ಯಕ್ಷಗಾನ ವಿಶ್ವ ವಿದ್ಯಾಲಯವಿದ್ದಂತೆ: ಡಾ| ಹೆಗಡೆ
ಗಮನಸೆಳೆದ ಮಹಿಳಾ ಯಕ್ಷಗಾನ ಉತ್ಸವ, ಯಕ್ಷಗಾನ ನಾಡಿನ ಸಾಂಸ್ಕೃತಿಕ ಶಕ್ತಿ
Team Udayavani, Apr 27, 2022, 11:19 AM IST
ದಾಂಡೇಲಿ: ಕಲೆ, ನೃತ್ಯ, ಸಂಗೀತ, ಹಾಸ್ಯ, ವೇಷಭೂಷಣ, ಅರ್ಥಗಾರಿಕೆ, ತಾಳ, ಲಯಗಳ ಮೇಳೈಸುವಿಕೆ ಹೊಂದಿರುವ ಯಕ್ಷಗಾನ ಕಲೆ ಒಂದು ವಿಶ್ವವಿದ್ಯಾಲಯ. ಒಂದು ವಿಶಿಷ್ಟ, ಸಾಂಪ್ರಾದಾಯಿಕ ಹಾಗೂ ಈ ನೆಲದ ಸಂಸ್ಕೃತಿ ಪಸರಿಸುವ ಯಕ್ಷಗಾನ ಕಲೆಯನ್ನು ಮತ್ತಷ್ಟು ಪುನರುಜ್ಜೀವನಗೊಳಿಸುವ ಕಾರ್ಯ ನಿರಂತರವಾಗಿ ಆಗಬೇಕಾಗಿದೆ. ಸಾಂಪ್ರದಾಯಿಕವಾದ ಸೊಗಡನ್ನು ಬಿಟ್ಟುಕೊಡದೆ ತನ್ನ ಮೂಲಸತ್ವ ಉಳಿಸಿಕೊಂಡ ಕಲಾ ಪರಂಪರೆಯಲ್ಲಿ ಯಕ್ಷಗಾನ ಅಗ್ರಣೀಯವಾಗಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ಜಿ.ಎಲ್. ಹೆಗಡೆ ಹೇಳಿದರು.
ಅವರು ಮಂಗಳವಾರ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ವಿದ್ಯಾಧಿರಾಜ ಸಭಾಭವನದಲ್ಲಿ ಯಕ್ಷಗಾನ ಅಕಾಡೆಮಿ, ಶ್ರೇಯಾ ಅಭಿವೃದ್ಧಿ ಟ್ರಸ್ಟ್, ಹೋಟೆಲ್ ಸಂತೋಷ್ ಸಂಯುಕ್ತಾಶ್ರಯದಲ್ಲಿ ನಡೆದ ಮಹಿಳಾ ಯಕ್ಷಗಾನ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ಕಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ ಕಂಕಣಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಯಕ್ಷಗಾನ ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಕರಾವಳಿಯ ಗಂಡುಕಲೆ ಯಕ್ಷಗಾನ ಕಲೆಯನ್ನು ದಾಂಡೇಲಿಯಂತಹ ನಗರದಲ್ಲಿಯೂ ಪಸರಿಸುವಲ್ಲಿ ಈ ಕಾರ್ಯಕ್ರಮ ಯಶಸ್ಸನ್ನು ಪಡೆಯಲೆಂದು ಶುಭ ಕೋರಿದರು.
ಮುಖ್ಯ ಅತಿಥಿ ಗ್ರೀನ್ ಇಂಡಿಯಾ ಸಂಸ್ಥೆ ನಿರ್ದೇಶಕ ಡಾ| ಬಿ.ಪಿ. ಮಹೇಂದ್ರಕುಮಾರ್, ಮಹಿಳಾ ಯಕ್ಷಗಾನ ಉತ್ಸವ ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್ ಮಾತನಾಡಿದರು. ಪ್ರವಾಸೋದ್ಯಮಿ ಅನಿಲ್ ಪಾಕ್ಲೃಕರ ಅವರು ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಯಕ್ಷಗಾನ ಉತ್ಸವ ಮಾದರಿಯಾಗಲಿ ಎಂದರು.
ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕಿ ನಿರ್ಮಲಾ ಮಂಜುನಾಥ ಹೆಗಡೆಯವರು ಮಾತನಾಡಿದರು.
ಯಕ್ಷಗಾನ ಭಾಗವತ ವಿಷ್ಣುಮೂರ್ತಿರಾವ್, ನ್ಯಾಯವಾದಿ ವಿಶ್ವನಾಥ ಜಾಧವ ಉಪಸ್ಥಿತರಿದ್ದರು. ಸುಮಂಗಲಾ ದೇಸಾಯಿ ನೇತೃತ್ವ ವಹಿಸಿದ್ದರು. ಯಕ್ಷಗಾನ ಅಕಾಡೆಮಿ ರಿಜಿಸ್ಟಾರ್ ಎಸ್. ಎಚ್. ಶಿವರುದ್ರಪ್ಪ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.
ಕವಯತ್ರಿ ದೀಪಾಲಿ ಸಾಮಂತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ವಿಚಾರಗೋಷಿಠ ಹಾಗೂ ಮಹಿಳಾ ಯಕ್ಷಗಾನ ಕಾರ್ಯಕ್ರಮ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.