ಬಸವನನ್ನು ಕಾಡಿ ಓಡಿಸಿದ್ದು ಮನುವಾದಿಗಳು
ವಚನ ಸಾಹಿತ್ಯ ಅರಿತರೆ ಇನ್ನೊಂದು ಕ್ರಾಂತಿ ನಿಶ್ಚಿತ •ಜಾತಿ-ಮೌಡ್ಯದ ಬೇರು ಕಿತ್ತಲು ಬಸವ ತತ್ವ ಅವಶ್ಯ
Team Udayavani, May 8, 2019, 10:20 AM IST
ವಾಡಿ: ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು. ಶ್ರೀ ಮುನೀಂದ್ರ ಸ್ವಾಮೀಜಿ, ಪಿಎಸ್‌ಐ ವಿಜಯಕುಮಾರ ಭಾವಗಿ ಇದ್ದರು.
ವಾಡಿ: ತಳವರ್ಗದ ಶರಣರನ್ನು ಅನುಭವ ಮಂಟಪದ ಮೂಲಕ ಸಂಘಟಿತರನ್ನಾಗಿಸಿ ಸಾಮಾಜಿಕ ಕ್ರಾಂತಿಗೆ ಮುಂದಾದ ಅಣ್ಣ ಬಸವಣ್ಣನನ್ನು ಮನುವಾದಿ ಜನರು ಹೆಜ್ಜೆ ಹೆಜ್ಜೆಗೂ ಕಾಡಿ ಓಡಿಸಿದರು ಎಂದು ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಹೇಳಿದರು.
ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಅಸ್ಪೃಶ್ಯತೆ ಪೋಷಿಸಿ ಅಸಮಾನತೆ ಆಚರಿಸುತ್ತಿದ್ದ ಮನುಸ್ಮೃತಿ ಸಿದ್ಧಾಂತಕ್ಕೆ ಸೆಡ್ಡುಹೊಡೆದ 12ನೇ ಶತಮಾನದ ಶರಣರು, ಅಂತರ್ಜಾತಿ ವಿವಾಹ ನೆರವೇರಿಸುವ ಮೂಲಕ ಜಾತಿ ತಾರತಮ್ಯದ ವಿರುದ್ಧ ಸಿಡಿದೆದ್ದರು. ಇದನ್ನು ಸಹಿಸದ ಪುರೋಹಿತಶಾಹಿ ಸನಾತನವಾದಿಗಳು ಬಸವಣ್ಣನವರನ್ನು ಕಲ್ಯಾಣದಿಂದ ಓಡಿಸಿದರು. ಬಸವಣ್ಣನವರ ವಚನ ಸಾಹಿತ್ಯ ಅರಿತರೆ ಮತ್ತೂಂದು ಕ್ರಾಂತಿ ಘಟಿಸುವುದರಲ್ಲಿ ಸಂಶಯವಿಲ್ಲ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪಿಎಸ್‌ಐ ವಿಜಯಕುಮಾರ ಭಾವಗಿ, ಭಾವಚಿತ್ರ ಪೂಜಿಸುವುದಷ್ಟೇ ಬಸವ ಜಯಂತಿಯಲ್ಲ. ಅವರ ಆದರ್ಶ, ವಿಚಾರಗಳನ್ನು ಪಾಲಿಸಬೇಕು. ಬಸವ ಚಿಂತನೆಯಿಂದ ವಿಶ್ವ ಶಾಂತಿಯ ಜಗತ್ತು ಸ್ಥಾಪನೆ ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೂಜ್ಯ ಮುನೀಂದ್ರ ಸ್ವಾಮೀಜಿ, ಮನದಾಳಕ್ಕಿಳಿದಿರುವ ಜಾತಿ ಎನ್ನುವ ಬೇರನ್ನು ಬುಡ ಸಮೇತ ಕಿತ್ತೆಸೆಯಲು ಬಸವಣ್ಣನ ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದರು.
ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಸಿದ್ಧಣ್ಣ ಬಿರಾದಾರ, ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ ಮಾತನಾಡಿದರು.
ಪುರಸಭೆ ಸದಸ್ಯ ಶರಣು ನಾಟೀಕಾರ, ವೀರಶೈವ ಸಮಾಜದ ಅಧ್ಯಕ್ಷ ಸಿದ್ಧಣ್ಣ ಕಲಶೆಟ್ಟಿ, ಯುವ ಘಟಕದ ಅಧ್ಯಕ್ಷ ಮಹಾಲಿಂಗ ಶೆಳ್ಳಗಿ, ಮುಖಂಡರಾದ ಕೊಳ್ಳಪ್ಪ ಸಿಂಧಗೀಕರ, ಶಾಂತಪ್ಪ ಶೆಳ್ಳಗಿ, ರಾಮಚಂದ್ರರೆಡ್ಡಿ, ಕಲ್ಯಾಣರಾವ ಶೆಳ್ಳಗಿ, ವಿಠ್ಠಲ ನಾಯಕ, ಶರಣಗೌಡ ಚಾಮನೂರ, ಬಸವರಾಜ ಕೀರಣಗಿ, ನಿಂಗಣ್ಣ ದೊಡ್ಡಮನಿ, ನಾಗರಾಜ ಗೌಡಪ್ಪನೋರ, ಕಾಶಿನಾಥ ಶೆಟಗಾರ, ಈರಣ್ಣ ಪಂಚಾಳ ಪಾಲ್ಗೊಂಡಿದ್ದರು. ವೀರಣ್ಣ ಯಾರಿ ಸ್ವಾಗತಿಸಿದರು, ಸಿದ್ಧಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.