ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಸಮಗ್ರ ನೀರಾವರಿ ಕ್ಷೇತ್ರ ಮಾಡುವ ಗುರಿ: ಅಂಬಾಡಿ ನಾಗರಾಜ್
ಕಾಂಗ್ರೆಸ್ ಪಕ್ಷ ಯಜಮಾನವಿಲ್ಲದ ಮನೆಯಂತಾಗಿದೆ
Team Udayavani, May 2, 2022, 10:19 AM IST
ಹರಪನಹಳ್ಳಿ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾನು ಒಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ನೀಡಿದರೆ ಹರಪನಹಳ್ಳಿ ತಾಲೂಕನ್ನು ಸಮಗ್ರ ನೀರಾವರಿ ಕ್ಷೇತ್ರ ಮಾಡುವ ಗುರಿ ಹೊಂದಿದ್ದೇನೆ ಎಂದು ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಅಂಬಾಡಿ ನಾಗರಾಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಯಜಮಾನವಿಲ್ಲದ ಮನೆಯಂತಾಗಿದೆ, ಇಲ್ಲಿರುವ ಗುಂಪುಗಾರಿಕೆಯನ್ನು ಪಕ್ಷದ ಹೈಕಮಾಂಡ್ ಸರಿಪಡಿಸಬೇಕೆಂದು ಹೇಳಿದರು.
ನಾನು ಮೂಲತಃ ಪಕ್ಕದ ಹಗರಿಬೊಮ್ಮನಹಳ್ಳಿಯವನಾಗಿದ್ದು, ಇಲ್ಲಿನ ಚಿಗಟೇರಿ ಗ್ರಾಮದ ಅಳಿಯ, ಮತ್ತು ಮೊಮ್ಮಗ ಕೂಡ ಹೌದು. ನನಗೆ ಹರಪನಹಳ್ಳಿ ಅರ್ಧ ಪರಿಚಯವಿದೆ. ಕಳೆದ 24 ವರ್ಷಗಳಿಂದ ಹಗರಿಬೊಮ್ಮನಹಳಿ ಸೇರಿದಂತೆ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ, ಜತೆಗೆ ಸಮಾಜ ಸೇವೆ, ವ್ಯಾಪಾರ, ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷದ 26 ಚುನಾವಣೆಗಳಿಗೆ ದುಡಿದಿದ್ದೇನೆ, ಕೋವಿಡ್ ಸಂದರ್ಭದಲ್ಲೂ ಹಗರಿಬೊಮ್ಮನಹಳ್ಳಿಯಲ್ಲಿ ಸೇವೆ ಸಲ್ಲಿಸಿದ್ದೇನೆ, ಪಕ್ಷಕ್ಕೆ ದುಡಿದಿರುವುದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.
ಇದನ್ನೂ ಓದಿ:ಲ್ಯಾಂಡ್ ಆಗುತ್ತಿದ್ದ ವಿಮಾನಕ್ಕೆ ಅಪ್ಪಳಿಸಿದ ಬಿರುಗಾಳಿ; 40 ಮಂದಿ ಪ್ರಯಾಣಿಕರಿಗೆ ಗಾಯ!
ಹಗರಿಬೊಮ್ಮನಹಳ್ಳಿ ಕ್ಷೇತ್ರ ಎಸ್ಸಿಗೆ ಮೀಸಲಾಗಿದ್ದರಿಂದ ಅನಿವಾರ್ಯವಾಗಿ ಹರಪನಹಳ್ಳಿಗೆ ಆಕಾಂಕ್ಷಿಯಾಗಿ ಬರಬೇಕಾಯಿತು. ತಾಲೂಕಿನಲ್ಲಿ ಈಗಾಗಲೇ 28 ಹಳ್ಳಿಗಳನ್ನು ಸುತ್ತಾಡಿದ್ದೇನೆ, ಶೇ.70 ರಷ್ಟು ಕಾರ್ಯಕರ್ತರು ಗೊಂದಲದಲ್ಲಿದ್ದು, ತಟಸ್ಥ ದೋರಣೆ ಹೊಂದಿದ್ದಾರೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಒಂದೇ ವೇದಿಕೆಯಲ್ಲಿ ಹೋಗುವಂತಾಗಬೇಕು. ಬೆಲೆ ಏರಿಕೆ ಖಂಡಿಸಿ ಜೂನ್ ತಿಂಗಳಲ್ಲಿ ಹೋರಾಟ ಹಮ್ಮಿಕೊಳ್ಳುವುದು. ಆ ಹೋರಾಟಕ್ಕೆ ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನು ಆಹ್ವಾನಿಸಲಾಗುವುದು. ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆದು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಾಗಿದೆ ಎಂದು ಹೇಳಿದರು.
ಬರುವ ಮೆ.15 ರಂದು ಹರಪನಹಳ್ಳಿ ಸಮೀಪದ ದೇವರತಿಮಲಾಪುರ ಗ್ರಾಮದ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ಉಚಿತ ಸಾಮೂಹಿಕ ವಿವಾಹ ಆಯೋಜಿಸಿದ್ದೇನೆ. ಅಂದು ಸಂಜೆ 5 ಗಂಟೆಗೆ ರಾಜ್ಯದ ಪ್ರಖ್ಯಾತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಸಾಮೂಹಿಕ ವಿವಾಹಕ್ಕೆ ಹೆಸರು ನೊಂದಾಯಿಸಲು ಕೆಂಪೇಶ್ವರ ಮಠದ ಹತ್ತಿರ ವಿರುವ ನಂದಿ ಮೆಡಿಕಲ್ಸ್ ಮೇಲ್ಭಾಗದಲ್ಲಿ ನನ್ನ ಜನಸಂಪರ್ಕ ಕಚೇರಿಗೆ 7686082222 ಸಂಪರ್ಕಿಸಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.