ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಪೂರಕ
ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆಗೆ ಆಧುನಿಕ ಕೃಷಿ ವಿಚಾರ ಸಂಕಿರಣ
Team Udayavani, Sep 18, 2019, 5:40 PM IST
ವಿಜಯಪುರ:ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಆಧುನಿಕ ಕೃಷಿ ಪದ್ಧತಿ ವಿಚಾರ ಸಂಕಿರಣಕ್ಕೆ ಡಾ| ಎಸ್.ಬಿ. ದೇವರನಾವದಗಿ ಚಾಲನೆ ನೀಡಿದರು.
ವಿಜಯಪುರ: ದೇಶದ ಕೃಷಿ ಸಬಲೀಕರಣ ಹಾಗೂ ರೈತರ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು.ಪ್ರಸ್ತುತ ಸಂದರ್ಭದಲ್ಲಿ ಕೃಷಿ ಬಿಕ್ಕಟ್ಟು ನಿವಾರಣೆಗಾಗಿ ಸಿರಿಧಾನ್ಯ ಬೆಳೆಯಲು ಹೆಚ್ಚಿನ ಒತ್ತು ಕೊಡಬೇಕು ಎಂದು ಕೃಷಿ ಮಹಾವಿದ್ಯಾಲಯದ ವಿಶ್ರಾಂತ ವಿದ್ಯಾಧಿಕಾರಿ ಡಾ| ಎಸ್.ಬಿ. ದೇವರನಾವದಗಿ ಹೇಳಿದರು.
ವಿಜಯಪುರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಜನ್ಮ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಆಧುನಿಕ ಕೃಷಿ ಪದ್ಧತಿ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರ ರೈತರ ಏಳ್ಗೆಗಾಗಿ ಮಹತ್ವಪೂರ್ಣ ಯೋಜನೆ ಜಾರಿಗೆ ತರಬೇಕು. ಕೃಷಿ ಪ್ರಧಾನ ಭಾರತದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.
ತೋಟಗಾರಿಕೆ ಬೆಳೆಗಳು, ವಾಣಿಜ್ಯ ಬೆಳೆಗಳು ಮುಂತಾದ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಹೆಚ್ಚಿನ ರೀತಿಯಲ್ಲಿ ಆದಾಯ ಪಡೆಯಬೇಕು. ಕೃಷಿ ಪ್ರಧಾನ ಭಾರತ ದೇಶಕ್ಕೆ ಕೃಷಿ ಬೆನ್ನೆಲುಬು. ಹಳ್ಳಿಗಳಲ್ಲಿನ ನಮ್ಮ ಕೃಷಿಕರು ಜೀವನೋಪಯೋಗಕ್ಕಾಗಿ ವ್ಯವಸಾಯ ಅವಲಂಬಿಸಿದ್ದು ಪ್ರಸ್ತುತ ಸಂದರ್ಭದಲ್ಲಿ ಕೃಷಿ ಬಿಕ್ಕಟ್ಟು ನಿವಾರಣೆಯಲ್ಲಿ ಸಿರಿಧಾನ್ಯಗಳ ಬೆಳೆಯುವುದಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.
ರೈತರು ಕೃಷಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸಲು ವೈಜ್ಞಾನಿಕ ಮತ್ತು ತಾಂತ್ರಿಕತೆಗಳ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದು ಅಗತ್ಯ. ರೈತರು ಮಣ್ಣಿನ ಫಲವತ್ತತೆ ಉಳಿಸಿಕೊಂಡು, ವಿವಿಧ ಬೆಳೆಗಳನ್ನು ಮಿಶ್ರಬೆಳೆಯಾಗಿ ಬೆಳೆಯಲು ಮುಂದಾಗಬೇಕು. ರೈತರು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕೆ ಇಲಾಖೆ ಕಛೇರಿಗೆ ಭೇಟಿ ನೀಡಿ ಯೋಜನೆಗಳ ಲಾಭ ಪಡೆಯಬೇಕು ಎಂದರು.
ವಿಶ್ರಾಂತ ಉಪ ತಹಶೀಲ್ದಾರ್ ಎನ್.ಡಿ.ಪಾಟೀಲ ಮಾತನಾಡಿ, ಮಣ್ಣು ಮಾನವನ ಪ್ರಕೃತಿ ಒಂದು ಅಮೂಲ್ಯ ಕೊಡುಗೆ. ಆದ್ದರಿಂದ ರೈತರು ತಮ್ಮ ಫಲವತ್ತಾದ ಜಮೀನಿನಲ್ಲಿ ಗಿಡ ಮರಗಳನ್ನು ಬೆಳೆಸಿ ಪ್ರಕೃತಿಗೆ ಉತ್ತಮ ಪರಿಸರ ನಿರ್ಮಾಣ ಮಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಆರಣ್ಯ ನಾಶ ಮಾಡಿದ್ದು, ಸಕಾಲದಲ್ಲಿ ಮಳೆ ಬಾರದಿರುವುದು ಪ್ರತ್ಯಕ್ಷ ಸಾಕ್ಷಿ. ಆದ್ದರಿಂದ ಪ್ರತಿ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಗಿಡಮರ ಬೆಳೆಸಿ ಪ್ರಕೃತಿ ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ| ಎಸ್.ಬಿ. ಕಲಘಟಗಿ ಮಾತನಾಡಿ, ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗಿ ಹೊರ ಹೊಮ್ಮುತ್ತಿವೆ. ಅತಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಸಿರಿಧಾನ್ಯ ಬೆಳೆಯಬಹುದಾಗಿದೆ. ಈ ಧಾನ್ಯಗಳನ್ನು ಮಾನವನ ಸೇವಿಸುವುದರಿಂದ ಮನುಷ್ಯನ ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಆದ್ದರಿಂದ ಪ್ರತಿ ರೈತರು ತಮ್ಮ ಕೃಷಿ ಬೇಸಾಯದಲ್ಲಿ ಆಧುನಿಕ ಕೃಷಿ ಪದ್ದತಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಬೇಕು ಎಂದರು.
ರಾಜು ಬಿ.ಎಲ್. ಬಂಡೆಪ್ಪ ತೇಲಿ, ಡಾ| ಪ್ರೇಮಾ ಪಾಟೀಲ, ಡಾ| ಸಂಗೀತಾ ಜಾಧವ, ಬಿ. ಮಲ್ಲಪ್ಪ, ಎಸ್.ಇ.ಬಡಿಗೇರ, ಡಿ.ಸಿ. ಕೊಲಾØರ ಇದ್ದರು.
ಕೆವಿಕೆ ಮುಖ್ಯಸ್ಥ ಡಾ| ಎಸ್.ಎ. ಬಿರಾದಾರ ಸ್ವಾಗತಿಸಿದರು. ಎಸ್.ಜಿ. ರಾಠೊಡ ನಿರೂಪಿಸಿದರು. ಡಾ| ಶಿವಲಿಂಗಪ್ಪ ಹೊಟಕರ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.