![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 27, 2022, 5:04 PM IST
ಯಲ್ಲಾಪುರ: ತಾಲೂಕಿನ ಕಳಚೆಯ ಕೆಲವು ಗ್ರಾಮಸ್ಥರು ದಿಢೀರ್ ವಸತಿ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಬೆಳಗ್ಗೆ 7:30 ಗೆ ಕಳಚೆಯಿಂದ ಬಿಡಬೇಕಾದ ಬಸ್ಸನ್ನು 6:30 ಕ್ಕೆ ಬಿಡಲು ಆರಂಭಿಸಿದ್ದು ಇದರಿಂದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಮೊದಲಿನಂತೆ 7:30 ಕ್ಕೇ ಬಿಡಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಕಳಚೆಗೆ ಬಿಡುತ್ತಿದ್ದ ಆರು ಬಸ್‌ಗಳಲ್ಲಿ ಈಗ ಮೂರು ಸಲ ಮಾತ್ರ ಬಿಡುತ್ತಿದ್ದಾರೆ.
ಈ ಮೊದಲಿನಂತೆ ಸಮಯ ಮತ್ತು ಬಸ್‌ಗಳನ್ನು ಬಿಡಬೇಕೆಂದು ಒತ್ತಾಯಿಸಿದರು. ನಂತರ ಜನರ ಬೇಡಿಕೆಗೆ ಸಾರಿಗೆ ಅಧಿಕಾರಿಗಳು ಸ್ಪಂದಿಸಿದ ಬಳಿಕ ತಡೆಹಿಡಿದಿದ್ದ ಬಸ್ಸನ್ನು ಕಳಿಸಿಕೊಟ್ಟರು. ಗ್ರಾಮಸ್ಥರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೆಳಗ್ಗೆ 9ಕ್ಕೆ ಕಳಚೆಗೆ ಹೋಗಬೇಕಿದ್ದ ಬಸ್ಸು ಯಲ್ಲಾಪುರದಿಂದ ಬಿಡದ ಕಾರಣ ಕಳಚೆ ಮತ್ತು ಆ ಮಾರ್ಗದಲ್ಲಿ ಆ ವೇಳೆಗೆ ಹೋಗಬೇಕಿದ್ದ ಶಿಕ್ಷಕರು, ಆರೋಗ್ಯ ಸಿಬ್ಬಂದಿ ಮಲವಳ್ಳಿ ಬಸ್ಸಿಗೆ ತೆರಳಿ ತಳಕೆಬೈಲ್‌ದಿಂದ ನಡೆದುಕೊಂಡೇ ಹೋದರು. ಆದರೆ ಆ ನಂತರದಲ್ಲಿ ಪ್ರತಿಭಟನಾಕಾರರ ಬೇಡಿಕೆ ಮನವಿ ಸ್ವೀಕರಿಸಲು ಸಾರಿಗೆ ನಿಯಂತ್ರಕರೊಬ್ಬರೇ ಪ್ರತ್ಯೇಕ ಬಸ್ಸಿನಲ್ಲಿ ಕಳಚೆಗೆ ಹೋದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.