ಜಿಲ್ಲೆಯಲ್ಲಿ ಫಾಸ್ಟಾಗ್‌ ಸಂಗ್ರಹ ಶುರು

ಟೋಲ್‌ ಪ್ಲಾಜಾದಲ್ಲಿ ನಿತ್ಯ ಓಡಾಡುವ ವಾಹನಗಳಲ್ಲಿ ಶೇ.20ಕ್ಕೆ ಮಾತ್ರ ಫಾಸ್‌ಟ್ಯಾಗ್‌

Team Udayavani, Nov 23, 2019, 10:56 AM IST

23-November-6

„ಜಿ.ಎಸ್‌.ಕಮತರ
ವಿಜಯಪುರ:
ವಿಜಯಪುರ ನಗರದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್‌ ಪ್ಲಾಜಾದಲ್ಲಿ ಈಗಾಗಲೇ ಫಾಸ್ಟಾಗ್‌ ಮೂಲ ಶುಲ್ಕ ಸಂಗ್ರಹ ಆರಂಭಗೊಂಡಿದೆ. ದೇಶಾದ್ಯಂತ ಡಿಸೆಂಬರ್‌ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಫಾಸ್ಟಾಗ್‌ ಕುರಿತು ಜಾಗೃತಿ ಕೂಡ ಆರಂಭಗೊಂಡಿವೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಶುಲ್ಕ ಭರಿಸಲು ವಿಜಯಪುರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರದ ಹೊರ ವಲಯದಲ್ಲಿರುವ ಕೃಷಿ ಮಹಾವಿದ್ಯಾಲಯದ ಬಳಿ ಟೋಲ್‌ ಪ್ಲಾಜ್‌ ನಿರ್ಮಿಸಿದೆ. 2016 ಏಪ್ರಿಲ್‌ನಿಂದ ಟೋಲ್‌ ಸಂಗ್ರಹ ಆಗಂಭಗೊಂಡಿದ್ದು, ಪ್ರಥಮ ವರ್ಷ 10 ಮಾರ್ಗಗಳಲ್ಲಿ 2ಕ್ಕೆ ಮಾತ್ರ ಅಳವಡಿಸಿದ್ದ ಫಾಸ್ಟಾಗ್‌ ವ್ಯವಸ್ಥೆಯನ್ನು ಇದೀಗ ಎಲ್ಲ ಮಾರ್ಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡಿದೆ.

ಕಳೆದ ಜುಲೈ ತಿಂಗಳಲ್ಲಿ ಫಾಸ್ಟಾಗ್‌ ತಂತ್ರಜ್ಞಾನ ಅಳವಡಿಕೆ ಕುರಿತು ಕೇಂದ್ರ ಸಾರಿಗೆ ಮಂತ್ರಾಲಯ ಎಲ್ಲಾ ಹೆದ್ದಾರಿ ಸಂಚಾರಿ ಶುಲ್ಕ ಸಂಗ್ರಹ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದೀಗ ಕಳೆದ ಎರಡು ದಿನಗಳ ಹಿಂದೆ ಫಾಸ್ಟಾಗ್‌ ಕಡ್ಡಾಯ ಅಳವಡಿಕೆ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದ ವಿಜಯಪುರ ಟೋಲ್‌ನಲ್ಲಿ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಧ್ವನಿ ಮುದ್ರಿತ ಮಾಧ್ಯಮದ ಮೂಲಕ ಹಗಲು-ರಾತ್ರಿ ಎನ್ನದೇ ಧ್ವನಿವರ್ಧಕದಲ್ಲಿ ಫಾಸ್ಟಾಗ್‌ ಅಳವಡಿಸುವ ಕುರಿತು ವಾಹನ ಮಾಲೀಕರಿಗೆ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ.

ಮತ್ತೊಂದೆಡೆ ಜಿಲ್ಲೆಯಲ್ಲಿ ಕಳೆದ ಜುಲೈನಿಂದ ಹೊಸ ವಾಹನಗಳಿಗೆ ಫಾಸ್ಟಾಗ್‌ ಅಳವಡಿಸಿದ ನಂತರವೇ ನೋಂದಣಿ ಮಾಡಲಾಗುತ್ತಿದೆ. ಈವರೆಗೆ ಸುಮಾರು 7 ಸಾವಿರ ವಾಹನಗಳಿಗೆ ಫಾಸ್ಟಾಗ್‌ ತಂತ್ರಜ್ಞಾನ ಅಳವಡಿಸಲಾಗಿದೆ. ವಿಜಯಪುರ ನಗರದ ಟೋಲ್‌ ಪ್ಲಾಜಾದಲ್ಲಿ ನಿತ್ಯವೂ ಸರಾಸರಿ 2,000 ವಾಹನಗಳು ಓಡಾಡುತ್ತಿದ್ದು, ಇದರಲ್ಲಿ ಶೇ.20 ವಾಹನಗಳಿಗೆ ಫಾಸ್ಟಾಗ್‌ ಸೌಲಭ್ಯ ವ್ಯವಸ್ಥೆ ಅಳವಡಿಸಿಕೊಂಡು ಓಡಾಡುತ್ತಿವೆ. ಇದರಿಂದ ನಿತ್ಯ ಸಂಗ್ರಹದ ಒಟ್ಟು ಶುಲ್ಕದ ಮೊತ್ತದಲ್ಲಿ ಶೇ.30 ಶುಲ್ಕ ಫಾಸ್ಟಾಗ್‌ಮೂಲಕವೇ ಸಂಗ್ರಹವಾಗುತ್ತಿದೆ.

ಇನ್ನು ನಗರ ಪ್ರದೇಶದ 20 ಕಿ.ಮೀ. ವ್ಯಾಪ್ತಿಯ ಬಿಳಿಬೋರ್ಡ್‌ ವಾಹನಗಳಿಗೆ ಟೋಲ್‌ಪ್ಲಾಜಾಗಳು ಮಾಸಿಕ 265 ರೂ. ಮೊತ್ತದ ಪಾಸ್‌ ನೀಡುತ್ತಿದ್ದು, ಸುಮಾರು 300 ವಾಹನಗಳು ಅದರಲ್ಲೂ ಕಾರುಗಳಿಗೆ ಪಾಸ್‌ ನೀಡಿದ್ದು, ಫಾಸ್ಟಾಗ್‌ ಸೇವೆಗೆ ಸುಲಭವಾಗಿದೆ.

ಫಾಸ್ಟಾಗ್‌ ಸ್ಕ್ಯಾನ್ ಮಾಡುವ ಯಂತ್ರದಲ್ಲಿ ದೋಷ ಕಂಡು ಬಂದಲ್ಲಿ ಮಾನವ ಚಾಲಿತವಾಗಿ ಸ್ಕ್ಯಾನ್ ಮಾಡಲು ಕಾರ್ಯನಿರತ 2 ಹಾಗೂ ಕಾಯ್ದಿರಿಸಿದ 2 ಯಂತ್ರಗಳ ಸೇವೆಯೂ ಇದೆ. ಆದರೆ ವಿಜಯಪುರ ಟೋಲ್‌ ಪ್ಲಾಜಾದಲ್ಲಿ 10 ಮಾರ್ಗಗಳಲ್ಲೂ ಫಾಸ್ಟಾಗ್‌ ವ್ಯವಸ್ಥೆ ಇದ್ದು, ಈವರೆಗೆ ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ. ಆದರೆ ಸರ್ಕಾರ ಪೂರ್ವ ತಯಾರಿ ಇಲ್ಲದೇ, ಫಾಸ್ಟಾಗ್‌ ತಂತ್ರಜ್ಞಾನದಲ್ಲಿ ನಕಾರಾತ್ಮಕ ಸಂಗತಿಗಳ ಕುರಿತು ಇರುವ ಅನುಮಾನಗಳಿಗೆ ಸಮಜಾಯಿಸಿ ನೀಡದೇ ಜಾರಿಗೆ ತರುತ್ತಿರುವ ಕುರಿತು ವಾಹನ ಮಾಲೀಕರು, ಚಾಲಕರು ಗೊಣಗುತ್ತಿದ್ದಾರೆ.

ಫಾಸ್ಟಾಗ್‌ ಕಳ್ಳತನವಾದಲ್ಲಿ ಅಥವಾ ಕಳೆದು ಹೋದಲ್ಲಿ ಮೊಬೈಲ್‌ ಸಿಮ್‌ ಕಳೆದ ಸಂದರ್ಭದಲ್ಲಿ ಸೇವೆ ಸ್ಥಗಿತಗೊಳಿಸುವ ಕುರಿತು ಇರುವ ವ್ಯವಸ್ಥೆ ಕುರಿತಾಗಲಿ, ಸದರಿ ಸೇವೆಗೆ ಕಾರುಗಳ ಮಾಲೀಕರು ಬ್ಯಾಂಕ್‌ ಖಾತೆ ಹಾಗೂ ಖಾಸಗಿ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಇದರ ಸುರಕ್ಷತೆ ಕುರಿತು ಸ್ಪಷ್ಟೀಕರಿಸಿಲ್ಲ.

ಸ್ಕ್ಯಾನ್ ತಾಂತ್ರಿಕ ದೋಷ, ಫಾಸ್ಟಾಗ್‌ಗೆ ಸಂಪರ್ಕ ಕಲ್ಪಿಸಿರುವ ಬ್ಯಾಂಕ್‌ ಖಾತೆಯಲ್ಲಿ ಶುಲ್ಕ ಭರಿಸುವಷ್ಟು ಹಣ ಇಲ್ಲದಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ (ಎನಿಟಿಸಿ) ಕುರಿತು ಸೇವೆ ಸಿಗದೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಕಡಿತವಾಗುವ ಅಪಾಯದಂಥ ಸಂಗತಿಗಳ ಕುರಿತು ಪರ್ಯಾಯ ವ್ಯವಸ್ಥೆ ಇರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟೀಕರಿಸದೇ ಏಕಾಏಕಿ ಡಿಜಿಟಲೀಕರಣಕ್ಕಾಗಿ ಫಾಸ್ಟಾಗ್‌ ಸೇವೆ ಆರಂಭಿಸುತ್ತಿರುವ ಕುರಿತು ಸಾರ್ವಜನಿಕರಲ್ಲಿ ಬೇಸರವೂ ಇದೆ.

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.