ಕಮಲಾಪುರ ಪಪಂ ಪುರಸಭೆಯಾಗಿ ಮೇಲ್ದರ್ಜೆಗೆ

ಪಟ್ಟಣದ ಅಭಿವೃದ್ಧಿಗೆ ನಾಂದಿ

Team Udayavani, Apr 24, 2022, 4:18 PM IST

kamalapura

ಹೊಸಪೇಟೆ: ವಿಜಯನಗರ ಸಾಮ್ಯಾಜ್ಯದ ಹೆಬ್ಟಾಗಿಲು ಎಂದು ಕರೆಯುವ ತಾಲೂಕಿನ ಐತಿಹಾಸಿಕ ಕಮಲಾಪುರ ಪಟ್ಟಣ ಪಂಚಾಯ್ತಿಗೆ ಇದೀಗ ಪುರಸಭೆ ಭಾಗ್ಯ ಒಲಿದು ಬಂದಿದ್ದು ಪಟ್ಟಣದ ಅಭಿವೃದ್ಧಿಗೆ ನಾಂದಿಯಾಗಲಿದೆ.

ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ರಾಜ್ಯ ಸರಕಾರ ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಬುಧವಾರ ಆದೇಶ ಹೊರಡಿಸಿದೆ. ಇದಕ್ಕಾಗಿ ಸರ್ಕಾರ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ ಗಡುವು ನೀಡಿದೆ.

ಜನಗಣತಿ ಆಧಾರದ ಮೇಲೆ ಪಟ್ಟಣವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಈ ಕುರಿತು ಈ ಮೊದಲೇ ಪಪಂನಲ್ಲಿ ತುರ್ತು ಸಭೆ ನಡೆಸಿ ನಿರ್ಣಯಿಸಲಾಗಿತ್ತು. ಬಳಿಕ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಪಂ ಮುಖ್ಯಾಧಿ ಕಾರಿಗಳು 2021ರ ಡಿಸೆಂಬರ್‌ 20ರಂದು ಮತ್ತು ಜಿಲ್ಲಾಧಿಕಾರಿಗಳು ಫೆ. 21ರಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಸಲ್ಲಿಸಿದ್ದರು. ನಂತರ ಸರಕಾರದ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಕಳಹಿಸಲಾಗಿತ್ತು.

ಗಡಿ ಗುರುತು

ಪ್ರಸ್ತುತ ಪ.ಪಂ. ಸರಹದ್ದನ್ನೇ ಪುರಸಭೆಯ ಸರಹದ್ದಾಗಿ ಗುರುತಿಸಲಾಗಿದೆ. ಕಮಲಾಪುರ ಪಟ್ಟಣಕ್ಕೆ ವೆಂಕಟಾಪುರ, ಸೀತಾರಾಂಪುರ ಗ್ರಾಮದ ವಾಯುವ್ಯ ಮೂಲೆ, ಪಶ್ಚಿಮದಲ್ಲಿ ಕೊಂಡನಾಯಕನಹಳ್ಳಿ, ಮಾಗೇನಹಳ್ಳಿ, ಗುಡಿ ಓಬಳಾಪುರ, ಉತ್ತರದಲ್ಲಿ ದಂಡಾಪುರ, ಕಮಲಾಪುರ, ಸಿಂಗಾನಾಥನಹಳ್ಳಿ, ಕಡ್ಡಿರಾಂಪುರ ಹಾಗೂ ದಕ್ಷಿಣದಲ್ಲಿ ಬೈಲುವದ್ದಿಗೇರಿ ಹಾಗೂ ಸೀತಾರಾಂಪುರ ಗ್ರಾಮದವರೆಗೆ ಪುರಸಭೆ ಗಡಿ ಗುರುತಿಸಲಾಗಿದೆ.

ಅಭಿವೃದ್ಧಿಗೆ ಅನುಕೂಲ

ಗ್ರಾಮ ಪಂಚಾಯಿತಿಯಾಗಿದ್ದ ಕಮಲಾಪುರ ಜನಸಂಖ್ಯೆ ಆಧಾರದಲ್ಲಿ 1998ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಬಡ್ತಿ ಪಡೆದಿತ್ತು. ಇದೀಗ ಪಟ್ಟಣವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿರುವ ಸರಕಾರ ಅಭಿವೃದ್ಧಿಗೆ ಅನುಕೂಲ ಮಾಡಿಕೊಟ್ಟಿದೆ. 2011ರ ಜನಗಣತಿಯಂತೆ 25,552 ಜನಸಂಖ್ಯೆ ಇದೆ. ವಾರ್ಷಿಕವಾಗಿ ಶೇ.1.50ರಷ್ಟು ಜನಸಂಖ್ಯೆ ಬೆಳವಣಿಗೆಯಾಗಿದ್ದು, 2021ಕ್ಕೆ ಪಟ್ಟಣದ ಜನಸಂಖ್ಯೆ 29385 ಅಗುತ್ತದೆ. ಜತೆಗೆ ಪಪಂ ವ್ಯಾಪ್ತಿಯು 39.60 ಚ.ಕಿ.ಮೀ ಹೊಂದಿದ್ದು, ಪ್ರತಿ ಚ.ಕಿ.ಮೀ.ಗೆ 742 ಜನಸಾಂದ್ರತೆ ಹೊಂದಿದೆ. ಸದರಿ ಭೌಗೋಳಿಕ ಪ್ರದೇಶದಲ್ಲಿ ಶೆ.30ರಿಂದ 40 ಗುಡ್ಡಗಾಡು, ಅರಣ್ಯ ಪ್ರದೇಶ, ಕೆರೆ ಹಾಗೂ ಶೇ. 20ರಷ್ಟು ಜಮೀನು ಇದ್ದು, ಕೃಷಿಯೇತರ ಜಮೀನುಗಳು ಯುನೆಸ್ಕೊ ಅಡಿಗೆ ಬರಲಿವೆ. ಹೆಚ್ಚಿನ ವಸತಿ ಮತ್ತು ವಾಣಿಜ್ಯ ಚಟುವಟಿಕೆಗೆ ಪುರಾತತ್ವ ಇಲಾಖೆ ನಿರ್ಬಂಧವಿದೆ. ಹೀಗಾಗಿ ಪಟ್ಟಣದಲ್ಲಿ ಕೇವಲ 40ರಷ್ಟು ವಿಸ್ತೀರ್ಣದಲ್ಲಿ ಮಾತ್ರ ಜನವಸತಿ ಇದ್ದು, ಒಟ್ಟಾರೆ ವಿಸ್ತೀರ್ಣದ 40ರಷ್ಟು ತೆಗೆದುಕೊಂಡಾಗ 15.84 ಚ.ಕಿ.ಮೀ ನಲ್ಲಿ 1855 ಜನಸಾಂದ್ರತೆ ಇದೆ. 2020-21ರಂತೆ ತೆರಿಗೆ ಮತ್ತು ತೆರಿಗೆಯೇತರ ಒಟ್ಟು ವರಮಾನ 12433000 ಲಕ್ಷ ಮತ್ತು 423 ರೂ. ತಲಾ ವರಮಾನವಿದೆ. ವಿಶ್ವವಿಖ್ಯಾತ ಹಂಪಿ ಇರುವುದರಿಂದ ಶೇ. 60ಕ್ಕಿಂತ ಹೆಚ್ಚಿನ ಜನರು ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಕಮಲಾಪುರಕ್ಕೆ ಹೊಂದಿಕೊಂಡಿರುವ ವಿಶ್ವಪ್ರಸಿದ್ಧ ಹಂಪಿ ವೀಕ್ಷಣೆಗೆ ವಿದೇಶಗಳಿಂದ ಪ್ರತಿ ವರ್ಷ ಸುಮಾರು 19 ಲಕ್ಷ ಜನ ಹಾಗೂ ಪ್ರತಿ ವಾರಾಂತ್ಯದಲ್ಲಿ 10 ಸಾವಿರಕ್ಕಿಂತಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಜತೆಗೆ ಆನೆಗುಂದಿಯಲ್ಲಿ ಅಂಜನಾದ್ರಿ ಪರ್ವತ, ಪಟ್ಟಣದ ಸಮೀಪದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಉದ್ಯಾನವನ, ಹಂಪಿ ಕನ್ನಡ ವಿವಿ, ಪ್ರತಿಷ್ಠಿತ ಹೋಟೆಲ್‌ಗ‌ಳು, ಅರಣ್ಯ ಇಲಾಖೆಯ ಜಂಗಲ್‌ ರೆಸಾರ್ಟ್‌ ಸೇರಿದಂತೆ ಇತರೆ ಪ್ರಮುಖ ಸ್ಥಳಗಳು ಇರುವುದರಿಂದ ಬಹುಸಂಖ್ಯೆಯ ಪ್ರವಾಸಿಗರು ಕಮಲಾಪುರದ ಮೂಲವೇ ಪ್ರತಿನಿತ್ಯ ಭೇಟಿ ನೀಡುತ್ತಾರೆ. ಹಂಪಿ ಪ್ರಸಿದ್ಧ ವಿಜಯ ವಿಠಲ, ಲೋಟಸ್‌ ಮಹಲ್‌, ರಾಣಿಸ್ನಾನ ಗೃಹ, ಮ್ಯೂಸಿಯಂ, ವಿಜಯವಿಠಲ ದೇಗುಲ ಸೇರಿದಂತೆ ಪ್ರಮುಖ ಸ್ಮಾರಕ ವೀಕ್ಷಣೆಗೆ ತೆರಳಲು ಪ್ರವಾಸಿಗರು ಕಮಲಾಪುರದ ಮೂಲಕವೇ ಹಾದುಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು ಪುರಸಭೆಯಿಂದ ಕಾರ್ಯಸಾಧ್ಯವಾಗಲಿದೆ. ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರುವುದರಿಂದ ಹೆಚ್ಚುವರಿ ಅಕಾರಿ, ಸಿಬ್ಬಂದಿ ಹಾಗೂ ಹೆಚ್ಚಿನ ಅನುದಾನ ಕೂಡ ದೊರೆಯಲಿದೆ.ಮುಂದಿನ ದಿನಗಳಲ್ಲಿ ಐತಿಹಾಸಿಕ ಪಟ್ಟಣ ಕಮಲಾಪುರ ಅಭಿವೃತ್ತಿಯತ್ತ ಸಾಗಲಿದೆ. ಪಟ್ಟಣ ಪಂಚಾಯ್ತಿಯಾಗಿದ್ದ ಕಮಲಾಪುರ ಇದೀಗ ಪರಸಭೆಯಾಗಿ ಮೇಲ್ದರ್ಜೆ ಏರಿರುವುದು ಕಮಲಾಪುರದ ಜನತೆಗೆ ಸಂತಸ ತಂದಿದೆ.

ಕಮಲಾಪುರ ಪಟ್ಟಣ ಪಂಚಾಯ್ತಿ ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿರುವುದರಿಂದ ಪಟ್ಟಣದ ಅಭಿವೃದ್ಧಿ ಸೇರಿದಂತೆ ಹಂಪಿಗೆ ಆಗಮಿಸುವ ಪ್ರವಾಸಿಗರಿಗೂ ಮೂಲ ಸೌಕರ್ಯಗಳನ್ನು ಒದಗಿಸಲು ಸಹಕಾರಿಯಾಗಲಿದೆ. ಬಿ.ಸಿ. ನಾಗೇಶ್‌, ಮುಖ್ಯಾಧಿಕಾರಿ, ಪಟ್ಟಣ ಪಂಚಾಯ್ತಿ ಕಮಲಾಪುರ.

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-

Hagaribommanahalli: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

1-hampi-1

Deepawali; ಸರಣಿ‌ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!

16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ

Hoskote: 16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ

2-hospete

Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ

KSRTC: ಬಸ್ ಪಲ್ಟಿ, ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.