Yellapur 2 ಲಕ್ಷ ರೂ.ಮೌಲ್ಯದ ಶ್ರೀಗಂಧ ಸಹಿತ ಆರೋಪಿ ಬಂಧನ
Team Udayavani, Aug 17, 2023, 11:37 PM IST
ಯಲ್ಲಾಪುರ: ಅರಣ್ಯ ವಿಭಾಗದ ಮಂಚಿಕೇರಿ ವಲಯದ ಮಂಚಿಕೇರಿ ಬೀಟ ವ್ಯಾಪ್ತಿಯ ಮಂಚಿಕೇರಿಯ ಜನತಾ ಕಾಲೋನಿಯಲ್ಲಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಗಂಧದ ಕಟ್ಟಿಗೆಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದು ಓರ್ವನನ್ನು ಬಂಧಿಸಿದೆ.
52 ಕೆಜಿ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಶ್ರೀಗಂಧದ ಕಟ್ಟಿಗೆಯನ್ನು ಗುರುವಾರ ಜಪ್ತಿಪಡಿಸಿ ಆರೋಪಿ ಗಣೇಶ ಸೋಮು ಲಮಾಣಿ ಮಂಚಿಕೇರಿ ಎಂಬಾತನನ್ನು ಬಂಧಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಜಿ. ಹೆಗಡೆ ರವರ ಮಾರ್ಗದರ್ಶನದಲ್ಲಿ ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ಹಿಮವತಿ ಭಟ್ ರವರ ಮುಂದಾಳತ್ವದಲ್ಲಿ ಮಂಚಿಕೇರಿ ವಲಯದ ವಲಯ ಅರಣ್ಯಾಧಿಕಾರಿ ಅಮಿತಕುಮಾರ ಚವ್ಹಾಣ ರವರ ನೇತೃತ್ವದ ಕಾರ್ಯಾಚರಣೆಯ ತಂಡದಲ್ಲಿ ಮಂಚಿಕೇರಿ ಶಾಖೆಯ ಉಪವಲಯ ಅರಣ್ಯಾಧಿಕಾರಿಗಳಾದ ಪವನಕುಮಾರ ಲೋಕುರ,ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ ಪವಾರ , ಸಂಗಮೇಶ ಅಂಗಡಿ, ಕಲ್ಲಪ್ಪ. ಬರದೂರ, ಮಂಜುನಾಥ ಆಗೇರ, ಜಗದೀಶ ಪಾಲಕನವರ , ವಿರಾಜ್ ನಾಯಕ, ಹಾಗೂ ಗಸ್ತು ವನಪಾಲಕರಾದ ವಿಷ್ಣು ಪೂಜಾರಿ ಮತ್ತು ವಾಹನ ಚಾಲಕರಾದ ಗಂಗಾಧರ ರೆಡ್ಡಿ, ಮಂಜು ನಾಯ್ಕ ಮತ್ತು ಅರಣ್ಯ ವೀಕ್ಷಕರುಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.