ ಆರಂಭವಾದಾಗಿನಿಂದ ಸದಾ ಸಮಸ್ಯೆಗಳನ್ನು ನೀಡುತ್ತಾ ಬಂದಿರುವ ಯುಜಿಡಿ ಕಾಮಗಾರಿ ಮುಗಿದ ಬಳಿಕವೂ ನಗರದ ನಾಗರೀಕರಿಗೆ ಸಮಸ್ಯೆಯನ್ನು ಉಂಟಾದರೆ ಅದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ನಗರದ ಜನತೆಯನ್ನು ಸದಾ ಕಾಡತೊಡಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.