ಬರಗಾಲ: ಮೇವು-ನೀರಿಗಾಗಿ ಗೋಗೆರೆಯುತ್ತಿವೆ ಜಾನುವಾರು

Team Udayavani, May 9, 2019, 11:13 AM IST

9-May-9

ವಾಡಿ: ಚಿತ್ತಾಪುರ ಮತ್ತು ವಾಡಿ ವಲಯ ವ್ಯಾಪ್ತಿಯ ಅಡವಿಯೊಳಗೆ ಗೋವುಗಳು ನೀರು, ಮೇವು, ನೆರಳಿಗಾಗಿ ಹುಡುಕಾಟ ನಡೆಸುತ್ತಿವೆ.

ವಾಡಿ: ಬೆಂಕಿ ಕಾರುವ ಮುಗಿಲ ಸೂರ್ಯನಿಂದ ನೀರು, ನೆರಳು, ಮೇವು ಕೇಳುವ ಜಾನುವಾರುಗಳ ಆರ್ಥನಾದ ಒಂದೆಡೆಯಾದರೆ, ಮರಗಳಿಲ್ಲದೆ ಬರಡಾದ ಭೂಮಿಯೊಳಗೆ ಅಂತರ್ಜಲ ಹುಡುಕುತ್ತಿರುವ ಮಾನವನ ದುಸ್ಸಾಹಸ ಇನ್ನೊಂದೆಡೆ. ಇವು ಪ್ರಸಕ್ತ ಸಾಲಿನ ರಣಭಯಂಕರ ಬರಗಾಲ ಅನಾವರಣ ಗೊಳಿಸುತ್ತಿರುವ ಮನಕಲುಕುವ ದೃಶ್ಯಗಳು.

ಮೇವು ಅರಸಿ ಬೆಳಗ್ಗೆ ಮನೆಯಿಂದ ಹೊರಡುವ ಜಾನುವಾರುಗಳು ಅರಣ್ಯ ಅಲೆದರೂ ಹಿಡಿಕೆ ಹಸಿ ಮೇವು ಕಾಣದೆ ಕಂಗಾಲಾಗುತ್ತಿವೆ. ಬೊಗಸೆ ನೀರು ಸಿಗದೆ ಪರದಾಡುತ್ತಿವೆ. ನಿರ್ಜನ ನೆಲದ ಮೇಲೆ ಮರಗಳನ್ನು ಹುಡುಕಿ ನೆರಳಿನ ಆಸರೆ ಪಡೆಯಲು ಇಲ್ಲದ ಹರಸಾಹಸ ಪಡುತ್ತಿವೆ. ಗ್ರಾಪಂ ನಿರ್ಮಿಸಿದ ನೀರಿನ ತೊಟ್ಟಿಗಳು, ಕೃಷಿ ಇಲಾಖೆ ಕೊರೆಯಿಸಿದ ಕೃಷಿ ಹೊಂಡಗಳು, ನೀರಾವರಿಗಾಗಿ ನಿರ್ಮಿಸಲಾದ ಕೆನಲ್ ನಾಲೆಗಳು ಬತ್ತಿ ಬಣಗುಡುತ್ತಿವೆ. ಗಂಗಾ ಕಲ್ಯಾಣದ ಬೋರ್‌ವೆಲ್ಗಳಿಂದಲೂ ಹನಿ ನೀರು ಬರುತ್ತಿಲ್ಲ. ಹಿಂಗದ ಜಲದಾಹ ಮೂಕ ಜಾನುವಾರುಗಳ ಜೀವ ಹಿಂಡಿ ಹಿಪ್ಪೆಯಾಗಿಸುತ್ತಿದೆ.

ಬಿಸಿಲ ಪ್ರತಾಪ ಏರುತ್ತಿದ್ದಂತೆ ಭೂಮಿ ತೇವಾಂಶ ಕಳೆದುಕೊಂಡಿದೆ. ನೆಲದಾಳದ ನೀರಿನ ಸೆಲೆಗಳು ಪರಸ್ಪರ ಸಂಪರ್ಕ ಕಡಿದುಕೊಂಡಿವೆ. ನದಿ, ಹಳ್ಳ, ಬಾವಿ, ಬೋರ್‌ವೆಲ್ ಸೇರಿದಂತೆ ಇನ್ನಿತರ ಜಲಮೂಲಗಳು ನೀರಿಲ್ಲದೆ ಝಳ-ಝಳವಾಗಿ ಜಲಚರಗಳಿಗೆ ಜೀವ ಸಂಕಟ ತಂದಿಟ್ಟಿದೆ. ಅಡವಿಯೊಳಗಿನ ಮರದ ನೆರಳು ಮತ್ತು ಮೇವು ದನಕರುಗಳ ಪಾಲಿಗೆ ಗಗನಕುಸುಮವಾಗಿದೆ. ಪರಿಣಾಮ ಡಾಂಬರ್‌ ರಸ್ತೆಗಳ ಮೇಲೆ ನಿಂತು ಗೋವುಗಳು ಮೇವು, ನೆರಳು, ನೀರಿಗಾಗಿ ಗೋಗೆರೆಯುತ್ತಿವೆ.

ಎಲ್ಲಿದ್ದಾರೆ ಗೋ ಪ್ರೇಮಿಗಳು?: ದನಕರುಗಳನ್ನು ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿದೆ ಎನ್ನುವ ಸುದ್ದಿ ತಿಳಿದು ದಿಢೀರ್‌ ದೌಡಾಯಿಸಿ ಬರುವ ಗೋ ರಕ್ಷಕರು, ಹೋರಾಡಿ ರಕ್ಷಣೆ ಮಾಡುವ ಮೂಲಕ ಗೋಶಾಲೆಗಳಿಗೆ ಬಿಟ್ಟು ಸೇವಾ ಮನೋಭಾವ ಮೆರೆಯುತ್ತಿದ್ದರು. ಈಗ ಅದೇ ಗೋವುಗಳು ನೀರು, ಮೇವಿಗಾಗಿ ನರಕಯಾತನೆ ಅನುಭವಿಸುತ್ತಿದ್ದರೂ ಅವರ ಸುಳಿವಿಲ್ಲ. ಪ್ರಾಣಿ, ಪಕ್ಷಿಗಳಿಗೆ ನೀರುಣಿಸುವ ದಯಾ ಸಂಘಗಳು ಬೆಳಕಿಗಿಲ್ಲ. ವೃತ್ತಗಳಲ್ಲಿ, ಜನನಿಬೀಡ ಸ್ಥಳಗಳಲ್ಲಿ ಮಣ್ಣಿನ ಮಡಿಕೆಯಿಟ್ಟು ಜನರಿಗೆ ನೀರಿನ ಸೇವೆ ನೀಡುತ್ತಿದ್ದ ಮನಸ್ಸುಗಳಿಗೂ ಈ ಸಲ ಕೊರತೆ ಉಂಟಾಗಿದೆ.

ಹಳ್ಳಕೊಳ್ಳಗಳಿಗೆ ತಡೆಗೋಡೆ ಕಟ್ಟಿ, ಕೆರೆಕಟ್ಟೆ ನಿರ್ಮಿಸಿ ಜಲಮೂಲ ರಕ್ಷಣೆ ಮಾಡಬೇಕಾದ ಆಳುವ ದೊರೆಗಳು, ಪ್ರಜೆಗಳ ಗೋಳಾಟಕ್ಕೂ, ಜಲಚರಗಳ ಪ್ರಾಣ ಸಂಕಟಕ್ಕೂ, ಪ್ರಾಣಿ, ಪಕ್ಷಿ, ಜಾನುವಾರುಗಳ ನರಳಾಟಕ್ಕೂ ಕಾರಣವಾಗಿದ್ದಾರೆ. ಒಟ್ಟಾರೆ ಬರದ ನಾಡಿನಲ್ಲಿ ಬರಗಾಲ ಬಡವರ ಎದೆ ಮೇಲೆ ಬರೆ ಎಳೆದಿದೆ. ಪ್ರಜಾತಂತ್ರದ ಆಡಳಿತ ವ್ಯವಸ್ಥೆಯಲ್ಲಿ ಜನರ ಪಾಲಿಗೆ ಬೇಸಿಗೆ ಎನ್ನುವುದು ಪ್ರತಿ ವರ್ಷವೂ ತೀವ್ರ ಸಂಕಟದ ಕಾಲವಾಗಿ ಪರಿಣಮಿಸುತ್ತಿದೆ.

ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.