ನಾಲತವಾಡ: ಪಟ್ಟಣದ ಮೂರು ಓಣಿಯ ಮಸೂತಿಯಲ್ಲಿ ಹಿಂದೂ-ಮುಸ್ಲಿಂ ಮೊಹರಂ ಆಚರಣೆ
Team Udayavani, Aug 9, 2022, 9:55 AM IST
ನಾಲತವಾಡ: ಪಟ್ಟಣದ ಮೂರು ಓಣಿಯ ಮಸೂತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಅದ್ದೂರಿಯಾಗಿ ಹಿಂದೂ-ಮುಸ್ಲಿಂ ಸೇರಿಕೊಂಡು ಐದು ದಿನಗಳ ಕಾಲ ಮೊಹರಂ ಹಬ್ಬ ಆಚರಿಸಿದರು.
ಸೋಮವಾರ ರಾತ್ರಿ ಚವನಭಾವಿ ಅವರಿಂದ ಯಜ್ಜೆ ಮೇಳ ಹಾಗೂ ನಾಲತವಾಡ ಪಟ್ಟಣದ ರಿವಾಯತ ಪದಗಳು ಮೆರಗು ತಂದವು. ರಾತ್ರಿಯಿಡಿ ಜಾಗ್ರಣೆ ಮಾಡಿ ಬಳಿಕ 15 ಜನ ಯುವಕರು, ಹಿರಿಯರು ಸೇರಿಕೊಂಡು ಬಿಂದಿಗೆ ತಗೊಂಡು ಗಂಗಸ್ಥಳಕೆ ಹೋಗಿ ಶುದ್ಧ(ಮಡಿ) ಆಗಿ ಬಿಂದಿಗೆ ತುಂಬಿಕೊಂಡು ಬಂದು ಅಲಾಯ್ ಕುಣಿಯ ಐದು ಸುತ್ತು ನೀರನ್ನು ಹಾಕಿ ನಂತರ ಮಸೂತಿ ಒಳಗೆ ಹೋಗಿ ಮಸೂತಿ ಮಡಿ ಮಾಡಿ, ಅಲಾಯ್ ಕುಣಿಯ ಮುಂದೆ ದೀಪಗಳನ್ನು ಹಚ್ಚಿ ಒಂದು ನಿಂಬೆ ಹಣ್ಣನ್ನು ಇಟ್ಡು, 15 ಜನ ಮಡಿಯಿಂದ ಬೆಂಕಿ ಇರುವ ಅಲಾಯ್ ಕುಣಿಯಲ್ಲಿ ಒಬ್ಬರಂತೆ ಒಬ್ಬರು ಬೆಂಕಿ ಒಳಗೆ ಹಾದು ಮಸೂತಿ ಒಳ ಹೋದರು.
ಒಟ್ಟಾರೆ ಈ ವರ್ಷ ಮೊಹರಂ ಹಬ್ಬ ಅದ್ದೂರಿಯಾಗಿ ನಡೆಯಿತು. ಯಾಕೆಂದರೆ ಎರಡು ವರ್ಷಗಳ ಕಾಲ ಕೊರೊನಾ ಹಿನ್ನೆಲೆ ಮೊಹರಂ ಹಬ್ಬ ಅದ್ದೂರಿಯಾಗಿ ಆಚರಿಸಿರಲಿಲ್ಲ ಎಂದು ನಿವೃತ್ತ ಶಿಕ್ಷಕ ಇಮಾಮ ಸಾಬ್ ಅವಟಿ ಹೇಳಿದರು.
ಹಸನಸಾಬ್ ಕುಳಗೇರಿ, ಖಾಜಹುಸೆನ್ ಖತೀಬಿ, ರಾಜೇಸಾಬ ಕುಳಗೇರಿ, ಬಸವರಾಜ ಭೂವಿ, ರಾಯಪ್ಪ ಭೂವಿ, ಅಲ್ಲಾಭಕ್ಷ ಕುಳಗೇರಿ, ಬಸವರಾಜ ತಳವಾರ, ಇನ್ನೂ ಮೂರು ಓಣಿಯ ಗುರು ಹಿರಿಯರು ಹಾಗೂ ಯುವಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali; ಸರಣಿ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!
Hoskote: 16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ
Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ
Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ
ಹುಲಿಕೆರೆ ಭರ್ತಿ; ಒಂದೆಡೆ ಸಂತಸ, ಮತ್ತೊಂದೆಡೆ ಮನೆಗಳಿಗೆ ನುಗ್ಗಿದ ನೀರು; ಸಂಕಷ್ಟಕ್ಕೀಡಾದ ಜನ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.