ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ… ಗೃಹ ಸಚಿವರು ಅಸಹಾಯಕರಾಗಿದ್ದಾರೆ; ಕಾಗೇರಿ
Team Udayavani, May 23, 2024, 2:31 PM IST
ಶಿರಸಿ: ರಾಜ್ಯದಲ್ಲಿ ಕಾನೂನು ಪಾಲನೆ ಹದಗೆಟ್ಟಿದೆ. ಈ ಬಗ್ಗೆ ಗೃಹ ಸಚಿವರು ಅಸಹಾಯಕರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ ಅವರು ಪರಮೇಶ್ವರ ಅವರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಶಿರಸಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕರ್ನಾಟಕ ಅಪರಾಧಿಗಳ ರಾಜ್ಯವಾಗಿದೆ. ಸಂವಿಧಾನ ಬದ್ಧವಾಗಿ ಆಯ್ಕೆ ಆದ ಸರಕಾರದ ಜವಬ್ದಾರಿ ಎಂದರೆ ಜನರ ಜೀವ, ಆಸ್ತಿ ಪಾಸ್ತಿ ರಕ್ಷಣೆ. ಆದರೆ, ಕಾಂಗ್ರೆಸ್ ಸರಕಾರಕ್ಕೆ ಇದನ್ನೂ ಮಾಡಲಾಗುತ್ತಿಲ್ಲ. ಸಿಎಂ, ಗೃಹ ಸಚಿವರು ಇದ್ದಾರ? ಎಂಬ ಪ್ರಶ್ನೆ ಎದ್ದಿದೆ ಎಂದರು.
ಆರ್ಥಿಕ ಕ್ಷೇತ್ರ ಕುಸಿದಿದೆ. ಅರ್ಹರಿಗೆ ಯೋಜನೆ ಲಾಭ ಸಿಗುತ್ತಿಲ್ಲ. ಗುತ್ತಿಗೆದಾರ ಬಿಲ್ ಇಲ್ಲ. ಹಾಲು ಉತ್ಪಾದಕರಿಗೆ ೫ ರೂ. ಪ್ರೋತ್ಸಾಹ ಧನ ಇಲ್ಲ. ಬದಲಿಗೆ ಅಪರಾಧಿಗಳಿಗೆ, ರಾಷ್ಟ್ರದ ದ್ರೋಹಿಗಳಿಗೆ ಪ್ರೋತ್ಸಾಹಿಸುತ್ತದೆ ಎಂಬ ಸ್ಪಷ್ಟ ಸಂದೇಶ ಇದೆ. ಎಸ್ ಡಿಪಿಐ, ಪಿಎಫ್ ಐ ಪ್ರಕರಣ ವಾಪಸ್ ಪಡೆಯುವ ಮೂಲಕ ಹಗುರ ಧೊರಣೆಗೆ ಕಾರಣವಾಗುತ್ತಿದೆ ಎಂದರು.
ಕಾಂಗ್ರೆಸ್ ಸರಕಾರದ ವರ್ಷದ ಸಾಧನೆ ಶೂನ್ಯ: ಗ್ರೇಸ್ ಮಾರ್ಕ್ಸ್ ಕೊಟ್ಟರೂ ಪಾಸಾಗದ ಸ್ಥಿತಿ ಇದೆ. ಸಿದ್ದ ರಾಮಯ್ಯ, ಡಿಕೆ ಅವರ ನೇತೃತ್ವವೇ ಬೇಸರ ತಂದಿದೆ ಜನರಿಗೆ. ಭ್ರಮನಿರಸನ ಆಗಿದೆ. ಸಿಎಂಗೆ ಖುರ್ಚಿ ಉಳಿಸಿಕೊಳ್ಳಬೇಕು, ತಾನು ಹೇಗೆ ಸಿಎಂ ಖುರ್ಚಿಗೆ ಹೋಗೋದು ಎಂಬ ಪ್ರಶ್ನೆ ಅವರಿಗಾಗಿದೆ. ರಾಜ್ಯದ ಆಡಳಿತ ಕುಸಿದಿದೆ. ರಾಜ್ಯದೊಳಗೆ ತಲೆ ತಗ್ಗಿಸುವ ಕಾರ್ಯ ಆಗುತ್ತಿದೆ. ದೇಶದಲ್ಲೂ ಇಂಥದೊಂದು ಸಾಧನೆ ಎಂದು ಹೇಳುವಂತಿಲ್ಲ ಎಂದೂ ಹೇಳಿದರು.
ಶಿಕ್ಷಣ ಇಲಾಖೆಯಲ್ಲಿ ನಮ್ಮ ರಾಜ್ಯದ ಮಕ್ಕಳಿಗೆ ಯಾವುದು ರೀತಿಯ ಶಿಕ್ಷಣ ಕೊಡುತ್ತಿದ್ದೇವೆ ಎಂದು ಕೇಳುವಂತಿದೆ. ಈ ವರ್ಷ ಗ್ರೇಸ್ ಮಾರ್ಕ್ಸ್ ಕೊಡುವ ಸ್ಥಿತಿ ತಂದಿದ್ದಾರೆ. ಗೊಂದಲ ಸೃಷ್ಟಿಸಿದ್ದಾರೆ. ಅತಂತ್ರ ಮಾಡಿದ್ದಾರೆ. ನಮ್ಮ ಸಾಹಿತಿಗಳು ಪುಸ್ತಕ ಕೊಟ್ಟರೂ ಗ್ರಂಥಾಲಯ ಇಲಾಖೆ ಸಚಿವರಾದ ಮಧು ಅವರಿಗೆ ನೀಡಿದರೆ ಜಾಗ ಇಲ್ಲ ಎನ್ನುತ್ತಾರೆ ಎಂದೂ ವಾಗ್ದಾಳಿ ಮಾಡಿದರು.
ಈ ವೇಳೆ ಪ್ರಮುಖರಾದ ಉಷಾ ಹೆಗಡೆ, ಆನಂದ ಸಾಲೇರ, ಆರ್.ವಿ.ಹೆಗಡೆ, ಸುಬ್ರಾಯ ಹಲಸಿನಳ್ಳಿ ಇದ್ದರು.
ಶಿಕ್ಷಣ ಇಲಾಖೆಯ ಬಗ್ಗೆ ಮಧು ಬಂಗಾರಪ್ಪ ಅವರ ಕೇಳೋದು ತಪ್ಪು. ಏಕೆಂದರೆ ಮಂತ್ರಿ ಮಾಡಿದ್ದೇ ತಪ್ಪು. ಸಿಎಂ ಸಿದ್ದರಾಮಯ್ಯ ಅವರು ಮಧು ಅವರನ್ನು ಶಿಕ್ಷಣ ಇಲಾಖೆಯಿಂದ ಉಚ್ಚಾಟಿಸಬೇಕು. ಇಲಾಖೆ ಗುಣಮಟ್ಟ, ಸೌಲಭ್ಯ ಎರಡರಲ್ಲೂ ಕಳಪೆ ಆಗಿದೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್
ಉತ್ತರ ಕನ್ನಡ ಲೋಕ ಸಭಾ ಕ್ಷೇತ್ರದದಲ್ಲಿ ೨.೫೦ ಲಕ್ಷ ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ಪಕ್ಷಕ್ಕಿದೆ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ
ಹೆಬ್ಬಾರ್ ಅವರಿಗೆ ಬಿಜೆಪಿ ಹೊಂದಿಕೆ ಆಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಬೇಕು. ಜನಪ್ರತಿನಿಧಿಯಾಗಿ ಶೋಭೆಯಲ್ಲ. ಅಪ್ರಬುದ್ಧ ನಿಲುವು ತಪ್ಪು. ಜನರ ಎದುರಿಗೆ ಹೋಗಬೇಕು. ಈ ಚುನಾವಣೆಯಲ್ಲಿ ಹೆಬ್ಬಾರರು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
– ವಿಶ್ವೇಶ್ವರ ಹೆಗಡೆ ಕಾಗೇರಿ
ಇದನ್ನೂ ಓದಿ: Vitla: ವ್ಯಕ್ತಿಯ ಸಾವಿನಲ್ಲಿ ಅನುಮಾನ; ದಫನ ಮಾಡಿದ ಮೃತದೇಹ ಮೇಲಕ್ಕೆತ್ತಿ ಮರು ತನಿಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.