ಪಾರಂಪರಿಕ ಮರ ಪ್ರವಾಸಿ ತಾಣವಾಗಲಿ
ವಿಜಯಪುರ ನಗರದ ಐತಿಹಾಸಿಕ ಹುಣಸೆಮರ ಕೆಳಗೆ ಐತಿಹಾಸಿಕ ಮರಗಳ ಸಂರಕ್ಷಣೆ ಕಾರ್ಯಕ್ರಮ
Team Udayavani, Nov 15, 2019, 7:25 PM IST
ವಿಜಯಪುರ: ಐತಿಹಾಸಿಕ ಸ್ಮಾರಕಗಳಂತೆ ನಗರದಲ್ಲಿ ಆದಿಲ್ ಶಹಿ ಅರಸರು ವಿದೇಶಗಳಿಂದ ತಂದು ನೆಟ್ಟು, ಬೆಳೆಸಿರುವ ಪ್ರಾಚೀನ ಗಿಡಮರಗಳಿಗೂ ಭೇಟಿಗೂ ಪ್ರವಾಸಿಗರು ಬರುವಂತೆ ಉತ್ತೇಜಿಸುವ ಕಾರ್ಯಯೋಜನೆ ರೂಪಿಸಬೇಕಿದೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಪ್ರೊ| ಮುರುಗೇಶ ಪಟ್ಟಣಶೆಟ್ಟಿ ಹೇಳಿದರು.
ವಿಜಯಪುರದ ಸೈಕ್ಲಿಂಗ್ ಕ್ಲಬ್ ನೇತೃತ್ವದಲ್ಲಿ ಯೋಗಾಪುರದಲ್ಲಿರುವ ಐತಿಹಾಸಿಕ ಬಾವೋಬಾಬ್ ಕುರಿತಾದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮರದ ಐತಿಹಾಸಿಕ ಅಂಶ ಹಾಗೂ ವಿಶೇಷತೆಗಳ ಕುರಿತು ಉಪನ್ಯಾಸ ನೀಡಿದ ಅವರು, ವಿಜಯಪುರದಲ್ಲಿರುವ ಈ ಅಪರೂಪದ ಮರ ಇಡೀ ಭಾರತದಲ್ಲಿ 27-30 ಈ ಪ್ರಭೇದದ ಮರಗಳಿವೆ. ಇದರಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳನಾಡು, ಆಂಧ್ರ, ಗೋವಾಗಳಲ್ಲಿ ತಲಾ 2, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರಗಳಲ್ಲಿ ತಲಾ 1 ಮರ ಇದೆ ಎಂದು ವಿವರಿಸಿದರು.
ಅಡಾನ್ಸೊನಿಯಾ ಡಿಜಿಟಾಟಾ ಎಂಬ ಜೀವಶಾಸ್ತ್ರ ನಾಮಹೊಂದಿರುವ ಈ ಮರ 369 ವರ್ಷ ಹಳೆಯದಾಗಿದೆ. ಆದಿಲ್‌ಶಾಹಿ ಅರಸರು ಟರ್ಕಿಯಿಂದ ಈ ಮರವನ್ನು ತಂದು ಬೆಳೆಸಿದ್ದರು. ವಿಜಯಪುರದಲ್ಲಿ ಇಬ್ರಾಹಿಂರೋಜಾ ಹಿಂಭಾಗದಲ್ಲಿ ಇರುವ ಈ ಭವ್ಯ ಮರ ಇತ್ತೀಚೆಗೆ ನೆಲಕ್ಕುರುಳಿ, ನಾಶವಾಗಿದೆ. ಸದ್ಯ ವಿಜಯಪುರ ನಗರದ ಯೋಗಾಪುರದ ಸಯ್ಯದ್ ಶಾ ಇಮಾಮುದ್ದೀನ್ ಖಾದ್ರಿ ದರ್ಗಾದ ಹತ್ತಿರ ಇರುವ ಈ ಪ್ರಾಚೀನ ಮರ ಮುಂದಿನ ದಿನಗಳಲ್ಲಿ ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಸೈಕ್ಲಿಂಗ್ ಕ್ಲಬ್ ಸಂಚಾಲಕ ಡಾ| ಮಹಾಂತೇಶ ಬಿರಾದಾರ ಮಾತನಾಡಿ, ಆದಿಲ್‌ಶಾಹಿ ಅರಸರು ವೃಕ್ಷ ಪ್ರೇಮಿಗಳಾಗಿದ್ದರು. ಅವರ ಉದ್ಯಾನವನಗಳಲ್ಲಿ, ಭವ್ಯ ಮಹಲ್‌ಗಳ ಸುತ್ತ ಈ ರೀತಿಯ ವಿಶೇಷ ತಳಿಗಳನ್ನು ವಿವಿಧ ದೇಶಗಳಿಂದ ತಂದು ನೆಟ್ಟು ಬೆಳೆಸಿದ್ದಾರೆ. ಅವರು ಮಕ್ಕಳನ್ನು ನೋಡುವ ರೀತಿ ಮರಗಳನ್ನು ಪ್ರೀತಿಸುತ್ತಿದ್ದರು. ಪ್ರತಿ ವರ್ಷವು ಸಸಿಗಳ ಉತ್ಸವ ಏರ್ಪಡಿಸುತ್ತಿದ್ದರು ಎಂದು ವಿವರಿಸಿದರು.
ಡಾ| ಶಂಭು ಕರ್ಪೂರಮಠ ಮಾತನಾಡಿ, ಈ ಮರದ ಎಲೆಗಳು, ಬೀಜಗಳು ವಿಶೇಷ ಔಷ ಧೀಯ ಗುಣಗಳನ್ನು ಹೊಂದಿದ್ದು, ಮಲೇರಿಯಾ, ಕ್ಷಯರೋಗ, ಜ್ವರ, ಅತೀಸಾರ, ರಕ್ತಹೀನತೆ ಸೇರಿದಂತೆ ಹಲವು ರೋಗಗಳಲ್ಲಿ ಬಳಕೆ ಮಾಡಬಹುದಾಗಿದ್ದು, ಮನುಷ್ಯನ ರೋಗ ಪ್ರತಿರೋಧಕ ಶಕ್ತಿಯನ್ನು ಸಹ ಇದು ಹೆಚ್ಚಿಸುತ್ತದೆ” ಎಂದರು. ಶಿವನಗೌಡ ಪಾಟೀಲ್, ಸುನೀಲ ಮಂತ್ರಿ, ಮಹಾಂತೇಶ ಹೊಸೂರ, ವಿಶಾಲ ಹಿರಾಸ್ಕರ್, ಸಿದ್ದು ನಾಯ್ಕೊಡಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
MUST WATCH
ಹೊಸ ಸೇರ್ಪಡೆ
China Badminton: ಚಿರಾಗ್- ಸಾತ್ವಿಕ್ ಸೆಮಿಫೈನಲ್‌ಗೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.