ಶಾಶ್ವತ ಯೋಜನೆ ಜಾರಿ ಮಾಡಲು ಆಗ್ರಹ
Team Udayavani, Nov 26, 2019, 3:39 PM IST
ದಾಂಡೇಲಿ: ನಗರದಲ್ಲಿ ಒಳ ಚರಂಡಿ ಯೋಜನೆ ಕಾಮಗಾರಿ ಪ್ರಾರಂಭಿಸುವ ಮುನ್ನ ಸಾರ್ವಜನಿಕರ ಅಹವಾಲು ಸ್ವೀಕರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ನಗರ ಬಿಜೆಪಿ ಘಟಕದವರು ಸೋಮವಾರ ನಗರಸಭಾ ಪೌರಾಯುಕ್ತ ಡಾ| ಸೈಯದ್ ಜಾಹೇದಾಲಿ ಮತ್ತು ಜಿಲ್ಲಾಧಿಕಾರಿ ಪರವಾಗಿ ತಹಶೀಲ್ದಾರ್ ಶೈಲೇಶ ಪರಮಾನಂದಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ, ಕುಮಟಾ, ಬೈಲಹೊಂಗಲ, ಹುನಗುಂದ ಸೇರಿದಂತೆ ಹಲವು ನಗರಗಳಲ್ಲಿ ಒಳಚರಂಡಿ ಯೋಜನೆ ಯಶಸ್ವಿಯಾಗಿಲ್ಲ. ಗದಗ ನಗರದಲ್ಲಿ ಕಾಮಗಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಎಲ್ಲ ಕಾರಣಗಳಿಗಾಗಿ ಜನರು ಯೋಜನೆ ವಿರೋಧಿಸುತ್ತಿದ್ದಾರೆ ಎಂದರು.
ಯೋಜನೆ ಬಗ್ಗೆ ಸರಿಯಾದ ಮಾಹಿತಿಯನ್ನು ನಗರದ ನಿವಾಸಿಗಳಿಗೆ ನೀಡದ ಕಾರಣ ಸಂಬಂಧಿಸಿದ ಇಲಾಖೆಯವರು ಸಾರ್ವಜನಿಕ ಸಭೆ ಕರೆದು ಅಹವಾಲು ಪಡೆಯಬೇಕು. ಇದಾದ ನಂತರ ಯೋಜನೆಯಲ್ಲಿ ಬದಲಾವಣೆ ಮಾಡಬೇಕೆಂದರೆ ಮಾಡಿ, ನಗರಕ್ಕೆ ಶಾಶ್ವತಕಾಯಂ ಯಶಸ್ವಿ ಯೋಜನೆ ಜಾರಿ ಮಾಡಿಕೊಡಬೇಕು ಎಂದರು. ಕಾಮಗಾರಿ ನಡೆಸಲು ವಿರೋಧ ಮಾಡುತ್ತಿದ್ದೇವೆ ಹೊರತು, ಯೋಜನೆ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಸಾರ್ವಜನಿಕರ ಸಭೆ ಕರೆದು ಎಲ್ಲ ಸಮಸ್ಯೆಗಳ ಕುರಿತುಹಾಗೂ ಯೋಜನೆ ಚಿತ್ರಣ, ನೀಲನಕ್ಷೆ ಮತ್ತು ಸಂಪೂರ್ಣ ಮಾಹಿತಿ ನೀಡಬೇಕು. ಒಳಚರಂಡಿ ಯೋಜನೆಯಿಂದ ಸಾರ್ವಜನಿಕರಿಗೆ ಆಗುವ ಸಮಸ್ಯೆ ಬಗೆಹರಿಸುವ ಸಂಪೂರ್ಣ ಜವಾಬ್ದಾರಿ ವಹಿಸುವ ಬಗ್ಗೆ ಲಿಖೀತ ಭರವಸೆಯನ್ನು ಈ ಯೋಜನೆಗೆ ಸಂಬಂಧಪಟ್ಟವರು ಸರ್ಕಾರಕ್ಕೆ ಕೊಡಬೇಕು ಎಂದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ನಗರಸಭಾ ಸದಸ್ಯ ನರೇಂದ್ರ ಚೌಹಾಣ್, ಕಾರ್ಯದರ್ಶಿ ಸುಭಾಷ ಅರವೇಕರ, ಪಕ್ಷದ ಮುಖಂಡರಾದ ಸುಧಾಕರ ರೆಡ್ಡಿ, ಅಶೋಕ ಪಾಟೀಲ, ಚಂದ್ರಕಾಂತ ಕ್ಷೀರಸಾಗರ, ಟಿ.ಎಸ್. ಬಾಲಮಣಿ, ಗುರು ಮಠಪತಿ, ಮಂಜುನಾಥ ಪಾಟೀಲ, ಶಾರದಾ ಪರಶುರಾಮ, ಹುದ್ದಾರ, ದೇವಕ್ಕಾ ಕೆರೆಮನೆ, ನಗರಸಭಾ ಸದಸ್ಯರಾದ ಬುಧವಂತಗೌಡಾ ಪಾಟೀಲ, ರೋಷನ್‌ಜಿತ್ ಶಿವದಾಸನ್, ದಶರಥ ಬಂಡಿವಡ್ಡರ, ವಿಷ್ಣು ವಾಜವೆ, ವಿಜಯ ಕೊಲೆಕರ, ಮಹಾದೇವಿ ಭದ್ರಶೆಟ್ಟಿ, ರಮಾರವೀಂದ್ರ, ಪದ್ಮಜಾ ಜನ್ನು, ಶೋಭಾ ಜಾಧವ,ಅನ್ನಪೂರ್ಣಾ ಬಾಗಲಕೋಟೆ, ರಿಯಾಜ್ ಖಾನ್ ಹಾಗೂ ಪಕ್ಷದ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.