ಗಗನಕ್ಕೇರಿದ ಬೆಲೆಗಳ ನಡುವೆ ಸಂಕ್ರಾಂತಿಗೆ ಅದ್ದೂರಿ ಸ್ವಾಗತ
Team Udayavani, Jan 14, 2022, 8:26 PM IST
ದೊಡ್ಡಬಳ್ಳಾಪುರ: ಈ ಬಾರಿಯೂ ಹಬ್ಬಗಳಿಗೆ ಕೊರೊನಾ ಬಿಸಿ ತಟ್ಟುತ್ತಿದೆ. ಈ ನಡುವೆ ಸಂಕ್ರಾಂತಿ ಹಬ್ಬ ಆಗಮಿಸಿದ್ದು, ಹಬ್ಬದ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ದಿನೇ ದಿನೆ ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ಹಿಂದಿನ ಸಂಭ್ರಮಾ ಚರಣೆ ಇಲ್ಲದಿದ್ದರೂ, ಅಗತ್ಯ ಧಾನ್ಯ, ಹೂವು, ಹಣ್ಣುಗಳ ಗಗನಕ್ಕೇರಿರುವ ಬೆಲೆಗಳ ನಡುವೆ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸಬೇಕಿದೆ.
ಕೆ.ಜಿ. ಕಡಲೇಕಾಯಿ 80 ರೂ., ಎಳ್ಳು ಬೆಲ್ಲ ಕೆ.ಜಿ. ಗೆ 200ರೂ. ಗೆಣಸು 40 ರೂ., ಕಬ್ಬು ಜಳವೆಗೆ 60 ರೂ. ಅವರೇ ಕಾಯಿ ಕೆ.ಜಿ. ಗೆ 70 ರೂ., ಇದ್ದು ಬೆಲೆ ಹ ಬ್ಬ ಕ್ಕಾ ಗಿ ಹೆಚ್ಚಿವೆ. ಬೆಲೆ ಏರಿಕೆಯ ನಡುವೆಯೇ ನಗರದ ಮಾರುಕಟ್ಟೆ ಪ್ರದೇಶ ದಲ್ಲಿ ಕಬ್ಬು, ಗೆಣಸು, ಕಡಲೇ ಕಾಯಿ ಗಳ ಮಾರಾಟ ಭರದಿಂದ ಸಾಗಿತ್ತು. ಗಗನಕ್ಕೇರಿದ ಹೂವುಗಳ ಬೆಲೆ: ಸಂಕ್ರಾಂತಿ ಹಬ್ಬಕ್ಕೆ ಅಗತ್ಯವೆನಿಸಿದ ಅಕ್ಕಿ, ಬೇಳೆ, ಧಾನ್ಯಗಳ ಬೆಲೆಯೊಂದಿಗೆ ಹೂವು ಹಣ್ಣಿನ ಬೆಲೆ ಸಹ ಗಗನಕ್ಕೇರಿವೆ.
ಕಾಕಡ ಕೆ.ಜಿ.ಗೆ 500 ರೂ., ಕನಕಾಂಬರ ಕೆ.ಜಿ.ಗೆ ಸಾವಿರ ರೂ. ಇದ್ದರೆ ಶಾಮಂತಿಗೆ, ಗುಲಾಬಿ ಮೊದಲಾದ ಹೂವಿನ ಬೆಲೆ 200 ರೂ.ರವರೆಗೂ ಇವೆ. ತರಕಾರಿಗಳ ಬೆಲೆ ಸಹ ಹೆಚ್ಚಾಗಿವೆ. ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಯುವುದೇ ಕಡಿಮೆಯಾ ಗಿದ್ದು, ಕಬ್ಬನ್ನು ಹೊರಗಿನಿಂದ ತಂದು ಮಾರಾಟ ಮಾಡಲಾಗುತ್ತಿದೆ.
ರಾಸುಗಳ ಮೆರವಣಿಗೆ: ಬೆಲೆಗಳ ಹೆಚ್ಚಳದ ನಡುವೆಯೂ ಸಂಕ್ರಾಂತಿ ಹಬ್ಬ ಮಾಡಲೇಬೇಕೆಂದು ನಾಗರಿಕರು ಹಬ್ಬದ ಅಗತ್ಯವಸ್ತುಗಳನ್ನು ಕೊಂಡು ಹೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರೀಕರಣದ ಪ್ರಭಾವವಿರುವ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಕಿಚ್ಚು ಹಾಯಿಸುವುದು, ಸಂಕ್ರಾಂತಿಯ ರಾಸುಗಳ ಮೆರವಣಿಗೆ ಸಹ ಕೆಲ ವರ್ಷಗಳಿಂದ ಸ್ಥಗಿತಗೊಳ್ಳುತ್ತಿದ್ದು, ಸುಗ್ಗಿ ಸಂಭ್ರಮ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali; ಸರಣಿ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!
Hoskote: 16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ
Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ
Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ
ಹುಲಿಕೆರೆ ಭರ್ತಿ; ಒಂದೆಡೆ ಸಂತಸ, ಮತ್ತೊಂದೆಡೆ ಮನೆಗಳಿಗೆ ನುಗ್ಗಿದ ನೀರು; ಸಂಕಷ್ಟಕ್ಕೀಡಾದ ಜನ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.