ವಾಡಿ ಗೂಡಿನಲ್ಲಿ ಹಂದಿಗಳೇ ಹೆಚ್ಚು!
ಬೆದರಿಸಿದರೆ ಬೆನ್ನಟ್ಟಿಬರುತ್ತವೆ ದೂರಿಗೂ ಹೆದರುತ್ತಿಲ್ಲ ಸಾಕಾಣಿಕೆದಾರರು
Team Udayavani, Sep 27, 2019, 12:48 PM IST
ಮಡಿವಾಳಪ್ಪ ಹೇರೂರು
ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರತಿಯೊಂದು ಬಡಾವಣೆಯಲ್ಲಿ ನೂರಾರು ಹಂದಿಗಳ ಹಿಂಡು ಪ್ರತ್ಯೇಕವಾಗಿ ಹರಿದಾಡುತ್ತಿದ್ದು, ಸ್ವಚ್ಛ ಭಾರತ ಅಭಿಯಾನ ಯೋಜನೆಗೆ ಇದು ಮಾರಕವಾಗಿದೆ. ರಸ್ತೆಗಳ ಮೇಲೆ ನಿರ್ಭಯವಾಗಿ ಸಂಚರಿಸುವ ಈ ಹಂದಿಗಳ ಸೈನ್ಯ, ಪಾದಚಾರಿಗಳನ್ನು ಕಂಡರೆ ದುರುಗುಟ್ಟುತ್ತವೆ. ಬೆದರಿಸಿ ಓಡಿಸಲು ಪ್ರಯತ್ನಿಸಿದರೆ ಬೆನ್ನಟ್ಟಿ ಬರುತ್ತವೆ!
ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಸ್ವಚ್ಛ ನಗರವನ್ನಾಗಿ ಪರಿವರ್ತಿಸಲು ಪುರಸಭೆ ಆಡಳಿತವು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ . ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ. ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ಮೂಲಕ ಬೀದಿ ಬದಿಯ ಕಸದ ತೊಟ್ಟಿಗಳೇ ಇಲ್ಲದಂತೆ ಕ್ರಮ ಕೈಗೊಂಡಿದೆ.
ಇಂದಿನ ಕಸ ಇಂದೇ ವಿಲೇವಾರಿ ಮಾಡಲು ಪಣತೊಟ್ಟು ಹರಸಾಹಸ ಮಾಡಲಾಗುತ್ತಿದೆ. ಆದರೆ ನಗರದಲ್ಲಿ ಸ್ವಚ್ಛತೆ ಹಾಳುಮಾಡುವ ಜತೆಗೆ 4000ಕ್ಕೂ ಹೆಚ್ಚು ಹಂದಿಗಳು ಸಾರ್ವಜನಿಕರ ನೆಮ್ಮದಿ ಕದಡುತ್ತಿದ್ದರೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಡಾವಣೆಗಳ ಸಂದಿಗೊಂದಿಗಳಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಹಾಗೂ ವಿವಿಧ ರಸ್ತೆಗಳಲ್ಲಿ ಗುಂಪು-ಗುಂಪಾಗಿ ಕೊಬ್ಬಿದ ಹಂದಿಗಳ ಹಿಂಡು ಸಾರ್ವಜನಿಕ ಬದುಕಿಗೆ ಹಿಂಸೆ ನೀಡುತ್ತಿದೆ. ಕಸದ ತಿಪ್ಪೆಯಲ್ಲಿ
ಮತ್ತು ಚರಂಡಿಗಳ ಗಲೀಜು ನೀರಿನಲ್ಲಿ ಮೈ ತಂಪಾಗಿಸಿಕೊಳ್ಳುವ ಮೂಲಕ ಕೊಳೆಯನ್ನೆಲ್ಲಾ ರಸ್ತೆಗೆ ಹರಡಿ ಆಸ್ವತ್ಛತೆಗೆ ಕಾರಣವಾಗುತ್ತಿವೆ. ಇದರ ಮಧ್ಯೆ ಸತ್ತು ಬೀಳು ಹಂದಿಗಳು ಬೀದಿಪಾಲಾಗಿ ದುರ್ವಾಸನೆ ಹಬ್ಬುತ್ತಿದೆ.
ಪಟ್ಟಣದಲ್ಲಿ ತೆರೆದ ಶೌಚಾಲಯ ಮತ್ತು ಬಯಲು ಶೌಚಾಲಯಕ್ಕೆ ಕಡಿವಾಣ ಬಿದ್ದರೂ ಹಂದಿ ಸಾಕಾಣಿಕೆಗೆ ಮಾತ್ರ ಹೇಳಿ ಮಾಡಿಸಿದ ಜಾಗವಾಗಿದೆ. ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದು ಸ್ಥಳೀಯರು ದೂರು ನೀಡುತ್ತಿದ್ದಂತೆ ಸಾಕಾಣಿಕೆದಾರ
ಮತ್ತಷ್ಟು ಹಂದಿಗಳನ್ನು ತಂದು ನಗರದಲ್ಲಿ ಬಿಡುವ ಮೂಲಕ ಆಡಳಿತಕ್ಕೆ ಸವಾಲು ಹಾಕಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.