ಸೇವಾ ಭದ್ರತೆ ಒದಗಿಸಲು ಆಗ್ರಹ
Team Udayavani, Sep 6, 2020, 3:53 PM IST
ಸಿದ್ದಾಪುರ: ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಲಾಕ್‌ಡೌನ್ ಅವಧಿಯ ವೇತನ ಮತ್ತು ಪಶ್ಚಿಮ ಬಂಗಾಳ ಮಾದರಿಯ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಅತಿಥಿ ಉಪನ್ಯಾಸಕರು ಮಾರ್ಚ್ ನಿಂದ 6 ತಿಂಗಳ ವೇತನವಿಲ್ಲದೇ ಆರ್ಥಿಕ ಸಂಕಷ್ಟದಿಂದ ಬಳಲುವಂತಾಗಿದೆ. ಹದಿನೈದಕ್ಕೂ ಹೆಚ್ಚು ಉಪನ್ಯಾಸಕರು ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಅಕ್ಟೋಬರ್ 1 ರಿಂದ ತರಗತಿಗಳು ಪ್ರಾರಂಭ ವಾಗುತ್ತಿವೆ. ಅತಿಥಿ ಉಪನ್ಯಾಸಕರನ್ನು ಕರ್ತವ್ಯಕ್ಕೆ ಹಾಜರಿಮಾಡಿಕೊಳ್ಳುವ ಕುರಿತು ಕಾಲೇಜು ಶಿಕ್ಷಣ ಇಲಾಖೆ ಗಮನಹರಿಸುತ್ತಿಲ್ಲ. ತಾವು ಶಿಕ್ಷಣ ಸಚಿವರಿದ್ದಾಗ ಜೆಒಡಿಸಿ ಶಿಕ್ಷಕರನ್ನು ಖಾಯಂ ಮಾಡಿದ್ದೀರಿ. ಅದೇ ರೀತಿ ಅತಿಥಿ ಉಪನ್ಯಾಸಕರಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಸಿಬಿಸಿಎಸ್ ಪಠ್ಯ ಕ್ರಮದಲ್ಲಿ ಕಂಪ್ಯೂಟರ್ ಅನ್ವಯ ವಿಜ್ಞಾನ ವಿಷಯವನ್ನು ಎಲ್ಲಾ ಸೆಮಿಸ್ಟರ್‌ಗಳಿಗೆ ಅಳವಡಿಸುವಂತೆ,ವಾಣಿಜ್ಯ ವಿಭಾಗದ ಎಲ್ಲಾ ಸೆಮಿಸ್ಟರ್‌ಗಳಿಗೆ ಕಂಪ್ಯೂಟರ್ ವಿಷಯವನ್ನು ಕಡ್ಡಾಯಗೊಳಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಕೆಲವು ಕಂಪ್ಯೂಟರ್ ಅತಿಥಿ ಉಪನ್ಯಾಸಕರು ವಿಧಾನಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.