15 ರಿಂದ ವೇದಾವತಿ ನದಿ ಉಳಿಸಿ ಅಭಿಯಾನ
ಹೋರಾಟ ಫಲಪ್ರದವಾಗದಿದ್ದರೆ ಡಿಸಿ ಕಚೇರಿ ಎದುರು ಆಮರಣಾಂತ ಉಪವಾಸ
Team Udayavani, May 10, 2019, 4:43 PM IST
ಚಿತ್ರದುರ್ಗ: ವೇದಾವತಿ ನದಿ ಪಾತ್ರದಲ್ಲಿ ಹಾಗೂ ಹೊಸದುರ್ಗದ ಆರು ಬ್ಲಾಕ್‌ಗಳಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಮೇ 15 ಹಾಗೂ 16 ರಂದು ಪಾದಯಾತ್ರೆಯ ಮೂಲಕ ‘ವೇದಾವತಿ ನದಿ ಉಳಿಸಿ’ ಅಭಿಯಾನವನ್ನು ಆರಂಭಿಸುವುದಾಗಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ತಿಳಿಸಿದರು.
ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಗುರುವಾರ ಮನವಿ ಸಲ್ಲಿಸಿದ ಬಳಿಕ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಹೊಸದುರ್ಗ ತಾಲೂಕಿನ ಕೊರಟಿಕೆರೆ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ವೇದಾವತಿ ನದಿ ಮೂಲಕ ಬೇವಿನಹಳ್ಳಿವರೆಗೆ ನಡೆಸಲಾಗುವುದು. ಮೇ 17ರಂದು ಹೊಸದುರ್ಗ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ನೀಡುತ್ತೇವೆ. ಹೋರಾಟ ಫಲಪ್ರದವಾಗದಿದ್ದರೆ ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಕಾನೂನಾತ್ಮಕ ಗಣಿಗಾರಿಕೆಗೆ ಅಡ್ಡಿ ಮಾಡುವುದಿಲ್ಲ. ಆದರೆ ಗಣಿ ಗುತ್ತಿಗೆಯ ನಿಬಂಧನೆಗಳನ್ನು ಗಾಳಿಗೆ ತೂರಿ 15 ರಿಂದ 30 ಅಡಿ ಆಳವದವರೆಗೆ ನದಿ ಪಾತ್ರದ ಒಡಲು ಬಗೆಯಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದಿದ್ದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ ಹಾಗೂ ರೈತರ ತೋಟಗಳು ಒಣಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲವಿದ್ದು, ಕುಡಿಯುವ ನೀರಿಗೆ ಅಭಾವವಿದೆ. ಚಳ್ಳಕೆರೆ ತಾಲೂಕಿನಲ್ಲಿ ಮೇವು- ನೀರಿಲ್ಲದೆ ದೇವರ ಎತ್ತುಗಳು ಸಾಯುತ್ತಿವೆ. ಹೊಸದುರ್ಗ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಇನ್ನೂರು ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ಇದಕ್ಕೆ ವೇದಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದೇ ಕಾರಣ ಎಂದು ಆರೋಪಿಸಿದರು.
ಒಂದು ಟನ್ ಮರಳಿಗೆ 80 ರೂ. ರಾಯಧನದ ಬದಲಿಗೆ ಹರಾಜಿನಲ್ಲಿ 700 ರೂ.ನಿಂದ ಸಾವಿರದವರೆಗೆ ಕೂಗುತ್ತಿದ್ದಾರೆ. ನಿಯಮದ ಪ್ರಕಾರ ಒಂದೂವರೆ ಮೀಟರ್‌ನಷ್ಟು ಆಳ ಮಾತ್ರ ತೆಗೆಯಬೇಕು. ಇದ್ಯಾವುದನ್ನು ಪಾಲಿಸುತ್ತಿಲ್ಲ. ಅಕ್ರಮ ಪ್ರಶ್ನಿಸುವ ರೈತರ ಮೇಲೆ ರೌಡಿಗಳ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ. ಅಮಾಯಕರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಕೇಸು ಹಾಕುವ ಬೆದರಿಕೆ ಒಡ್ಡಲಾಗುತ್ತಿದೆ. ಬೇರೆ ಊರಿನ ಗೂಂಡಾಗಳು ಹೊಸದುರ್ಗದಲ್ಲಿ ಬಂದು ಸೇರಿಕೊಂಡಿದ್ದಾರೆ. ಜಿಲ್ಲಾಡಳಿತ ಇದನ್ನು ಕಂಡೂ ಕಾಣದಂತೆ ಮೌನ ವಹಿಸಿದೆ. ಪೊಲೀಸರು ಅಮಾಯಕರ ಮೇಲೆ ಕೇಸು ದಾಖಲಿಸುತ್ತಿದ್ದಾರೆ ಎಂದು ದೂರಿದರು. ಹೊಸದುರ್ಗ ಕ್ಷೇತ್ರದ ಒಂದೊಂದು ಹಳ್ಳಿಯಲ್ಲಿಯೂ ಸಾವಿರ ಅಡಿಗಳಂತೆ ಐದಾರು ಕೊಳವೆಬಾವಿ ಕೊರೆಸಿದರೂ ನೀರು ಲಭ್ಯವಾಗುತ್ತಿಲ್ಲ. ಸ್ಟಾಕ್‌ಯಾರ್ಡ್ ಜಾಗವನ್ನು ಭೂ ಪರಿವರ್ತನೆ ಮಾಡಿಸಿಲ್ಲ, ಸಿಸಿ ಕ್ಯಾಮೆರಾ ಅಳಡಿಸಿಲ್ಲ, ತೂಕದ ಯಂತ್ರ ಹಾಕಿಲ್ಲ, ಜಿಪಿಎಸ್ ಅಳವಡಿಸಿಲ್ಲ. ರಸ್ತೆಗಳು ಹಾಳಾಗಿವೆ. ಅದಕ್ಕಾಗಿ ಅಕ್ರಮ ಮರಳುಗಾರಿಕೆ ವಿರೋಧಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದು ರೈತರು, ವಿವಿಧ ಸಂಘ ಸಂಸ್ಥೆಗಳವರು, ಮಹಿಳೆಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗೂಳಿಹಟ್ಟಿ ಶೇಖರ್ ಮನವಿ ಮಾಡಿದರು.
ತಾಲೂಕಿನ ಆರು ಮರಳು ಬ್ಲಾಕ್‌ಗಳನ್ನು ಸರ್ಕಾರ ಹರಾಜು ಹಾಕಿರುವುದೇ ಕಾನೂನು ಬಾಹಿರ. ಮಂಗಳೂರು, ಕೇರಳ, ಹಾವೇರಿಯವರು ಇಲ್ಲಿಗೆ ಬಂದು ಮರಳು ಹರಾಜಿಗೆ ಕೈಹಾಕಿ ವೇದಾವತಿ ನದಿಯ ಒಡಲನ್ನು ಬರಿದು ಮಾಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ರೈತರ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗಿವೆ. ಅಕ್ರಮ ಮತ್ತು ಸಕ್ರಮ ಮರಳುಗಾರಿಕೆಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರ ಕುಮ್ಮಕ್ಕಿದೆ.
• ಗೂಳಿಹಟ್ಟಿ ಶೇಖರ್,
ಹೊಸದುರ್ಗ ಶಾಸಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.