ಅಡಿಕೆ ವರ್ತಕರ ಸಂಘದಿಂದ ಯಡಳ್ಳಿಗೆ ನೀರಿನ ಘಟಕ
Team Udayavani, Jan 11, 2022, 2:21 PM IST
ಶಿರಸಿ: ತಾಲೂಕಿನ ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿಗೆ ಶಿರಸಿಯ ಅಡಿಕೆ ಕಾಳುಮೆಣಸು ಹಾಗೂ ಏಲಕ್ಕಿ ವರ್ತಕರ ಸಂಘದಿಂದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ದೇಣಿಗೆ ನೀಡಲಾಯಿತು.
ಶಿರಸಿ ಅಡಿಕೆ ವರ್ತಕರ ಸಂಗದ ಅಧ್ಯಕ್ಷರಾದ ಸತೀಶ ಭಟ್ಟ ನಾಡಗುಳಿ, ನೀರಿನ ಘಟಕದ ನಲ್ಲಿ ತಿರುಗಿಸುವ ಮೂಲಕ ಘಟಕದ ಚಾಲನೆ ಮಾಡಿದರು. ವರ್ತಕರ ಸಂಘದ ಪರವಾಗಿ ಪ್ರಧಾನ ಕಾರ್ಯದರ್ಶಿ ಲೋಕೇಶ ಹೆಗಡೆ ಪ್ರಗತಿ, ಇಂದು ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರಮುಖವಾಗಿ ನೀರು ಎಲ್ಲರಿಗೂ ಬೇಕು ಅದರಲ್ಲೂ ವಿದ್ಯಾರ್ಥಿಗಳಿಗೆ ನೀರು ಪ್ರಮುಖವಾಗಿದ್ದು ಶುದ್ಧ ನೀರನ್ನು ಸೇವಿಸಿದರೆ ಯಾವುದೇ ರೋಗಗಳು ಬರುವದಿಲ್ಲ ಹಾಗೆ ಅನುಕೂಲವಾಗಲೆಂದು ವಿದ್ಯಾರ್ಥಿಗಳಿಗಾಗಿ ಈ ಸಂಸ್ಥೆಗೆ ಶುದ್ಥ ನೀರಿನ ಘಟಕ ನೀದಲಾಗಿದೆ ಎಂದರು.
ವೇದಿಕೆಯಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಸದಾನಂದ ಹೆಗಡೆ, ಖಜಾಂಜಿ ರಿಜ್ವಾನ್ ಬೆಸಾನಿಯಾ, ಪ್ರಾಚಾರ್ಯ ಡಾ. ಆರ್.ಟಿ.ಭಟ್ಟ, ಗಿರಿಧರ ಕಬ್ನಳ್ಳಿ ಉಪಸ್ಥಿತರಿದ್ದರು.ನೀರಿನ ಘಟಕದ ದೇಣಿಗೆಗಾಗಿ ಮಾ.ಶಿ.ಪ್ರ ಸಮಿತಿಯ ಗೌರವ ಕಾರ್ಯದರ್ಶಿ ಎಂ.ವಿ ಹೆಗಡೆ ಕಾನಗೋಡ ಅಭಿನಂದನೆ ತಿಳಿಸಿದರು. ಮುಖ್ಯಾಧ್ಯಾಪಕ ಕೆ.ಜಿ. ಭಟ್ಟ ಮಶಿಗದ್ದೆ ಸ್ವಾಗತಿಸಿದರು. ಶಿಕ್ಷಕ ಹನುಮಂತಪ್ಪ ಎಸ್ ಆರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
History: ನಕ್ಸಲ್ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್-ನಕ್ಸಲ್ ಮುಖಾಮುಖಿ
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ
Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.