![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Sep 23, 2023, 8:22 PM IST
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಯಕ್ಷ ಶಾಲ್ಮಲಾ ಸಂಸ್ಥೆ ನೀಡುವ ರಾಜ್ಯ ಮಟ್ಟದ ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿಯನ್ನು ಹಿರಿಯ ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟ ಅವರಿಗೆ ಪ್ರದಾನ ಮಾಡಲಾಯಿತು.
ಶನಿವಾರದಿಂದ ಸ್ವರ್ಣವಲ್ಲೀಯಲ್ಲಿ ಆರಂಭಗೊಂಡ ಎರಡು ದಿನಗಳ ಯಕ್ಷೋತ್ಸವದಲ್ಲಿ ಶ್ರೀಮದ್‌ಜಗದ್ಗುರು ಶಂಕರಾಚಾರ‍್ಯ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಪ್ರದಾನ ಮಾಡಿ, ಸಂಸ್ಕಾರ ಉಳಿಸಿ ಬೆಳಸುವ ಕಲೆ ಯಕ್ಷಗಾನವನ್ನು ಉಳಿಸಬೇಕು. ಯಕ್ಷಗಾಣ ಉಳಿಸಿದರೆ ಸಮಾಜದಲ್ಲಿ ಸಂಸ್ಕಾರ ಉಳಿಸಲು ಸಾಧ್ಯ ಎಂದರು.
ಪ್ರಶಸ್ತಿ ಸ್ವೀಕರಿಸಿದ ಥಂಡಿಮನೆ ಶ್ರೀಪಾದ ಭಟ್ಟ, ‘ಗುರುವಿನ ಹೆಸರಿನ ಪ್ರಶಸ್ತಿಯನ್ನು ಶ್ರೀಗುರುಗಳ ಕರಗಳಿಂದ ಪಡೆಯುವ ಕ್ಷಣವೇ ಧನ್ಯ. ಯಕ್ಷಗಾನಕ್ಕೆ ಹೊಸತು ಕೊಡಲಾಗದೇ ಇದ್ದರೂ ಹಳತನ್ನು ಉಳಿಸಿಕೊಂಡಿದ್ದೇನೆ’ಎಂಬ ಸಮಾಧಾನ ಇದೆ ಎಂದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಅರ್ಥದಾರಿ ಅಶೋಕ ಭಟ್ಟ ಉಜಿರೆ, ಯಕ್ಷ ಶಾಲ್ಮಲಾದ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ, ಕಾರ್ಯದರ್ಶಿ ನಾಗರಾಜ್ ಜೋಶಿ, ಪ್ರಮುಖರಾದ ಶ್ರೀನಿವಾಸ ಮತ್ತಿಘಟ್ಟ, ಶಂಕರ ಭಟ್ಟ, ಸುನಿತಾ ಭಟ್ಟ ಥಂಡಿಮನೆ ಇತರರು ಇದ್ದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.