ಯಕ್ಷಗಾನ ಕನ್ನಡ ನಾಡಿನ ಶ್ರೇಷ್ಠ-ಪರಿಪೂರ್ಣ ಕಲೆ

ಗೋಡೆ ಅವರ ಕೊಡುಗೆ ಅನುಪಮವಾದದ್ದು ಎಂದರು.

Team Udayavani, Nov 1, 2021, 8:41 PM IST

ಯಕ್ಷಗಾನ ಕನ್ನಡ ನಾಡಿನ ಶ್ರೇಷ್ಠ-ಪರಿಪೂರ್ಣ ಕಲೆ

ಶಿರಸಿ: ಯಕ್ಷಗಾನ ಕನ್ನಡ ನಾಡಿನ ಶ್ರೇಷ್ಠ ಕಲೆ, ರಾಷ್ಟ್ರದ ಕಲೆ. ಒಂದು ಪರಿಪೂರ್ಣ ಕಲಾಪ್ರಕಾರಕ್ಕೆ ಏನೆಲ್ಲ ಬೇಕೋ ಅದೆಲ್ಲವೂ ಇದರಲ್ಲಿದೆ. ಯಕ್ಷಗಾನ ಕಲೆಯ ಸೀಮೋಲ್ಲಂಘನ ಆಗಲು ಎಲ್ಲರೂ ಹೆಗಲು ಕೊಡಬೇಕು ಎಂದು ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಹೇಳಿದರು.

ರವಿವಾರ ನಗರದ ಟಿಎಂಎಸ್‌ ಸಭಾಂಗಣದಲ್ಲಿ ಸಿದ್ದಾಪುರದ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ಪ್ರತಿಷ್ಠಾನದ ದಶಮಾನೋತ್ಸವ, ಯಕ್ಷಗಾನದ ದಿಗ್ಗಜ ಗೋಡೆ ನಾರಾಯಣ ಹೆಗಡೆ ಅವರಿಗೆ ಕೊಳಗಿ ಅನಂತ ಹೆಗಡೆ ಅವರ ನೆನಪಿನ ಅನಂತಶ್ರೀ ಪ್ರಶಸ್ತಿ ಪ್ರದಾನ, ಸಂಗೀತ, ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಣ ಇಲ್ಲದೇ ಬದುಕು ಹೇಗೆ ಎಂಬುದನ್ನು ಯಕ್ಷಗಾನ ಕಲೆ ಕಲಿಸುತ್ತದೆ. ಗೋಡೆ ನಾರಾಯಣ ಹೆಗಡೆ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು. ಭಾನುವಾರ ಪ್ರಕಟಗೊಂಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಯಕ್ಷಗಾನಕ್ಕೆ ಒಬ್ಬರಿಗೆ ಬಂದಿದೆ. ಗೋಪಾಲ ಆಚಾರಿ ಒಬ್ಬರು ಬಿಟ್ಟರೆ ಬೇರೆ ಯಾರ ಹೆಸರೂ ಇಲ್ಲ ಇದು ಬೇಸರದ ಸಂಗತಿ ಎಂದರು. ಸಾಹಿತ್ಯ ವಲಯಕ್ಕೂ ಯಕ್ಷಗಾನಕ್ಕೂ ಒಂದು ಮಿಸ್ಸಿಂಗ್‌ ಲಿಂಕ್‌ ಆಗಿದೆ. ಯಕ್ಷಗಾನ ಕಲೆಯ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿ ಇಡಲು ಪ್ರತಿಭಟನೆ ಮಾಡುವ ಸಂದರ್ಭವೂ ಆಗಿದೆ. ಅದಕ್ಕೋಸ್ಕರ ಅನೇಕ ಹೆಜ್ಜೆ ನಾವೇ ಕನ್ನಡದ ಸಾಹಿತ್ಯದ ಕಡೆಗೆ ಹೋಗಬೇಕಾಗಿದೆ ಎಂದರು.

ಪ್ರಶಸ್ತಿ ಪುರಸ್ಕೃತ ಗೋಡೆ ನಾರಾಯಣ ಹೆಗಡೆ ಮಾತನಾಡಿ, ಕೊಳಗಿ ಅನಂತ ಹೆಗಡೆ ಅವರು ನಾನು ಬಾಲ್ಯದಿಂದಲೂ ಒಡನಾಡಿಗಳು. ಅನ್ಯೋನ್ಯತೆ ಪರಸ್ಪರ ಇತ್ತು. ಅನಂತ ಹೆಗಡೆ ಅವರು ಸ್ಥಾಪಿತ ಕಲಾವಿದರಾಗಿದ್ದರು. ಒಮ್ಮೆ ಯಕ್ಷಗಾನ ರಂಗಕ್ಕೆ ಪ್ರವೇಶ ಆದರೆ ಅದರಿಂದ ಹೊರಗೆ ಬರಲಾಗುವುದಿಲ್ಲ. ಅಂಥ ಸೆಳೆತ ಈ ಕಲೆಯಲ್ಲಿದೆ ಎಂದರು. ವಿ. ಉಮಾಕಾಂತ ಭಟ್ಟ ಕೆರೇಕೈ ಅಭಿನಂದನಾ ಮಾತುಗಳನ್ನಾಡಿ, ಗೋಡೆ ಅವರು ಯಕ್ಷಗಾನ ರಂಗದಲ್ಲಿ 65 ವರ್ಷ ಕೆಲಸ ಮಾಡಿದವರು. ಅವರ ಆರೋಗ್ಯ ಯಕ್ಷಗಾನದ ಭಾಗ್ಯ. ಗೋಡೆ ಅವರ ಯಕ್ಷಗಾನದ ಅನುಭವ. ಗೋಡೆ ಅವರ ರಂಗಭೂಮಿ ಶ್ರಮ ಯಕ್ಷಗಾನದ ಶ್ರಮ. ಈ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಗೋಡೆ ಅವರ ಕೊಡುಗೆ ಅನುಪಮವಾದದ್ದು ಎಂದರು.

ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ, ಯಕ್ಷಗಾನ ಉಳಿಸಿ, ಬೆಳೆಸಲು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದರು. ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆ ಮುಖ್ಯಸ್ಥ ಪ್ರಮೋದ ಹೆಗಡೆ ಮಾತನಾಡಿ, ಸಾವಿಗಿಂತ ಕ್ರೂರಿ, ನಾವು ಅವರನ್ನು ಮರೆತು ಹೋಗುವದು. ಆದರೆ, ಪ್ರತಿಷ್ಠಾನವು ಅನಂತ ಹೆಗಡೆ ಅವರಂಥ ಕಲಾವಿದರನ್ನು ಜೀವಂತವಾಗಿಸಿದೆ. ಗೋಡೆ ಯುಗವಾಗಿಸಿದ್ದಾರೆ ಎಂದರು. ಸಿದ್ದಾಪುರ ಟಿಎಂಎಸ್‌ ಅಧ್ಯಕ್ಷ ಆರ್‌. ಎಂ.ಹೆಗಡೆ ಬಾಳೇಸರ, ಕಲಾ ಪ್ರೋತ್ಸಾಹಕ ಆರ್‌.ಜಿ ಭಟ್ಟ ವರ್ಗಾಸರ ಪಾಲ್ಗೊಂಡರು. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಹರ್ಷಿತಾ ಹೆಗಡೆ, ಆದಿತ್ಯ ಹೆಗಡೆ, ಪೂರ್ವಿ ಭಟ್ಟ, ರಾಜೇಂದ್ರ ಹೆಗಡೆ, ಅನಿರುದ್ಧ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು.

ಕಾಶ್ಯಪ ಪರ್ಣಕುಟಿ ಸ್ವಾಗತಿಸಿದರು. ಭಾಗವತ ಕೇಶವ ಹೆಗಡೆ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ ಸಂದೇಶ ವಾಚಿಸಿದರು. ಗಾಯತ್ರಿ ರಾಘವೇಂದ್ರ ಸಮ್ಮಾನ ಪತ್ರ ವಾಚಿಸಿದರು. ಗಣಪತಿ ಗುಂಜಗೋಡ ವಂದಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು. ಇದೇ ವೇಳೆ ಇತೀ¤ಚೆಗೆ ನಿಧನರಾದ ಹೊಸ್ತೋಟ ಮಂಜುನಾಥ ಭಾಗವತ, ಪ್ರೋ|ಎಂ.ಎ.ಹೆಗಡೆ, ಪದ್ಯಾಣ ಗಣಪತಿ ಭಟ್ಟ, ಪುನೀತ್‌ ರಾಜಕುಮಾರ ಅವರಿಗೆ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅನೇಕ ಯಕ್ಷಗಾನ ಪಾತ್ರಗಳ ಸಾಹಿತ್ಯ ಸೃಷ್ಟಿ ಆಗಬೇಕು. ನಾವು ಅದನ್ನು ಸಮಾಜದ ಮುಂದೆ ಗೊತ್ತಾಗುವ ಹಾಗೆ ಮಾಡಬೇಕು. ಆಗ ಕನ್ನಡಕ್ಕೆ ಎಂಟಲ್ಲ, ಹದಿನೆಂಟು ಜ್ಞಾನ ಪೀಠ ಬರಲಿದೆ.
ರವೀಂದ್ರ ಭಟ್ಟ ಹಿರಿಯ ಪತ್ರಕರ್ತರು

ಪ್ರಸಂಗ ಹಳತು. ಪಾತ್ರ ಶಿಲ್ಪ ಹೊಸದು. ಅಂಥ ಸತ್ವ ಪೂರ್ಣ ಕಲಾವಿದರು ಗೋಡೆ ಅವರು.
ವಿ.ಉಮಾಕಾಂತ ಭಟ್ಟ ಕೆರೇಕೈ, ವಿದ್ವಾಂಸರು

ಅನಂತ ಹೆಗಡೆ ಅವರು ನಾನು ಹಗಲು ಜೋಡಿ, ರಾತ್ರಿ ಯಕ್ಷಗಾನದಲ್ಲೂ ಜೋಡಿ. ಊಟಕ್ಕಿಲ್ಲದಿದ್ದರೂ ಆಗಿನ ಕಾಲದ ಸಂತೋಷ ಈ ಕಾಲದಲ್ಲಿ ಸಿಕ್ಕಿಲಕ್ಕಿಲ್ಲ. ಅಂಥ ಗೆಳೆತನವೂ ಇತ್ತು.
ಗೋಡೆ ನಾರಾಯಣ ಹೆಗಡೆ,
ಅನಂತಶ್ರೀ ಪ್ರಶಸ್ತಿ ಪುರಸ್ಕೃತರು.

ಟಾಪ್ ನ್ಯೂಸ್

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.