ಶಾಲೆ ಮೇಲಿನ ವಿದ್ಯುತ್‌ ತಂತಿಗೆ ವಿದ್ಯಾರ್ಥಿ ಬಲಿ

5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದ ಶಾಸಕ ಪ್ರಿಯಾಂಕ್‌ ಖರ್ಗೆ

Team Udayavani, Jul 29, 2019, 10:08 AM IST

29-July-3

ವಾಡಿ: ವಿದ್ಯುತ್‌ ತಂತಿ ತಗುಲಿ ಮೃತಪಟ್ಟ ಬಾಲಕ ಮಹ್ಮದ್‌ ಕೈಫ್‌ ಶವದ ಎದುರು ಹೆತ್ತವರು ಮತ್ತು ಪೋಷಕರು ರೋಧಿಸಿದರು.

ವಾಡಿ: ಒಂಭತ್ತು ವರ್ಷದ ವಿದ್ಯಾರ್ಥಿಯೊಬ್ಬ ವಿದ್ಯುತ್‌ ತಂತಿ ತುಲಿ ಮೃತಪಟ್ಟ ಘಟನೆ ರವಿವಾರ ರಾವೂರ ಗ್ರಾಮದಲ್ಲಿ ಸಂಭವಿಸಿದೆ.

ರಾವೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಹ್ಮದ್‌ ಕೈಫ್‌ ಮಹೆಬೂಬ್‌ ಮೌಜನ್‌ (9) ಮೃತಪಟ್ಟ ಬಾಲಕ.

ರವಿವಾರ ಬೆಳಗ್ಗೆ ಈ ಬಾಲಕ ಶಾಲಾ ಅಂಗಳದಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಟದಲ್ಲಿ ತೊಡಗಿದ್ದ. ಈ ವೇಳೆ ಶಾಲಾ ಕಟ್ಟಡದ ಮೇಲೆ ಚೆಂಡು ಬಿದ್ದಿತ್ತು. ಚೆಂಡು ತರಲು ಕಟ್ಟಡದ ಮಾಳಿಗೆ ಹತ್ತಿದ ಬಾಲಕ ಮಹ್ಮದ್‌ ಕೈಫ್‌ಗೆ ಶಾಲೆ ಮೇಲಿಂದ ಹಾಯ್ದು ಹೋದ ಹೈವೋಲ್r ವಿದ್ಯುತ್‌ ತಂತಿ ತಗುಲಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪೋಷಕರ ಆಕ್ರಂದನ: ಹೆತ್ತ ಕರುಳಿನ ಕುಡಿ ಸತ್ತು ಹೆಣವಾಗಿ ಬಿದ್ದಿದ್ದನ್ನು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ಹಿರಿಯ ಮುಖಂಡರಾದ ಶ್ರೀನಿವಾಸ ಸಗರ, ಗ್ರಾಪಂ ಸದಸ್ಯ ಯುನ್ಯೂಸ್‌ ಪ್ಯಾರೆ, ಮಶಾಕ್‌ ಸೇಠ, ಶರಣು ಜ್ಯೋತಿ, ಮಹೆಬೂಬ ಧರಿ, ಫೆರೋಜ್‌ ಮೌಜನ, ಅಮೀರ ಮೂಸಾವಾಲೆ ಕುಟುಂಬದವರನ್ನು ಸಮಾಧಾನ ಪಡಿಸಿದರು.

ಐದು ಲಕ್ಷ ರೂ. ಪರಿಹಾರ ಭರವಸೆ: ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕ್ಷೇತ್ರದ ಶಾಸಕ ಪ್ರಿಯಾಂಕ್‌ ಖರ್ಗೆ, ಶವ ಪರೀಕ್ಷೆಯ ವರದಿ ಬಂದ ತಕ್ಷಣವೇ ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜೆಸ್ಕಾಂ ಎಂಡಿ ಅವರೊಂದಿಗೆ ಮಾತನಾಡಿ ಪರಿಹಾರ ಚೆಕ್‌ ವಿತರಿಸುವಂತೆ ಆದೇಶಿಸಿದ್ದೇನೆ. ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಟಾಪ್ ನ್ಯೂಸ್

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ

Hamas: ಸಿನ್ವರ್‌ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್‌ ಯತ್ನ?

Hanunma–manasa

BBK11: ಮಾನಸ ಭಾರೀ ಸೌಂಡ್ ಮಾತ್ರ, ಬಳಿಕ ಠುಸ್ ಬಾಂ*ಬ್ ಎಂದ ಹನುಮಂತು!

Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!

YS Vijayamma: ಶರ್ಮಿಳಾಗೆ ಅನ್ಯಾಯ ಆಗಿದೆ… ಜಗನ್‌ ವಿರುದ್ಧ ತಾಯಿ ಬಹಿರಂಗ ಪತ್ರ

Delhi: ಆಯುಷ್ಮಾನ್‌ ಭಾರತಕ್ಕಿಂತ ದೆಹಲಿ ಮಾದರಿ ಉತ್ತಮ: ಪ್ರಧಾನಿಗೆ ಕೇಜ್ರಿ ತಿರುಗೇಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

man-a

Surathkal: ಕೆರೆ ಕಾಮಗಾರಿಯ ವೇಳೆ ಬಿದ್ದು ಕಾರ್ಮಿಕ ಮೃತ್ಯು

10

Belthangady: ಹಾಡಹಗಲೇ ಲಾೖಲದಲ್ಲಿ ಬೈಕ್‌ ಕದ್ದ ಕಳ್ಳ

accident2

Padubidri: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ

Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ

Hamas: ಸಿನ್ವರ್‌ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್‌ ಯತ್ನ?

Hamas: ಸಿನ್ವರ್‌ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್‌ ಯತ್ನ?

Hanunma–manasa

BBK11: ಮಾನಸ ಭಾರೀ ಸೌಂಡ್ ಮಾತ್ರ, ಬಳಿಕ ಠುಸ್ ಬಾಂ*ಬ್ ಎಂದ ಹನುಮಂತು!

Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!

Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.