ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Team Udayavani, Mar 29, 2024, 4:59 PM IST
ಶಿರಸಿ: ಇದು ಅಂಜಲಿ ಹಾಗೂ ಕಾಗೇರಿ ನಡುವಿನ ಚುನಾವಣೆಯಲ್ಲ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಚುನಾವಣೆ. ದೇಶಕ್ಕೆ ಆಗಲಿರುವ ಒಳಿತು ಕೆಡಕುಗಳ ನಡುವಿನ ಚುನಾವಣೆ ಎಂದು ಮಾಜಿ ಸ್ಪೀಕರ್, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು.
ಅವರು ತಾಲೂಕಿನ ಬದನಗೋಡಿನಲ್ಲಿ ನಡೆದ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ವಿಶ್ವವೇ ಮೆಚ್ಚಿಕೊಂಡಿದೆ. ಅವರ ದೂರದೃಷ್ಟಿ ಯೋಜನೆಗಳು ದೇಶವನ್ನು ಬಲಗೊಳಿಸಿವೆ. ಕಾಂಗ್ರೆಸ್ ಸರಕಾರದ ಯೋಜನೆಗಳಂತೆ ದಿವಾಳಿಯಾಗಿಸಿಲ್ಲ. ಕಳೆದ ಹತ್ತು ವರ್ಷದಲ್ಲಿ ಭಾರತಕ್ಕೆ ಪ್ರಪಂಚದ ಮಟ್ಟದಲ್ಲಿ ಒಂದು ವಿಶಿಷ್ಟ ಹೊಳಪು ತಂದುಕೊಟ್ಟವರು ಪ್ರಧಾನಿ ಮೋದಿ. ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು. ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಂದಾಗಿ ಮತದಾನ ಮಾಡಬೇಕು ಎಂದರು.
ಅವತ್ತಿನ ಕಷ್ಟದಲ್ಲಿ ಪಕ್ಷ ಕಟ್ಟಿದ್ದಾರೆ. ಅನೇಕರ ತ್ಯಾಗ, ಬಲಿದಾನದಿಂದ ಬಿಜೆಪಿ ರಾಷ್ಟ್ರ ಗಮನ ಸೆಳೆಯುತ್ತಿದೆ. ಇದು ಕಾರ್ಯಕರ್ತರ ಪಕ್ಷ ಎಂದರು.
ಕಾರ್ಯಕರ್ತರ ಶ್ರಮ ದಿನಂದಲೆ ಆರು ಬಾರಿ ಶಾಸನ ಸಭೆಯಲ್ಲಿ ಗೆದ್ದಿದ್ದೇನೆ. ಸಮೃದ್ಧ, ನೆಮ್ಮದಿಯ ಸಮಾಜ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ನಮ್ಮ ಕೆಲಸಕ್ಕೆ ಅಡೆತಡೆಗಳು ನೂರು ಇರಬಹಯದು. ಪ್ರತಿಪಕ್ಷಗಳು ಇಲ್ಲ ಸಲ್ಲದ ಒಡಕಿನ ಮಾತಾಡಬಹುದು. ಆದರೆ ಬಿಜೆಪಿ ಇದೊಂದು ಗಟ್ಟಿಯಾದ ಕುಟುಂಬ. ಹೊರಗಿನ ಜೊಳ್ಳು ಮಾತುಗಳು ಕವಿಗೆ ಬಿದ್ದರೂ ತಲೆ ಕೆಡಸಿಕೊಳ್ಳದೇ ನಮ್ಮ ಕಾರ್ಯ ಮಾಡಬೇಕು ಎಂದರು.
ಮಹಿಳೆಯರು, ಯುವಕರು, ರೈತರು, ಬಡವರು ಇವೇ ನಮ್ಮ ೪ ಜಾತಿ ಇದ್ದಾವೆ ಎಂದು ನಮ್ಮ ಪ್ರಧಾನಿ ಹೇಳಿದ್ದಾರೆ. ತಂತ್ರಜ್ಞಾನದ ಬಳಕೆಯನ್ನು ಮೋದಿ ಯವರು ತೋರಿಸಿದ್ದಾರೆ.
ನಮ್ಮ ಒಂದು ಮತವೂ ದೇಶಕ್ಕೆ ಹಿತ. ದೇಶಕ್ಕಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮತ ಚಲಾಯಿಸಬೇಕು ಎಂದರು.
ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಅಸಂಖ್ಯ ದೇಶಭಕ್ತ ಕಾರ್ಯಕರ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆಯ ಮೂಲಕ ಬೆಳೆದ ಶಿಸ್ತಿನ ಪಕ್ಷ ನಮ್ಮ ಭಾರತೀಯ ಜನತಾ ಪಕ್ಷ. ಅವೆಲ್ಲಕ್ಕೂ ನಿದರ್ಶನವೆಂಬಂತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರೆಲ್ಲ ಒಟ್ಟಾಗಿ ನಮ್ಮ ನಮ್ಮ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದರು.
ಈ ವೇಳೆ ಎಸ್ ಎನ್ ಭಟ್ಟ, ವಿ ಎಮ್ ಹೆಗಡೆ, ರಮೇಶ ನಾಯ್ಕ ಪ್ರದಾನ ಕಾರ್ಯದರ್ಶಿ, ಉಷಾ ಹೆಗಡೆ, ಶ್ರೀ ರಾಮ ನಾಯ್ಕ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.