Uttara Kannada: ಕವಿತೆ ತಾಯಿ ಇದ್ದ ಹಾಗೆ: ವೀರಲಿಂಗನಗೌಡ
ಯುವಕವಿಗಳು ಸಕ್ರಿಯರಾಗಿರುವುದು ಸಾಹಿತ್ಯದ ಸಮೃದ್ಧತೆಯ ಸೂಚನೆ
Team Udayavani, Sep 13, 2023, 6:47 PM IST
ಸಿದ್ದಾಪುರ: ಕವಿತೆ ರಚನೆ ಸರಳ ದಾರಿಯಲ್ಲ. ಅದು ದಕ್ಕಬೇಕಾದರೆ ಕಷ್ಟ ಹೆಚ್ಚು. ಇಂಥ ಕಷ್ಟಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಪಕ್ವತೆ ಬರುತ್ತದೆ. ಇಲ್ಲವಾದರೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಕವಿ ಕೆ.ಬಿ. ವೀರಲಿಂಗನಗೌಡ ಹೇಳಿದರು.
ಅವರು ತಾಲೂಕು ಕಸಾಪ ಪಟ್ಟಣದ ಬಾಲಭವನದಲ್ಲಿ ಆಯೋಜಿಸಿದ್ದ ಶ್ರಾವಣ ಕವಿಗೋಷ್ಠಿ ಮತ್ತು ಕವಿತೆ,ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಆಶಯ ಮಾತುಗಳನಾಡಿದರು.
ಸತ್ಯ, ಸಿದ್ಧಾಂತ, ನ್ಯಾಯಪರ, ಸಮಾನತೆಯ ಆಶಯ ಇಟ್ಟುಕೊಂಡು ಬರೆಯಬೇಕು. ಕವಿತೆ ಅಂದರೆ ಕರುಳಿನಲ್ಲಿ ಅರಳುವ ಸರಳ ಹೂಗಳು. ವ್ಯಕ್ತಿ, ಸಮಾಜ, ವ್ಯವಸ್ಥೆಯಿಂದ ಘಾಸಿಗೊಂಡಾಗ ಕಾವ್ಯ ನಮ್ಮನ್ನು ಸಲಹುತ್ತದೆ ಎಂದರು.
ನ್ಯಾಯಾಧೀಶ ತಿಮ್ಮಯ್ಯ ಜಿ. ಮಾತನಾಡಿ ಬರೆಹಗಾರರಿಗೆ ಅಧ್ಯಯನ ಮುಖ್ಯ. ಹೆಚ್ಚು, ಹೆಚ್ಚು ಓದಬೇಕು.ನಮ್ಮ ಭಾಷೆಯ, ಇತರ ಭಾಷೆಯ ಅನುವಾದಿತ ಕೃತಿಗಳನ್ನು ಓದಿ. ಸಾಹಿತ್ಯಕ್ಕೆ ವಿಶೇಷವಾದ ಶಕ್ತಿ ಇದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡ ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಬರೆಹಗಾರನಿಗೆ ಅಧ್ಯಯನ ಮುಖ್ಯ. ಅದರರ್ಥ ಅದನ್ನು ನಕಲು ಮಾಡಬೇಕು ಅಂತಲ್ಲ. ಸಾಹಿತ್ಯದ ಶಿಸ್ತು, ನಮ್ಮ ಮಿತಿಗಳು ಅರಿವಿಗೆ ಬರುತ್ತದೆ. ನಾವು ಬರೆದದ್ದೆಲ್ಲ
ಕವಿತೆಯಾಗುವದಿಲ್ಲ. ಮತ್ತೆ ಮತ್ತೆ ತಿದ್ದಿ ತೀಡಿ ನಮ್ಮೆಲ್ಲ ಭಾವಶಕ್ತಿಯನ್ನು ವೃದ್ಧಿಸಿಕೊಂಡು ಬರೆದಾಗ ನೂರರಲ್ಲಿ ಒಂದೆರಡು ಉತ್ತಮ ಕವಿತೆಗಳಾಗುತ್ತದೆ. ಬಹಳಷ್ಟು ಯುವಕವಿಗಳು ಸಕ್ರಿಯರಾಗಿರುವುದು ಸಾಹಿತ್ಯದ ಸಮೃದ್ಧತೆಯ ಸೂಚನೆ ಎಂದರು.
ಅತಿಥಿ, ಪತ್ರಕರ್ತ ಶಿವಾನಂದ ಹೊನ್ನೆಗುಂಡಿ ಮಾತನಾಡಿ, ಕವಿ ಎದುರಾದ ಸಮಸ್ಯೆಗಳನ್ನು ಮೀರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಮಾತನಾಡಿ ನಾಡು, ನುಡಿ, ಕಲೆ, ಸಂಸ್ಕೃತಿಗಳ ಕುರಿತು ಯುವ
ಮನಸ್ಸುಗಳಿಗೆ ಪ್ರೇರಣೆ ನೀಡುವ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ ಎಂದರು.
ಶ್ರಾವಣ ಕವಿಗೋಷ್ಠಿ ಪ್ರಯುಕ್ತ ಹಲವು ಕವಿಗಳು ಸ್ವರಚಿತ ಕವಿತೆ ವಾಚಿಸಿದರು. ತಾಲೂಕು ಕಸಾಪ ಖಜಾಂಚಿ ಪಿ.ಬಿ. ಹೊಸೂರ ಉಪಸ್ಥಿತರಿದ್ದರು ಗಾಯಕಿ ಸುಮಿತ್ರಾ ಶೇಟ್ ಕವಿತೆ ಹಾಡಿದರು. ಬರಹಗಾರ ಪ್ರೊ| ರತ್ನಾಕರ ನಾಯ್ಕ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.