ಶಿರಸಿ: ವಿಶ್ವ ಹೃದಯ ದಿನ ಆಚರಣೆ
Team Udayavani, Sep 29, 2022, 10:01 AM IST
ಶಿರಸಿ: ವಿಶ್ವ ಹೃದಯ ದಿನದ ಅಂಗವಾಗಿ ಟಿ.ಎಸ್.ಎಸ್. ಆಸ್ಪತ್ರೆಯು ಎಸ್.ಡಿ.ಎಂ.ನಾರಾಯಣ ಹಾರ್ಟ್ ಸೆಂಟರ್ ಸಹಭಾಗಿತ್ವದಲ್ಲಿ ಸೆ.28ರ ಬುಧವಾರ ಹಮ್ಮಿಕೊಂಡಿದ್ದ ವಾಕಥಾನ್ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.
ಈ ಕಾರ್ಯಕ್ರಮದಲ್ಲಿ ಐಎಂಎ ಶಿರಸಿ ಘಟಕದ ಅಧ್ಯಕ್ಷ ಡಾ. ರಾಮಾ ಹೆಗಡೆ, ಉಪಸ್ಥಿತರಿದ್ದು ಹೃದಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಟಿ.ಎಸ್.ಎಸ್ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಆದ ಬಗ್ಗೆ ಹರ್ಷ ವ್ಯಕ್ತಪಡಿಸಿ, ರೋಗಿಗಳು ದೂರದ ಊರಿಗೆ ಅಲೆದಾಡುವ ಸಮಸ್ಯೆ ಇಲ್ಲವಾಗಿದೆ ಎಂದರು.
ಖ್ಯಾತ ಹೃದ್ರೋಗ ತಜ್ಞ ಡಾ. ಮಂಜುನಾಥ ಎಸ್. ಪಂಡಿತ್ ಮಾತನಾಡಿ, ಹೃದ್ರೋಗವನ್ನು ಉತ್ತಮ ಆರೋಗ್ಯ ಶೈಲಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ತಡೆಗಟ್ಟಬಹುದು ಎಂದರು. ಈ ಕಾಲ್ನಡಿಗೆ ಜಾಥಾವು ಹೃದ್ರೋಗದ ಬಗ್ಗೆ ಅರಿವು ಮೂಡಿಸಲು ಟಿ.ಎಸ್.ಎಸ್. ಆಸ್ಪತ್ರೆಯಿಂದ ಹೊರಟು ಅಶ್ವಿನಿ ಸರ್ಕಲ್ ಮಾರ್ಗವಾಗಿ ಹಳೇ ಬಸ್ ಸ್ಟ್ಯಾಂಡ್ ತಲುಪಿ, ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಎಸ್.ಎಸ್. ಆಸ್ಪತ್ರೆಗೆ ತಲುಪಿತು. ಆಸ್ಪತ್ರೆಯ ವೈದ್ಯರು, ಸಿಬಂದಿಗಳು, ಆಡಳಿತ ಮಂಡಳಿಯ ಪ್ರಮುಖರು ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.