ಅರಬ್ಬೀ ಸಮುದ್ರದಲ್ಲಿದ್ದ ವೇವ್‌ರೈಡರ್ ಬೊಯ್ ನಾಪತ್ತೆ, ಕಳವು ಶಂಕೆ
Team Udayavani, Feb 25, 2024, 12:55 AM IST
ಕಾರವಾರ: ನಗರದ ಅರಬೀ ಸಮುದ್ರದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಗಾಳಿಯ ದಿಕ್ಕು ಅರಿಯಲು ಅಳವಡಿಸಿದ್ದ ಅತ್ಯಾಧುನಿಕ ತಂತ್ರಜ್ಞಾನದ ವೇವ್ ರೈಡರ್ ಬೊಯ್ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
1 ಕೋಟಿ ರೂ.ಗೂ ಅಧಿಕ ಮೊತ್ತದ ಆಧುನಿಕ ವೇವ್ ರೈಡರ್ ಬೊಯ್ ಅದಾಗಿತ್ತು. ವೇವ್ ರೈಡರ್ ಸಮುದ್ರದಲ್ಲಿ ತೇಲುವ ಯಂತ್ರ. ಇದಕ್ಕೆ ಬಲವಾದ ರೂಫ್ ಕಟ್ಟಿ ಸಮುದ್ರ ಆಳಕ್ಕೆ 800 ಕೆ.ಜಿ. ಭಾರದ ವಸ್ತು ಕಟ್ಟಿ, ರೈಡಾರ್ ಬೊಯ್ ಎಲ್ಲೂ ಹೋಗದಂತೆ ತಾಂತ್ರಿಕತೆ ಬಳಸಲಾಗಿತ್ತು. ಲೈಟ್ ಹೌಸ್ ಸಮೀಪ ಅಂದರೆ ಕಾರವಾರದಿಂದ ಸಮುದ್ರದಲ್ಲಿ 8 ನಾಟಿಕಲ್ ಮೈಲು ದೂರ ಹಾಗೂ 17 ಮೀ. ಅಡಿ ಆಳ ಸಮುದ್ರದಲ್ಲಿ ತೇಲುವ ಸ್ಥಿತಿಯಲ್ಲಿ ವೇವ್ ರೈಡರ್ ಬೊಯ್ ಅಳವಡಿಸಲಾಗಿತ್ತು.
ಅತ್ಯಂತ ಸೂಕ್ಷ್ಮಸಂವೇದಿಯಾದ ಈ ಯಂತ್ರವನ್ನು ಕತ್ತರಿಸಿ ಬೇರೆಡೆಗೆ ಸಾಗಿಸಿರುವ ಶಂಕೆ ಇದೆ. 5 ದಿನದ ಹಿಂದೆ ವೇವ್ ರೈಡರ್ ಬೊಯ್ ಕಾರ್ಯವೈಖರಿ ಪರಿಶೀಲನೆಗೆ ಹೋದಾಗ ಅದು ಕಳವಾಗಿರುವುದು ಬೆಳಕಿಗೆ ಬಂದಿದೆ. ಸಮುದ್ರದಲ್ಲಿ ಅದನ್ನು ಹುಡುಕಿದರೂ ಪ್ರಯೋಜನ ಆಗಿಲ್ಲ. ಜಿಪಿಎಸ್ ಮೂಲಕ ಪರಿಶೀಲನೆ ಮಾಡಿದಾಗ ಮಹಾರಾಷ್ಟ್ರದ ಮಹಾಬಲೇಶ್ವರ ವ್ಯಾಪ್ತಿಯ ಆಳ ಸಮುದ್ರ ತನಕ ವೇವ್ ರೈಡರ್ ಕುರುಹು ಕಾಣಿಸುತ್ತದೆ. ಅನಂತರ ಏನಾಯಿತು ಎಂಬುದು ತಿಳಿಯುತ್ತಿಲ್ಲ ಎಂದು ಕಡಲಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಿ.ಎಲ್.ರಾಠೊಡ್ ತಿಳಿಸಿದ್ದಾರೆ.
ವೇವ್ ರೈಡರ್ ಬಾಯ್ ಆಧುನಿಕ ಯಂತ್ರ. ಅದರ ರೂಫ್ ತನ್ನಿಂತಾನೇ ತುಂಡಾಗಲು ಸಾಧ್ಯವಿಲ್ಲ. ಇದು ಮೇಲ್ನೋಟಕ್ಕೆ ಮಾನವ ಕೃತ್ಯ ಅನಿಸಿದೆ. ಇದನ್ನು ಕದ್ದವರಿಗೆ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಬೊಯ್ ಸಿಕ್ಕವರು ಮರಳಿಸಿದರೆ ಉಪಕಾರವಾಗುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.