ವೇಣೂರು: ಅಜಿಲ-ಎರಡಾಲು ಕೆರೆ ನೀರಿಂಗಿಸುವುದಕ್ಕಷ್ಟೇ ಸೀಮಿತ

ಕೆರೆಗಳ ಅಭಿವೃದ್ಧಿ ನೆಪದಲ್ಲಿ ಹಣ ಪೋಲು

Team Udayavani, May 18, 2019, 10:59 AM IST

18-May-6

ವೇಣೂರು ಮುಖ್ಯಪೇಟೆಯಿಂದ ಅನತಿ ದೂರದಲ್ಲಿ ಇತಿಹಾಸ ಪ್ರಸಿದ್ಧ ಅಜಿಲ ಕೆರೆ.

ವೇಣೂರು : ಒಂದು ಕಾಲದಲ್ಲಿ ವೇಣೂರು ಪರಿಸರಕ್ಕೆ ನೀರಿನ ಬೇಡಿಕೆ ಪೂರೈಸುತ್ತಿದ್ದ ಪುರಾತನ ಕೆರೆಗಳಿಗೆ ವಿವಿಧ ಅನುದಾನದಡಿ ಲಕ್ಷ ಲಕ್ಷ ರೂ. ಹಣವನ್ನು ವ್ಯಯ ಮಾಡಿದರೂ ಜನತೆಗೆ ಉಪಯೋಗಕ್ಕೆ ಇಲ್ಲದಂತಾಗಿದೆ.

ಅಜಿಲ ಕೆರೆ
ವೇಣೂರು ಮುಖ್ಯಪೇಟೆ ಯಿಂದ ಅನತಿ ದೂರದಲ್ಲಿ ಐತಿಹಾಸಿಕ ಹಿನ್ನೆಲೆಯಿರುವ ಅಜಿಲ ಕೆರೆ ಇದೆ. ಕ್ರಿ.ಶ. 1604ರ 4ನೇ ವೀರ ತಿಮ್ಮಣ್ಣ ಅಜಿಲರ ಕಾಲದಲ್ಲಿ ವೇಣೂರು ಶ್ರೀ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಸಮಯ ದಲ್ಲಿ ನೀರಿನ ಸೌಕರ್ಯಕ್ಕಾಗಿ ವೇಣೂರಿನ ಕಲ್ಯಾಣಿ ಪ್ರದೇಶದಲ್ಲಿ ಎರಡು ಬೆಟ್ಟಗಳ ಮಧ್ಯೆ ನಿರ್ಮಿಸಲಾಗಿರುವ ಕೆರೆಯೇ ಅಜಿಲ ಕೆರೆ. ಸುಮಾರು 8.53 ಎಕ್ರೆ ವ್ಯಾಪ್ತಿಯನ್ನು ಹೊಂದಿರುವ ಈ ಕೆರೆ ಯಲ್ಲಿ ನೀರು ಬತ್ತುವುದೇ ಇಲ್ಲ. ಅನುದಾನ

2010ರಲ್ಲಿ ಅಜಿಲ ಕೆರೆ ದುರಸ್ತಿಗೆ ಸರಕಾರದ ಕೆರೆ ಪುನಃಶ್ಚೇತನ ಯೋಜನೆಯಡಿ 60 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು. ಇದೇ ಸಮಯದಲ್ಲಿ ಕೆರೆ ನಿರ್ವಹಣೆಗಾಗಿ 10 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಎಂಜಿನಿಯರ್‌ ಅವರ ಪ್ರಕಾರ ಒಟ್ಟು 40 ಲಕ್ಷ ರೂ.ನಷ್ಟು ಕೆಲಸವಾಗಿದ್ದು, ಉಳಿದ ಅನುದಾನ ವಾಪಸಾಗಿತ್ತು. ಕಳೆದ ವಾರ ವೇಣೂರು ಗ್ರಾ.ಪಂ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಮಾಡಲಾಗಿದೆ. ಆದರೆ ಪೂರ್ಣ ಹೂಳೆತ್ತುವ ಕಾರ್ಯ ನಡೆಸಲಾಗಿಲ್ಲ. ಇದು ಕೇವಲ ನೀರು ಇಂಗಿಸುವುದಕ್ಕಷ್ಟೇ ಪ್ರಯೋಜನವಾಯಿತೇ ಹೊರತು ಸಾರ್ವಜನಿಕರ ಉಪಯೋಗಕ್ಕೆ ಆಗಿಲ್ಲ. ಹೀಗಾಗಿ ವಿನಿಯೋಗಿಸಿದ ಅನುದಾನ ಪೋಲಾಗಿದೆ ಎಂದು ಆರೋಪ ಸಾರ್ವಜನಿಕರದ್ದು.

ಎರಡಾಲು ಕೆರೆ
ಮೂಡುಕೋಡಿ ಗ್ರಾಮದ ಎರಡಾಲುವಿನಲ್ಲಿ 65 ಸೆಂಟ್ಸ್‌ ವ್ಯಾಪ್ತಿಯ ಕೆರೆಯೂ ಪಾಳು ಬಿದ್ದಿದ್ದು, ಇದಕ್ಕೂ ಉಪಯೋಗಿಸಲಾದ ಸರಕಾರಿ ಅನುದಾನ ಪೋಲಾಗಿದೆ. 1962 ಇಸವಿಯಲ್ಲಿ ಕರಿಮಣೇಲು, ಮೂಡುಕೋಡಿ ಗ್ರಾಮಸ್ಥರಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದ ಈ ಕೆರೆಯು ಆ ಬಳಿಕ ಪಾಳುಬಿದ್ದಿದೆ. 2018ರ ಜನವರಿಯಲ್ಲಿ ಜಿ.ಪಂ. ಅನುದಾನದಡಿ 3.30 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯ ಮಾಡಲಾಗಿತ್ತು. ಆದರೆ ಕಾಮಗಾರಿ ಅಸಮರ್ಪಕವಾಗಿ ನಿರ್ವಹಿಸಿದ ಕಾರಣ ಕಳೆದ ಮಳೆಗಾಲದಲ್ಲಿ ಕೆರೆ ಬದಿಯ ಮಣ್ಣು ಜರಿದಿದ್ದು, ಮತ್ತೆ ಹೂಳು ತುಂಬಿಕೊಂಡಿದೆ. ಈಗಾಗಿ ಇದಕ್ಕೆ ಇದಕ್ಕೆ ಖರ್ಚು ಮಾಡಲಾದ ಸರಕಾರಿ ಅನುದಾನ ಪೋಲಾಗಿದೆ.

ಎಂದೂ ಬತ್ತದ ಕೆರೆಗಳು
ಈಗ ಎಲ್ಲೆಡೆ ಕೆರೆ, ಬಾವಿಗಳಲ್ಲಿ ಮಾತ್ರವಲ್ಲದೆ ಕೊಳವೆಬಾವಿಗಳಲ್ಲೂ ನೀರು ಬತ್ತಿಹೋಗಿದೆ. ಕೆಲವು ಕೊಳವೆಬಾವಿಗಳಲ್ಲಿ ಪಂಪನ್ನು ಕೆಳಗಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಇತಿಹಾಸ ಪ್ರಸಿದ್ಧ ವೇಣೂರು ಅಜಿಲ ಕೆರೆ ಹಾಗೂ ಎರಡಾಲು ಕೆರೆಯಲ್ಲಿ ಇನ್ನೂ ನೀರು ಬತ್ತಿಲ್ಲ. ಈಗಾಗಿ ಇವೆರಡರ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿಗೊಳಿಸಿದರೆ ವೇಣೂರು-ಮೂಡುಕೋಡಿ ಪರಿಸರಕ್ಕೆ ಸಾಕಷ್ಟು ನೀರು ಪೂರೈಕೆ ಸಾಧ್ಯ.

ಕೆರೆಗಳ ಒತ್ತುವರಿ ಆರೋಪ
ಅಜಿಲ ಕೆರೆ ಹಾಗೂ ಎರಡಾಲು ಕೆರೆಗಳನ್ನು ಸ್ಥಳೀಯ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಅಜಿಲ ಕೆರೆಯ ಪ್ರಕರಣ ನ್ಯಾಯಾಲಯ ಹಂತದಲ್ಲಿದೆ. ಎರಡಾಲು ಕೆರೆಗೆ ಬೇಲಿ ಹಾಕಿ ಒತ್ತುವರಿ ಮಾಡಲಾಗಿದೆ. ಗ್ರಾಮಸ್ಥರ ಆಕ್ಷೇಪಣೆ ಮೇರೆಗೆ ಒತ್ತುವರಿ ಮಾಡಿಕೊಂಡವರೇ ಬಿಟ್ಟು ಕೊಡುವುದಾಗಿ ತಿಳಿಸಿದ್ದು, ವಶಕ್ಕೆ ಪಡೆದುಕೊಳ್ಳಲು ವೇಣೂರು ಗ್ರಾ.ಪಂ. ಮೀನಮೇಷ ಎಣಿಸುತ್ತಿದೆ ಎಂಬುದು ಗ್ರಾಮಸ್ಥರ ಆರೋಪ. ಒತ್ತುವರಿ ತೆರವಿಗೆ ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿ ದ್ದರೂ ಒತ್ತುವರಿ ತೆರವಾಗದ ಬಗ್ಗೆ ನಾಗರಿಕರಲ್ಲಿ ಸಂಶಯ ಮೂಡಿಸಿದೆ. ಒಟ್ಟಿನಲ್ಲಿ ವೇಣೂರು ಗ್ರಾ.ಪಂ. ವ್ಯಾಪ್ತಿಯ ಎರಡು ಪ್ರಮುಖ ಕೆರೆಗಳು ಉಪಯೋಗವಿಲ್ಲದೇ ಪಾಳು ಬಿದ್ದಿರುವುದು ವಿಪರ್ಯಾಸವೇ ಸರಿ.

ಮನವಿ ನೀಡಿದರೆ ಕ್ರಿಯಾಯೋಜನೆ

ಎರಡಾಲು ಕೆರೆಗೆ ಸ್ಥಳೀಯರು ಮನವಿ ನೀಡಿದರೆ ಕ್ರಿಯಾಯೋಜನೆ ತಯಾರಿಸಿ ನವೆಂಬರ್‌ನಲ್ಲಿ ಅಭಿವೃದ್ಧಿಪಡಿಸಲಾಗುವುದು. ಒತ್ತುವರಿ ತೆರವಿಗೆ ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. 3 ಲಕ್ಷ ರೂ. ವೆಚ್ಚದಲ್ಲಿ ಅಜಿಲ ಕೆರೆಯ ಹೂಳೆತ್ತುವ ಕಾರ್ಯ ಮಾಡಲಾಗಿದೆ.
ಕೆ. ವೆಂಕಟಕೃಷ್ಣರಾಜ,
ಪಿಡಿಒ, ವೇಣೂರು ಗ್ರಾ.ಪಂ.
ಪದ್ಮನಾಭ ವೇಣೂರು

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.