ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಸದ್ಯಕ್ಕಿಲ್ಲ!
Team Udayavani, Dec 8, 2018, 11:26 AM IST
ಶಿರಸಿ: ಸರಕಾರ ಕನ್ನಡ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ಕಲಾವಿದರನ್ನು ಅವಗಣಿಸು ತ್ತಿದೆ. ಸಾಧಕರಿಗೆ ಯಕ್ಷಗಾನ ಅಕಾಡೆಮಿ ವಾರ್ಷಿಕ ವಾಗಿ ನೀಡುವ ಗೌರವ ಪ್ರಶಸ್ತಿ ಘೋಷಿಸಿ ನಾಲ್ಕು ತಿಂಗಳಾದರೂ ಇನ್ನೂ ಪ್ರದಾನದ ಮಾತೇ ಎತ್ತುತ್ತಿಲ್ಲ. ಕಾರಣ ಕೇಳಿದರೆ ಸಚಿವರಿಗೆ ಪ್ರಶಸ್ತಿ ಪ್ರದಾನ ಮಾಡಲು ದಿನಾಂಕವೇ ಸಿಗುತ್ತಿಲ್ಲ!
ಸ್ವತಃ ಕಲಾವಿದೆಯಾದ ಜಯಮಾಲಾ, ಯಕ್ಷಗಾನ ವಿದ್ವಾಂಸರಾದ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರಿಬ್ಬರಿದ್ದೂ ಗೌರವ ಪ್ರಶಸ್ತಿ ಪ್ರದಾನವಾಗುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾ ಖೆಯ ಭಾಗವಾಗಿ ಯಕ್ಷಗಾನ, ಮೂಡಲಪಾಯ ಹಾಗೂ ಇತರ ಪ್ರಕಾರದ ಕಲೆಗಳ ಏಳ್ಗೆಗೆ ಈ ವರ್ಷದಿಂದ ನೂತನವಾಗಿ ಯಕ್ಷಗಾನ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತ್ತು. ಬಹುಕಾಲದ ಬೇಡಿಕೆಯ ಪರಿಣಾಮ ಬಯಲಾಟದಿಂದ ಯಕ್ಷಗಾನ ಅಕಾಡೆಮಿ ಪ್ರತ್ಯೇಕವಾಗಿ ತನ್ನದೇ ಅಸ್ತಿತ್ವವನ್ನೂ ಪಡೆದುಕೊಂಡಿತು.
ಹೀಗೆ ಘೋಷಣೆ ಆದ ಅಕಾಡೆಮಿ ನಾಡಿನ ಹಿರಿಯ ಕಲಾ ಸಾಧಕರಿಗೆ ಹಿಮ್ಮೇಳ, ಮುಮ್ಮೇಳ, ತಾಳಮದ್ದಲೆ, ಯಕ್ಷಗಾನ ಸಾಹಿತ್ಯದಲ್ಲಿ ಕಾರ್ಯ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಿತು. ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಲಿರುವ ಹಿರಿಯರಿಗೆ ಅಕ್ಟೋಬರ್ ಕೊನೆಯೊಳಗೆ ಪ್ರಶಸ್ತಿ ಪ್ರದಾನ ಎಂಬುದಾಗಿ ತಿಳಿಸಿತ್ತು.
ಏನಾಯ್ತು?
ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟಿಸಿ ನಾಲ್ಕು ತಿಂಗಳಾದರೂ ಇನ್ನೂ ಪ್ರದಾನವಾಗಲಿಲ್ಲ. ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಉಡುಪಿಯಲ್ಲಿ ಸ್ಥಳ ನಿಗದಿಯಾದರೂ ದಿನಾಂಕ ನಿಗದಿಯಾಗಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಇನ್ನೂ ಸ್ಪಷ್ಟವಾಗಿ ದಿನಾಂಕ ನೀಡದಿರುವುದೇ ಪ್ರಶಸ್ತಿ ಪ್ರದಾನ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ಯಾರ್ಯಾರಿಗೆ ಸಿಕ್ಕಿದೆ?
2017ರ ಪಾರ್ತಿ ಸುಬ್ಬ ಪ್ರಶಸ್ತಿ ಯಕ್ಷಗಾನ ಪ್ರಸಂಗ ಕತೃ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಲಭಿಸಿದೆ. ಗೌರವ ಪ್ರಶಸ್ತಿ ಖ್ಯಾತ ಮದ್ದಲೆ ವಾದಕ ಶಂಕರ ಭಾಗವತ್ ಯಲ್ಲಾಪುರ, ತಾಳಮದ್ದಲೆ ಅರ್ಥದಾರಿ ಬರೆ ಕೇಶವ ಭಟ್ಟ, ವಿದ್ವಾಂಸ, ಭಾಗವತ ಎಚ್.ಶ್ರೀಧರ ಹಂದೆ ಕೋಟ, ಮೂಡಲಪಾಯದ ಎ.ಎಂ.ಶಿವಶಂಕರಯ್ಯ, ಕರಿಯಣ್ಣನವರ್ ಅವರಿಗೆ ಲಭಿಸಿದೆ. ಪುಸ್ತಕ ಬಹುಮಾನ ಬಲಿಪ ನಾರಾಯಣ ಭಾಗತ್ ಹಾಗೂ ಡಾ| ಜಿ.ಎಸ್.ಭಟ್ಟ ಸಾಗರ ಅವರ ಪಾಲಾಗಿದೆ.
ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.