ಬೆಳೆಗಳಿಗೆ ಸಮರ್ಪಕ ನೀರು ಒದಗಿಸಿ: ಭಗವಾನರೆಡ್ಡಿ
ರೈತರ ಆತ್ಮಹತ್ಯೆಗೆ ಸಾಲ ಮನ್ನಾ ಪರಿಹಾರವಲ್ಲ
Team Udayavani, May 23, 2019, 5:12 PM IST
ವಾಡಿ: ಹಳಕರ್ಟಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ರೈತ ಸಮಾವೇಶದಲ್ಲಿ ಆರ್‌ಕೆಎಸ್ ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ ಮಾತನಾಡಿದರು.
ವಾಡಿ: ತಾವು ರೈತಪರ ಎಂದು ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೆ ಬಂದ ತಕ್ಷಣ ಸಾಲಮನ್ನಾ ವಿಷಯ ಮುನ್ನೆಲೆಗೆ ತರುತ್ತವೆ. ರೈತನ ಜಮೀನಿನನಲ್ಲಿರುವ ಬೆಳೆ ಸಾಲುಗಳಿಗೆ ನೀರು ಖಾತ್ರಿಪಡಿಸುವ ಜತೆಗೆ ಉತ್ತಮ ಬೆಲೆ ನಿಗದಿ ಮಾಡಿದರೆ ಸಾಲ ಮನ್ನಾ ಕೂಗು ಏಳುವುದಿಲ್ಲ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ ಹೇಳಿದರು.
ಹಳಕರ್ಟಿ ಗ್ರಾಮದಲ್ಲಿ ಆರ್‌ಕೆಎಸ್ ರೈತ ಸಂಘಟನೆ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಥಮ ರೈತ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ರೈತರ ಆತ್ಮಹತ್ಯೆ ತಡೆಗಟ್ಟಲು ಮತ್ತು ಕೃಷಿ ಕ್ಷೇತ್ರದ ಬಿಕ್ಕಟ್ಟಿಗೆ ಸಾಲ ಮನ್ನಾ ಪರಿಹಾರವಲ್ಲ. ಸರಕಾರಗಳಿಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿಯಿದ್ದರೆ ಕೃಷಿ ಕ್ಷೇತ್ರ ಪ್ರಗತಿಗೆ ಬದ್ಧವಾಗಿದ್ದರೆ ಸಮಗ್ರ ಕೃಷಿ ನೀತಿ ಜಾರಿಗೊಳಿಸಬೇಕು. ರೈತರ ಆರ್ಥಿಕ ಸ್ಥಿತಿಗತಿ ಉತ್ತಮ ಪಡಿಸಲು ಒಣಬೇಸಾಯ ಪದ್ಧತಿ ಕೊನೆಗಾಣಬೇಕು. ಪ್ರತಿಯೊಬ್ಬ ಬಡ ರೈತನ ಜಮೀನಿಗೆ ನೀರಿನ ಕಾವಲಿ ಹರಿಯುವಂತಾಗಬೇಕು. ವೈಜ್ಞಾನಿಕ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೆಳೆದ ಬೆಳೆಗೆ ಸರಕಾರ ಉತ್ತಮ ದರ ನಿಗದಿಪಡಿಸಿ ಖರೀದಿಸಬೇಕು. ಅಂದಾಗ ಮಾತ್ರ ರೈತ ಚೇತರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಜಾಗತೀಕರಣ ನೀತಿಗಳಿಂದ ಕೃಷಿ ಕ್ಷೇತ್ರ ತತ್ತರಿಸಿ ಹೋಗಿದೆ. ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ದಲ್ಲಾಳಿಗಳ ಕಪಿಮುಷ್ಠಿಗೆ ಸಿಲುಕಿ ಗ್ರಾಮೀಣ ರೈತರು ಆರ್ಥಿಕ ದಿವಾಳಿತನಕ್ಕೆ ಬಲಿಯಾಗುತ್ತಿದ್ದಾರೆ. ವಿದೇಶಗಳಿಂದ ಬರುವ ದುಬಾರಿ ಬೀಜ, ರಸಗೊಬ್ಬರ, ಕೀಟನಾಶಕ ಔಷಧಗಳಿಂದ ಉತ್ತಮ ಫಸಲು ಕೈ ಸೇರುತ್ತಿಲ್ಲ. ಬೆಳೆ ವಿಮೆಯಲ್ಲಿನ ದೋಷಗಳನ್ನು ಸರಿಪಡಿಸಬೇಕು. ಕೃಷಿ ಮಾರುಕಟ್ಟೆ ಬಲಪಡಿಸಬೇಕು. ಹಸಿ ಬರ ಮತ್ತು ಒಣ ಬರದಿಂದ ಬೇಸತ್ತ ರೈತರ ಮೇಲೆ ನೂರಾರು ರೈತ ವಿರೋಧಿ ನೀತಿಗಳನ್ನು ಹೇರಿ ಗಾಯಕ್ಕೆ ಮತ್ತಷ್ಟು ಬರೆ ಹಾಕಲಾಗುತ್ತಿದೆ. ಈ ಕಾರಣಕ್ಕೆ ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿಷಾಧಿಸಿದರು.
ಜಿಲ್ಲಾ ರೈತ ಮುಖಂಡ ಮಹೇಶ ಎಸ್.ಬಿ.ಮಾತನಾಡಿ, ಸಂಘಟಿತ ಹೋರಾಟದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರವಿದೆ. ಕಲಬುರಗಿ ಜಿಲ್ಲೆಯಲ್ಲಿ ನೀರಾವರಿ ಬೇಡಿಕೆ ಹೆಚ್ಚಿದೆ. ಚಿತ್ತಾಪುರ ತಾಲೂಕಿನ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸರಕಾರಗಳ ಗಮನ ಸೆಳೆಯಲು ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.
ಮುಖಂಡರಾದ ರಾಘವೇಂದ್ರ ಅಲ್ಲಿಪುರ, ಮಲ್ಲಣ್ಣ ದಂಡಬಾ, ಗುಂಡಣ್ಣ ಕುಂಬಾರ ಇದ್ದರು.
ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭದಲ್ಲಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಚಿತ್ತಾಪುರ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ರಾಘವೇಂದ್ರ ಅಲ್ಲಿಪುರ (ಅಧ್ಯಕ್ಷ), ಗುಂಡಣ್ಣ ಕುಂಬಾರ, ಎಂ.ಸಿದ್ಧರಾಜ, ಮಲ್ಲಿಕಾರ್ಜುನ ಗಂದಿ (ಉಪಾಧ್ಯಕ್ಷರು), ಮಲ್ಲಣ್ಣ ದಂಡಬಾ (ಕಾರ್ಯದರ್ಶಿ), ವಿಠ್ಠಲ ರಾಠೊಡ (ಜಂಟಿ ಕಾರ್ಯದರ್ಶಿ) ಹಾಗೂ ದೊಡ್ಡಪ್ಪ ಹೊಸೂರ, ಅಯ್ಯಪ್ಪ ಉಳಗೋಳ, ನಾಗಪ್ಪ ಇಸಬಾ, ಭೀಮಪ್ಪ ಮೋಟ್ನಳ್ಳಿ, ಈರಪ್ಪ ಜೈನಾಪುರ, ಭೀಮರಾಯ ಇಸಬಾ, ಮನೋಜ ಕೋಟಗಿ, ಚೌಡಪ್ಪ ಗಂಜಿ, ಈರಣ್ಣ ಲೋಕನಳ್ಳಿ, ನಾಗರಾಜ ಇಸಬಾ, ಕಾಂತಪ್ಪ ನಾಲಡಗಿ, ಬಸಪ್ಪ ನಾಲವಾರ, ಸಾಯಬಣ್ಣ ಛತ್ರಿ, ಆಕಾಶ ಛತ್ರಕಿ, ಮಹೆಬೂಬಸಾಬ ಮೋಮಿನ್, ನಜೀರ್ ಅಹ್ಮದ್, ಮಲ್ಲಿಕಾರ್ಜುನ ಕೋಲಕುಂದಿ, ಶಿವಯೋಗಿ ಬುಳ್ಳಾ, ಶಿವಪ್ಪ ಛತ್ರಿ, ಶರಣಬಸಪ್ಪ ಇಸಬಾ, ಶರಣಪ್ಪ ಜೈನಾಪುರ, ಈರಪ್ಪ ಹಿಟ್ಟಿನ್, ರಮೇಶ ಭಟ್ಟ, ನಿಂಗಪ್ಪ ಹಿಟ್ಟಿನ ಸದಸ್ಯರಾಗಿ ಆಯ್ಕೆಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.