ಹೊಸಪೇಟೆಯಲ್ಲಿ ಪುನೀತ್ ಕಂಚಿನ ಪುತ್ಥಳಿ ಅನಾವರಣ – ಅಭಿಮಾನಿಗಳ ನೂಕುನುಗ್ಗಲು
ಅಭಿಮಾನಿಗಳ ನೂಕುನುಗ್ಗಲು, ಮುರಿದು ಚೆಲ್ಲಾಪಿಲ್ಲಿಯಾದ ಕುರ್ಚಿಗಳು
Team Udayavani, Jun 6, 2022, 8:01 AM IST
ಹೊಸಪೇಟೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭ ಭಾನುವಾರ ವಿಧ್ಯುಕ್ತವಾಗಿ ಹೊಸಪೇಟೆಯಲ್ಲಿ ನೆರವೇರಿತು.
ರಾಘವೇಂದ್ರ ರಾಜ್ ಕುಮಾರ ಮಾತನಾಡಿ, ಪುನೀತ್ ರಾಜ್ ಕುಮಾರ ನಮ್ಮೆಲ್ಲರ ಹೃದಯದಲ್ಲಿ ಅಮರರಾಗಿದ್ದಾರೆ. ಯಾರೇ ಕೈಬಿಟ್ಟರು, ಹೊಸಪೇಟೆ ಜನ ನಮ್ಮನ್ನು ಕೈಬಿಡುವುದಿಲ್ಲ ಎಂದು ಅಪ್ಪು ಯಾವಾಗಲೂ ಹೇಳುತ್ತಿದ್ದರು ಎಂದರು. ಅಪ್ಪು ಮಾನವೀಯತೆಯನ್ನು ಮೆರೆದು, ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ. ಪುನೀತ್ ಪುಣ್ಯಾತ್ಮ, ಅವರ ಸಮಾಜಮುಖಿ ಗುಣಗಳನ್ನು ಅಳವಡಿಸಿಕೊಳ್ಳೋಣ ಎಂದರು. ಅಪ್ಪ- ಅಮ್ಮ ಹೋದಾಗ ನನಗೆ ಅಷ್ಟೊಂದು ನೋವು ಕಾಡಲಿಲ್ಲ. ಈಗ ಅಪ್ಪು ಹೋದಾಗ ಅಪ್ಪ-ಅಮ್ಮ ಹೋದಷ್ಟು ನೋವು, ಆಘಾತ ಆಗಿದೆ ಎಂದರು.
ನಟ ಅಜೇಯರಾವ್ ಮಾತನಾಡಿ, ಹೊಸಪೇಟೆ ಮಗನಾಗಿ ದೊಡ್ಮನೆ ಕುಟುಂಬ ನಮ್ಮೂರಿಗೆ ಬರುತ್ತಿದೆ ಎಂದು ಸ್ವಾಗತಕೋರಲು ಆಗಮಿಸಿರುವೆ ಎಂದರು.
ಮಂಗಳಾ ರಾಘವೇಂದ್ರ ರಾಜ್ ಕುಮಾರ, ಸಚಿವ ಆನಂದಸಿಂಗ್, ಸಂಗೀತ ನಿರ್ದೇಶಕ ಋಷಿ, ನಟ ಪ್ರವೀಣ್ ಸೂರ್ಯ, ಅಪ್ಪು ಅಭಿಮಾನಿಗಳಾದ ಕಿಚಿಡಿ ವಿಶ್ವ, ಜೋಗಿ ತಾಯಪ್ಪ, ಸಂದೀಪ್ ಸಿಂಗ್, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಸ್ಥಾಯಿಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ ಮತ್ತಿತರರಿದ್ದರು.
ಅಮರ ಜ್ಯೋತಿ ಮೆರವಣಿಗೆ
ನಗರದ ವಡಕರಾಯ ದೇಗುಲದಿಂದ ಪುನೀತ್ ರಾಜ್ ಕುಮಾರ ಅವರ ಅಮರ ಜ್ಯೋತಿಯನ್ನು ಅಭಿಮಾನಿಗಳು ಮೆರವಣಿಗೆಯಲ್ಲಿ ತಂದರು. ಸ್ಥಳೀಯ ಕಲಾವಿದರು, ಡ್ಯಾನ್ಸ್ ಕಲಾವಿದ ಹುಡುಗರು ಹಾಗು ಚಿತ್ರ ಕಲಾವಿದರು ರಸಮಂಜರಿ ಕಾರ್ಯಕ್ರಮ ನೀಡಿದರು.
ಅಭಿಮಾನಿಗಳ ನೂಕುನುಗ್ಗಲು
ನಗರದ ಪುನೀತ್ ರಾಜ್ ಕುಮಾರ ಕಂಚಿನ ಪುತ್ಥಳಿ ಅನಾವರಣ ವೇಳೆ ನೂಕುನುಗ್ಗಲು ತಳ್ಳಾಟವೂ ನಡೆಯಿತು. ಕೆಲ ಕಡೆ ಯುವಕರು ಬಡಿದಾಡಿಕೊಂಡ ಘಟನೆಯು ನಡೆಯಿತು.
ನಗರದಲ್ಲಿ ಭಾನುವಾರ ನಡೆದ ದಿ.ಡಾ.ಪುನೀತ್ ರಾಜಕುಮಾರ್ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆಗೆ ಸಾವಿರಾರು ಕುರ್ಚಿಗಳು ಮುರಿದು ಚೂರು, ಚೂರಾಗಿವೆ.
ಈ ಸಂದರ್ಭದಲ್ಲಿ ಕಿಕ್ಕಿರಿದು ಸೇರಿದ್ದ ಅಪಾರ ಜನಸ್ತೋಮ, ಅತಿರೇಕದ ವರ್ತನೆ ಪ್ರದರ್ಶನ ಮಾಡಿದರು. ಆಸನಗಳ ಮೇಲೆ ನಿಂತು, ವೀಕ್ಷಣೆ ಮಾಡಿದರಲ್ಲದೇ, ಸ್ಥಳಾವಕಾಶಕ್ಕಾಗಿ ಪರಸ್ಪರ ಕುರ್ಚಿಗಳನ್ನು ತೂರಾಡಿ, ಬಡದಾಡಿಕೊಂಡರು. ಈ ವೇಳೆ ಗಣ್ಯಾತಿಗಣ್ಯರ ಸಾಲಿಗೆ ನುಗ್ಗಿದರು. ಜನರ ನಡುವೆ ಸಿಕ್ಕಿಕೊಂಡ ಗಣ್ಯರು ನೂಕಾಟತಳ್ಳಾಟದಲ್ಲಿ ಸಿಲುಕಿಕೊಂಡು ಪರದಾಡಿದರು.
ಕುಳಿತ ಸ್ಥಳದಿಂದ ಹೊರ ಹೋಗಲು ಆಗದೇ ಆತಂಕಕ್ಕೆ ಒಳಗಾದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ವಿಫಲರಾದರು.ಅಭಿಮಾನಿಗಳ ಗದ್ದಲ-ಗಲಾಟೆಗೆ ಅಯೋಜಕರು ತರಾತುರಿಯಲ್ಲಿ ಸಮಾರಂಭವನ್ನು ಮುಕ್ತಾಯಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.