ಯಲ್ಲಾಪುರ:ಭಾರೀ ಗಾತ್ರದ ಹೊಂಡ ಮುಚ್ಚಿದ ಹಾಲಿ, ಮಾಜಿ ಜನಪ್ರತಿನಿಧಿಗಳು
Team Udayavani, Sep 10, 2022, 10:24 PM IST
ಯಲ್ಲಾಪುರ: ತಾಲೂಕಿನ ಚಂದ್ಗುಳಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಳಲಗಾಂವ್ ದಿಂದ ಚಂದ್ಗುಳಿ ದೇವಸ್ಥಾನ ಮತ್ತು ಮಾಗೋಡ ಜಲಪಾತಕ್ಕೆ ಹೋಗುವ ರಸ್ತೆಯಲ್ಲಿ ಸೇತುವೆ ಬುಡದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಭಾರೀ ಗಾತ್ರದ ಹೊಂಡವನ್ನು ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳಿಬ್ಬರು ಸೇರಿ ಮುಚ್ಚುವ ಮೂಲಕ ಮಾದರಿಯಾಗಿದ್ದಾರೆ.
ಈ ವರ್ಷವಷ್ಟೇ ಈ ರಸ್ತೆ ಮಾಡಲಾಗಿದ್ದರೂ ಸೇತುವ ಬಳಿ ಭಾರೀ ಗಾತ್ರದ ಹೊಂಡವಾಗಿತ್ತು.ಹೊಂಡದಲ್ಲಿ ಬಿದ್ದೆದ್ದರೆ ಮುಂದೆ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಬೀಳುವ ಸ್ಥಿತಿಯಿತ್ತು. ಇದನ್ನು ಈ ಭಾಗದ ಗ್ರಾ .ಪಂ.ಸದಸ್ಯ ಸುಬ್ಬಣ್ಣ ಉದ್ದಾಬೈಲ್,ಹಾಗೂ ತಾ.ಪಂ ನ ಮಾಜಿ ಸದಸ್ಯ ನಾಗರಾಜ ಕವಡಿಕೆರೆ ಸರಿಪಡಿಸಿ ಜನರಿಗಾಗುವ ತೊಂದರೆಯನ್ನು ಸದ್ಯ ಮುಕ್ತಗೊಳಿಸಿದ್ದಾರೆ.
ಈ ಹೊಂಡದ ಬಗ್ಗೆ ವ್ಯಾಪಕ ದೂರುಗಳು ಬಂದಿತ್ತು.ಸಂಬಂದಪಟ್ಟ ಇಲಾಖೆ ಗೆ ಕೂಡ ತಿಳಿಸಲಾಗಿತ್ತು. ಗ್ರಾ.ಪಂ ವಾರ್ಡ್ ಸಭೆ ಮತ್ತು ಗ್ರಾಮಸಭೆಗಳಲ್ಲಿ ವ್ಯಾಪಕವಾಗಿ ಜನರ ದೂರು ಕೇಳಿಬಂದಿತ್ತು.ಈಗ ತಾತ್ಕಾಲಿಕ ಮುಕ್ತಿ ದೊರೆತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.