ಆಧಾರ್ ತಿದ್ದುಪಡಿಗೆ ಪರದಾಟ
•ಜನ ರೊಚ್ಚಿಗೆದ್ದು ಪ್ರತಿಭಟಿಸುವ ಮುನ್ನ ವ್ಯವಸ್ಥೆ ಸರಿಪಡಿಸಲು ಒತ್ತಾಯ
Team Udayavani, Jul 30, 2019, 11:07 AM IST
ಕುಮಟಾ: ಪ್ರಧಾನ ಅಂಚೆ ಕಚೇರಿ ಸುತ್ತಲೂ ನಿಂತಿರುವ ಸಾರ್ವಜನಿಕರು.
ಕುಮಟಾ: ಆಧಾರ ಕಾರ್ಡ್ ತಿದ್ದುಪಡಿ, ಹೊಸ ನೋಂದಣಿ ಇನ್ನಿತರ ಕೆಲಸಕ್ಕಾಗಿ ಟೋಕನ್ ಪಡೆಯುವ ಉದ್ದೇಶದಿಂದ ಇಲ್ಲಿನ ಪ್ರಧಾನ ಅಂಚೆ ಕಚೇರಿಗೆ ಸಾವಿರಾರು ಜನ ಆಗಮಿಸಿದ್ದರಿಂದ ಸರತಿ ಸಾಲಿಗೂ ಜಾಗ ಸಾಲದೇ, ನೆಲ್ಲಿಕೇರಿ ಮುಖ್ಯ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೂ ಕಿರಿಕಿರಿಯಾದ ಘಟನೆ ನಡೆದಿದೆ.
ಆಧಾರ ಕಾರ್ಡ್ ಸಂಬಂಧ ಪ್ರಧಾನ ಅಂಚೆ ಕಚೇರಿ ನೋಂದಣಿ ವಿಭಾಗದಲ್ಲಿ 15 ದಿನ ಮುಂಚಿತವಾಗಿ ಟೋಕನ್ ಪಡೆದವರಲ್ಲಿ ಪ್ರತಿನಿತ್ಯ 50ಕ್ಕೂ ಹೆಚ್ಚು ಜನರ ಆಧಾರ್ ಕೆಲಸ ಮಾಡಿಕೊಡಲಾಗುತ್ತಿದೆ. ಇಡೀ ತಾಲೂಕಿನ ಜನರು ಇಲ್ಲಿ ಬರುವುದರಿಂದ ಒತ್ತಡ ವಿಪರೀತವಾಗಿದ್ದು, ಟೋಕನ್ ನೀಡುವ ದಿನದ ಮುಂಚಿನ ರಾತ್ರಿಯೇ ಬಂದು ಬಾಗಿಲು ತೆಗೆಯುವುದನ್ನೇ ಕಾಯುತ್ತಾ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿಯೇ ಸೋಮವಾರ ಬೆಳಗ್ಗೆ ಸಾವಿರಾರು ಜನ ಅಂಚೆಕಚೇರಿ ಬಳಿ ಜಮಾಯಿಸಿ ಟೋಕನ್‌ಗಾಗಿ ಸರತಿಯಲ್ಲಿ ನಿಂತರು. ಕಚೇರಿಯ ವಿಶಾಲವಾದ ಆವಾರದಲ್ಲಿಯೂ ಜಾಗ ಸಾಲದೇ ನೆಲ್ಲಿಕೇರಿ ಮುಖ್ಯ ರಸ್ತೆ ಮೇಲೂ ಜನ ಜಮಾಯಿಸತೊಡಗಿದ್ದರಿಂದ ಜನ-ವಾಹನ ಸಂಚಾರಕ್ಕೆ ಕಿರಿಕಿರಿ ಅನುಭವಿಸುವಂತಾಯಿತು. ವೃದ್ಧರು, ಅಂಗವಿಕಲರು, ಮಹಿಳೆಯರು, ಮಕ್ಕಳನ್ನು ಕರೆತಂದವರು ಸೇರಿದಂತೆ ಸಾವಿರಾರು ಜನರು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಲು ಅಸಾಧ್ಯವೆಂದರಿತು ಕೆಲವರು ಮರಳಿ ನಡೆದರು. ಆದರೂ ಅಂಚೆ ಕಚೇರಿ ಆವಾರ ಟೋಕನ್ ಸಾಲಿನಿಂದ ಗಿಜಿಗುಡುತ್ತಿತ್ತು.
ಟೋಕನ್‌ಗಾಗಿ ಕಾಯುತ್ತಿದ್ದ ರಾಜೇಂದ್ರ ನಾಯಕ ಮಾತನಾಡಿ, ನಿಯಮಾವಳಿ ಪ್ರಕಾರ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ ಎಲ್ಲದಕ್ಕೂ ಬೇಕು. ಆದರೆ ಆಧಾರ ಕೇಂದ್ರಗಳು ಮಾತ್ರ ಇಲ್ಲ. ಇದು ಗಂಭೀರ ಸಮಸ್ಯೆಯಾಗಿದ್ದು, ಆಡಳಿತ ವ್ಯವಸ್ಥೆ ಇದನ್ನು ಸರಿಪಡಿಸಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ
Karate: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಿಂಚಿದ ದಾಂಡೇಲಿಯ ಕರಾಟೆ ಪಟುಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.