BJP ಯವರು ಮಾಡಿದ ಕೆಟ್ಟ ಕೆಲಸ ಸರಿಪಡಿಸುತ್ತಿದ್ದೇವೆ: ಸಚಿವ ಮಂಕಾಳು ವೈದ್ಯ
ಗ್ಯಾರಂಟಿಗಳು ಶೇ. 90 ರಷ್ಟು ಅನುಷ್ಠಾನಕ್ಕೆ ಬಂದಿವೆ...
Team Udayavani, Nov 1, 2023, 6:41 PM IST
ಕಾರವಾರ : ಬಿಜೆಪಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿದೆ, ಅವರು ಮಾಡಿದ ಕೆಟ್ಟ ಕೆಲಸ ಸರಿಪಡಿಸುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಕನ್ನಡ ರಾಜ್ಯೋತ್ಸವ ಸಮಾರಂಭದ ನಂತರ ಅವರು ಕಾರವಾರದಲ್ಲಿ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕೊಠಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಉಸುಕು ಸಮಸ್ಯೆ, ಅರಣ್ಯ ಅತಿಕ್ರಮಣ, ಮುಗಿಯದ ಹೆದ್ದಾರಿ ಗೋಳು, ಶಿರಸಿ- ಕುಮಟಾ ರಸ್ತೆ ಸಮಸ್ಯೆ, ಅಪೂರ್ಣ ಸೇತುವೆ ಕಾಮಗಾರಿಗಳನ್ನು ಹಾಗೆ ಉಳಿಸಿದ್ದಕ್ಕೆ ಹಿಂದೆ ಆಡಳಿತ ಮಾಡಿದ ಬಿಜೆಪಿಯವರು ಕಾರಣ ಎಂದು ಸಚಿವ ವೈದ್ಯ ಆರೋಪಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 56000 ಕೋಟಿ ಹಣ ಬಿಟ್ಟು ಸಹ ಅಭಿವೃದ್ಧಿಗೆ ಹಣ ಇದೆ. ಅಭಿವೃದ್ಧಿ ಮಾಡ್ತಿವಿ. 3.50 ಲಕ್ಷ ಕೋಟಿ ಬಜೆಟ್ ನಮ್ಮ ಸರ್ಕಾರದ್ದು, ನೆನಪಿರಲಿ. ಗ್ಯಾರಂಟಿ ಯೋಜನೆ ಅನುಷ್ಠಾನ ದಿಂದ ಬಡವರಿಗೆ ಅನುಕೂಲ ಆಗಿದೆ. ಇದನ್ನು ಬಿಜೆಪಿ ಯವರಿಗೆ ಸಹಿಸಲಾಗುತ್ತಿಲ್ಲ. ಈಗಲೂ ಅಪಪ್ರಚಾರ ಮಾಡುತ್ತಿದ್ದಾರೆ. ಮಾಡಲಿ, ಆದರೆ ಮಾಧ್ಯಮಗಳು ಕಣ್ಣು ತೆರೆಯಬೇಕಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ನಾವು ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿಗಳು ಶೇ. 90 ರಷ್ಟು ಅನುಷ್ಠಾನಕ್ಕೆ ಬಂದಿವೆ. ಉಳಿದ ಶೇ.10 ಸಹ ಮಾಡ್ತೇವೆ ಎಂದು ಸಚಿವ ವೈದ್ಯ ಹೇಳಿದರು.ಬಿಜೆಪಿ ತೊಂದರೆ ಕೊಡ್ತಾ ಇದೆ. ನಾವು ಸಾಮಾನ್ಯ ಜನರಿಗೆ ಕೆಲಸ ಮಾಡ್ತಿದ್ದೇವೆ. ಇದು ಜನರಿಗೆ ಗೊತ್ತಿದೆ .ಅಷ್ಟು ಸಾಕು ಎಂದರು.
ಅರಣ್ಯ ಹಕ್ಕು ಸಮಸ್ಯೆ ನಿವಾರಣೆಗೆ ಕ್ರಮ
ಅರಣ್ಯ ಹಕ್ಕು ನೀಗಿಸುವಲ್ಲಿ ಕಾಂಗ್ರೆಸ್ ಕೆಲಸ ಮಾಡಿದೆ. 2005-06 ರಲ್ಲಿ ಮೊಟ್ಟ ಮೊದಲಿಗೆ ಹಕ್ಕು ಪತ್ರ ಕೊಟ್ಟವರು ನಾವು . ರೈತರಿಗೆ ಹಕ್ಕು ಪತ್ರ ಕೊಡುವ ಕಾನೂನು ಮಾಡಿದ್ದು ಕಾಂಗ್ರೆಸ್. ಮನಮೋಹನ್ ಸಿಂಗ್ ಸರ್ಕಾರ. 2008 ರಿಂದ 2013 ರಲ್ಲಿ ಬಿಜೆಪಿ ಅಧಿಕಾರದಲ್ಲಿ ಇತ್ತು. ಅವರೇಕೆ ಹಕ್ಕು ಪತ್ರ ಕೊಟ್ಟಿಲ್ಲ.ನಂತರ ನಾವ 2013-2018 ಕಮಿಟಿ ಮಾಡಿ, ಹತ್ತು ಸಾವಿರ ಕುಟುಂಬಕ್ಕೆ ಹಕ್ಕು ಪತ್ರಕೊಟ್ಟಿವಿ. ಜಿಪಿಎಸ್ ಮಾಡಿದೆವು.
ಆದರೆ ಬಿಜೆಪಿ 2021- 2023 ಮೇತನಕ ಬಿಜೆಪಿ ಮತ್ತೆ ಅಧಿಕಾರದಲ್ಲಿತ್ತು . ಅವರು ಯಾರಿಗೆ ಹಕ್ಕುಪತ್ರ ಕೊಟ್ಟಿದ್ದಾರೆ? ಎಂದು ಸಚಿವ ವೈದ್ಯ ಪ್ರಶ್ನಿಸಿದರು.
ಅವಶ್ಯಕತೆ ಇಲ್ಲದ ಮಾತಾಡಲು ಬಿಜೆಪಿ ಸದಾ ಮುಂದು. ಇವತ್ತಿನ ಅತಿಕ್ರಮಣ ಸಮಸ್ಯೆಗೆ ಬಿಜೆಪಿ ಕಾರಣ ಎಂದು ವೈದ್ಯ ನುಡಿದರು.
ಉಸುಕು ಸಮಸ್ಯೆ ಬಗೆ ಹರಿಸುವೆವು. ಜನರಿಗೆ ತೊಂದರೆ ಆಗಲು ಬಿಡುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.