ಹಗ್ಗ-ಸೀಮೆ ಎಣ್ಣೆ ಹಿಡಿದು ಗ್ರಾಮಸ್ಥರ ಪ್ರತಿಭಟನೆ
Team Udayavani, Oct 24, 2021, 4:19 PM IST
ಅಂಕೋಲಾ: ಸ್ಮಶಾನ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪುರಸಭೆಯಿಂದ ಅಲ್ಲಿನ ನಿವಾಸಿಗಳಿಗೆ ಖುಲ್ಲಾಪಡಿಸಲು ಕಾರಣ ಕೇಳಿ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಹಗ್ಗ ಮತ್ತು ಸೀಮೆ ಎಣ್ಣೆ ಕ್ಯಾನ್‌ಗಳನ್ನು ಹಿಡಿದು ನಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ಹೇಳುತ್ತ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದ ಕೋಟೆವಾಡದಲ್ಲಿ ನಡೆದಿದೆ.
ಪ್ರತಿಭಟನೆ ನಡೆಸಿದ ಕೋಟೆವಾಡಾದ ನಿವಾಸಿಗಳು ಅವರು ಸ್ಮಶಾನಭೂಮಿ ಸುರಕ್ಷಾ ಸಮಿತಿ ಮತ್ತು ಪುರಸಭೆ ವಿರುದ್ಧ ಧಿಕ್ಕಾರ ಕೂಗಿದರು. ಹಿಂದೂ ಸ್ಮಶಾನ ಭೂಮಿ ಸುರಕ್ಷಾ ಸಮಿತಿ ಕೋರಿಕೆಯಂತೆ ಸ್ಮಶಾನ ಭೂಮಿ ಸರ್ವೇ ನಡೆಸಿದ ತಹಶೀಲ್ದಾರರು ಸ್ಮಶಾನ ಭೂಮಿ 7ಎ.2ಗು. ಪ್ರದೇಶದ ಪೈಕಿ 34 ಗುಂಟೆಯಷ್ಟು ಅತಿಕ್ರಮಣವಾಗಿರುವುದನ್ನು ದೃಢಪಡಿಸಿದ್ದರು ಹಾಗೂ ಅತಿಕ್ರಮಣ ಖುಲ್ಲಾಪಡಿಸುವಂತೆ ಪುರಸಭೆಗೆ ಆದೇಶ ನೀಡಿದ್ದರು. ಸ್ಮಶಾನ ಭೂಮಿಯ ಅತಿಕ್ರಮಣ ಖುಲ್ಲಾಪಡಿಸಲು ತಹಶೀಲ್ದಾರ್ ಪತ್ರ ದಿ.2-6-2021 ಹಾಗೂ 2-9-2021 ಮತ್ತು ಹಿಂದೂ ಸ್ಮಶಾನ ಭೂಮಿ ಸುರಕ್ಷಾ ಸಮಿತಿ ಮನವಿ ದಿ.23-9-2021ಕ್ಕೆ ಸಂಬಂಧಿಸಿದಂತೆ ಪುರಸಭೆ ಅ.30 ರಂದು ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಖುಲ್ಲಾಪಡಿಸುವ ಕಾರಣ ಕೇಳಿ ನೊಟೀಸ್ ನೀಡಿದೆ. ಪುರಸಭೆ ನೋಟೀಸಿಗೆ ಕಂಗಾಲಾದ ಅಲ್ಲಿನ ನಿವಾಸಿಗಳು ಶನಿವಾರ ದಿಢೀರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಿನ ನಿವಾಸಿ ಜುಬೇದಾಬಿ ಅಹ್ಮದ ಇಕ್ಬಾಲ್ ನಾವು 50 ವರ್ಷಗಳಿಂದ ಇಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದೇವೆ. ಸ್ಮಶಾನದಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ ಆಗ ನಾನೇ ನೀರನ್ನು ಒದಗಿಸುತ್ತಿದ್ದೆ. ಸ್ಮಶಾನ ಅಭಿವೃದ್ಧಿ ಮಾಡುವವರು ಆಗ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.
ಪೋರಿ ಸಣ್ಣಾ ಗೌಡ, ಸಚಿನ ನಾಯ್ಕ, ಅನ್ವರ ವಾಸ್ಟರ್ ಮಾತನಾಡಿ, ಇಷ್ಟು ಕಾಲದಿಂದ ಅಧಿಕೃತವಾಗಿ ವಾಸ ಮಾಡಿ ಈಗ ಬಲವಂತವಾಗಿ ಎಬ್ಬಿಸಲು ಬಂದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದರು.
ಸ್ಮಶಾನ ಭೂಮಿ ಸುರಕ್ಷಾ ಸಮಿತಿ ಅಧ್ಯಕ್ಷ ಸುರೇಶ ವೆರ್ಣೇಕರ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಅವರು ತನ್ನ ಊರಿನ ಸ್ಮಶಾನ ಅಭಿವೃದ್ಧಿಪಡಿಸಲಾಗದೆ ನಗರದ ಸ್ಮಶಾನ ಅಭಿವೃದ್ಧಿ ನೆಪದಲ್ಲಿ ಸಾಮರಸ್ಯದಿಂದ ಇದ್ದ ಇಲ್ಲಿನ ಜನರಲ್ಲಿ ಗಲಭೆಗೆ ಪ್ರಚೋದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಉಪ ಪೊಲೀಸ್ ನಿರೀಕ್ಷಕ ಪ್ರೇಮನಗೌಡ ಪಾಟೀಲ, ಪಿಎಸ್‌ಐ ಪ್ರವೀಣಕುಮಾರ ಸೀಮೆ ಎಣ್ಣೆ ಕ್ಯಾನುಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿದ್ದ ಜನರನ್ನು ನ್ಯಾಯ ಕೇಳಲು ಕಾನೂನು ಪ್ರಕಾರ ಹಲವು ಮಾರ್ಗಗಳಿವೆ. ಈ ರೀತಿ ಆವೇಶದಿಂದ ಜೀವಹಾನಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿ ಮನವೊಲಿಸಿದರು. ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.