![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 7, 2024, 3:14 PM IST
ಹಗರಿಬೊಮ್ಮನಹಳ್ಳಿ: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವೃದ್ಧರೊಬ್ಬರು ಮೃತಪಟ್ಟ ಘಟನೆ ನ.7ರ ಗುರುವಾರ ಸಂಭವಿಸಿದೆ.
ನಗರದ ಕೆವಿಓಆರ್ ಯ ಕಾಲೋನಿಯ ಮಲ್ಲಿಗೆವನ ನಿವಾಸಿ, ಜೆಸ್ಕಾಂ ಇಲಾಖೆಯ ನಿವೃತ್ತ ಮೀಟರ್ ರೀಡರ್ ಬಸವರಾಜ್ ಕಲ್ಮನಿ (78) ಮೃತ ದುರ್ದೈವಿ.
ಬಸವರಾಜ ಕಲ್ಮನಿ ಪಟ್ಟಣದ ಬಸವೇಶ್ವರ ಬಜಾರದಲ್ಲಿರುವ ಎಸ್.ಬಿ.ಐ. ಬ್ಯಾಂಕಿಗೆ ಹೋಗಿದ್ದು ಮರಳಿ ಮನೆಗೆ ಬರುತ್ತಿರುವಾಗ ಲಾಡ್ಜ್ ವೊಂದರ ಪಕ್ಕದಲ್ಲಿರುವ ರೈಲು ಹಳಿ ದಾಟಿದ್ದಾರೆ.
ಅದೇ ಸಮಯದಲ್ಲಿ ಬೆಳಿಗ್ಗೆ 11.20 ಸುಮಾರಿನಲ್ಲಿ ಹೊಸಪೇಟೆಯಿಂದ ದಾವಣಗೆರೆ ಕಡೆ ಹೊರಟಿದ್ದ ಪ್ರಯಾಣಿಕರ ರೈಲು ಡಿಕ್ಕಿಯಾಗಿ ಸಾವನಪ್ಪಿದ್ದಾನೆ. ರುಂಡ- ಮುಂಡಗಳೆರಡು ಬೇರ್ಪಟ್ಟಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.