ಪ್ರವಾಸೋದ್ಯಮಕ್ಕೆ ಪ್ರತ್ಯೇಕ ವೆಬ್‌ಸೈಟ್‌


Team Udayavani, Sep 21, 2019, 12:32 PM IST

21-Sepctember–6

ಜಿ.ಎಸ್‌. ಕಮತರ

ವಿಜಯಪುರ: ಎಲ್ಲ ಇದ್ದೂ ಏನೂ ಇಲ್ಲದಂತೆ ಅನಾಥ ಸ್ಥಿತಿಯಲ್ಲಿ ಬಳಲುತ್ತಿರುವ ವಿಜಯಪುರ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡುವ ಆಶಾದಾಯಕ ಬೆಳವಣಿಗೆಯೊಂದು ಸದ್ದಿಲ್ಲದೇ ಕೆಲಸ ನಡೆಸಿದೆ. ವಿಶ್ವದ ಗಮನ ಸೆಳೆದಿರುವ ವಿಜಯಪುರ ಪಾರಂಪರಿಕ ಸ್ಮಾರಕಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಪ್ರವಾಸಿಗರ ಅನುಕೂಲಕ್ಕೆ ಬೇಕಾದ ವೆಬ್‌ಸೈಟ್‌, ವಿವಿಧ ವಿಷಯಗಳ ಆ್ಯಪ್‌ ರೂಪಿಸಲಾಗಿದೆ. ಜಿಲ್ಲೆಯ ಯುವಕನೊಬ್ಬ ಸ್ವಯಂ ಪ್ರೇರಿತವಾಗಿ ನಡೆಸಿರುವ ಈ ಮಹತ್ವದ ಕೆಲಸ ಗುರುತಿಸಿದ ಜಿಲ್ಲಾಡಳಿತ ಆತನ ಬೆನ್ನಿಗೆ ನಿಂತಿದೆ. ವಿಜಯಪುರ ಪ್ರವಾಸೋದ್ಯಮ ಬಲವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುವ ವೆಬ್‌ ಸೈಟ್‌, ವಿಶಿಷ್ಟ ಆ್ಯಪ್‌ ಗಳು ವಿಶ್ವ ಪ್ರವಾಸೋದ್ಯಮ ದಿನದಂದು ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ದೇಶ ಮಾತ್ರವಲ್ಲ ವಿಶ್ವ ಪ್ರವಾಸಿಗರನ್ನು ನಿಬ್ಬೆರಗಾಗಿಸುವ ಹತ್ತು ಹಲವು ವಿಶಿಷ್ಟ ಹಾಗೂ ಪರಂಪರಿಕ ವಾಸ್ತು ವಿನ್ಯಾಸದ ಸ್ಮಾರಕಗಳಿದ್ದು, ಪ್ರಚಾರದ ಕೊರತೆ ಎದುರಿಸುತ್ತಿವೆ. ಪ್ರವಾಸಿಗರು ಮಾತ್ರ ಸ್ಥಳೀಯರಿಗೇ ಅನಾಮಿಕವಾಗಿರುವ ಸ್ಮಾರಕಗಳ ಮೇಲೆ ಬೆಳಕ ಚೆಲ್ಲವು ವಿಶಿಷ್ಟ ಸಾಹಸದ ಮೂಲ ತವರಿಗೆ ಅಪರೂಪದ ಕೊಡುಗೆ ನೀಡಲು ಮುಂದಾಗಿರುವ ಯುವಕನ ಹೆಸರು ಕಿರಣ ಕುಲಕರ್ಣಿ.

ಕಳೆದ ನಾಲ್ಕು ತಿಂಗಳ ಹಿಂದೆ ಕಿರಣ ಕುಲಕರ್ಣಿ ಸಾಫ್ಟ್ವೇರ್‌ ಯುವ ಎಂಜಿನಿಯರ್‌. ನಗರದಲ್ಲಿ 6ಐ ಸಲೂಶನ್‌ ಎಂಬ ಸಾಫ್ಟವೇರ್‌-ಐಟಿ ಉದ್ಯಮ ಆರಂಭಿಸಿದ್ದು ಬದುಕಿಗಾಗಿ ವ್ಯಾಪಾರದ ಜೊತೆಗೆ ಹುಟ್ಟಿದೂರಿಗೆ ಏನನ್ನಾದರೂ ಮಾಡುವ ಹಂಬಲವೂ ಅವರನ್ನು ಕಾಡುತ್ತಿತ್ತು. ಜಿಲ್ಲೆಯ ಪ್ರವಾಸೋದ್ಯಮದ ಕುರಿತು ವೆಬ್‌ಸೈಟ್‌ನಲ್ಲಿ ಯಾವ ಮಾಹಿತಿಯೂ
ಸಿಗದಿರುವುದನ್ನು ಗಮನಿಸಿ, ವಿಜಯಪುರ ಐತಿಹಾಸಿಕ ಸಿರಿಯನ್ನು ಅಂತರ್ಜಾಲದಲ್ಲಿ ತುಂಬಿಕೊಡಲು ಯೋಚಿಸಿ ಈ ನಿಟ್ಟಿನಲ್ಲಿ ಸದ್ದಿಲ್ಲದೇ ಕೆಲಸ ಆರಂಭಿಸಿದ್ದರು.

ಇದನ್ನು ಅರಿತ ಹೊಟೇಲ್‌ ಉದ್ಯಮಿಯೊಬ್ಬರು ಈ ಯುವಕನಿಗೆ ಕುಳಿತು ಕೆಲಸ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ತಮ್ಮ ಪಾಡಿಗೆ ತಾವು ವೆಬ್‌ಸೈಟ್‌ ಹಾಗೂ ಆ್ಯಪ್‌ ರೂಪಿಸಲು ಮುಂದಾಗಿದ್ದರು. ಕಿರಣ ಅವರ ಕೆಲಸದ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ ವೈ. ಎಸ್‌. ಪಾಟೀಲ ಖಾಸಗಿಯಾಗಿ ರೂಪಿಸುವ ಬದಲು ವಿಜಯಪುರ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ವೆಬ್‌ಸೈಟ್‌ ರೂಪಿಸಿಕೊಡಲು ಕೋರಿದ್ದರು. ಜಿಲ್ಲೆಗೆ ತನ್ನ ಸೇವೆಯನ್ನು ಉಚಿತವಾಗಿ ಮಾಡುವುದಾಗಿ ಹೇಳಿದರೂ ಜಿಲ್ಲಾಧಿಕಾರಿ ಪಾಟೀಲ ಅವರು ಸಾಂಕೇತಿಕ ಹಣ ಪಡೆದು ಯಶಸ್ವಿ ರೂಪದಲ್ಲಿ ವೆಬ್‌ಸೈಟ್‌ ರೂಪಿಸಲು ಸೂಚಿಸಿದ್ದರು.

ಇದರಿಂದ ಇನ್ನಷ್ಟು ಉತ್ತೇಜಿತನಾಗಿರುವ ಯುವಕ ಸಾಫ್ಟವೇರ್‌ ಎಂಜಿನಿಯರ್‌ ಕಿರಣ ಕುಲಕರ್ಣಿ, ವಿಶಿಷ್ಟ ವಿನ್ಯಾಸದ ವೆಬ್‌ಸೈಟ್‌ ಮಾತ್ರವಲ್ಲದೇ ಗೂಗಲ್‌  ಪ್ಲೇ ಸ್ಟೋರ್‌ ಮೂಲಕ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ವರ್ಚ್ಯೂವಲ್‌ ರಿಯಾಲಿಟಿ ಟೂರ್‌ ವಿಡಿಯೋ ಹಾಗೂ ಧ್ವನಿ ಮಾರ್ಗದರ್ಶಿ ಹೆಸರಿನಲ್ಲಿ ವಿವಿಧ ಬಗೆಯ ಸೌಲಭ್ಯಗಳನ್ನು ರೂಪಿಸಲು ಮುಂದಾಗಿದ್ದಾರೆ.

ವಿಶಿಷ್ಟ ವಿನ್ಯಾಸದ ವೆಬ್‌ಸೈಟ್‌: ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ಇತಿಹಾಸ, ವಿಶೇಷತೆ, ಮಹತ್ವಗಳಂಥ ವಿಷಯಗಳ ಮೇಲೆ ಬೆಳಕು ಚೆಲ್ಲುವ ವರ್ಚ್ಯೂ ವಲ್‌ ರಿಯಾಲಿಟಿ ಟೂರ್‌ ವಿಡಿಯೋ ರಾಜ್ಯದಲ್ಲೇ ಮೊದಲ ಬಾರಿಗೆ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲು
ಮುಂದಾಗಿದ್ದಾರೆ. ಜಿಲ್ಲೆಯ 15 ಪಾರಂಪರಿಕ ಸ್ಮಾರಕಗಳ ಮೇಲೆ ವರ್ಚ್ಯೂವಲ್‌ ರಿಯಾಲಿಟಿ
ಟೂರ್‌ ವಿಡಿಯೋ ರೂಪಿಸಲು ಮುಂದಾಗಿದ್ದು, ಈಗಾಗಲೇ ಗೋಲಗುಮ್ಮಟ ಹಾಗೂ ಉಪರಿ
ಬುರುಜ್‌ ವಿಡಿಯೋ ಚಿತ್ರೀಕರಣ ಪೂರ್ಣಗೊಂಡಿವೆ. ವರ್ಚ್ಯೂವಲ್‌ ರಿಯಾಲಿಟಿ ವಿಡಿಯೋ ಬಾಕ್ಸ್‌ನಲ್ಲಿ ಹಾಕಿಕೊಂಡು ಮೊಬೈಲ್‌ನಲ್ಲೇ ನೋಡುವಂತೆ ಈ ಸಾಧನ ರೂಪಿಸಲಾಗುತ್ತಿದೆ. ಇದಕ್ಕಾಗಿ ಇತಿಹಾಸ ಸಂಶೋಧಕರು, ತಜ್ಞರು, ಚಿಂತಕರು, ಪ್ರವಾಸೋದ್ಯಮ ಆಸಕ್ತರಂಥ ಹಲವು ಜನರೊಂದಿಗೆ ಚರ್ಚಿಸಿ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದಿದ್ದಾರೆ.

ಎಲ್ಲರಿಗೂ ಸಹಕಾರಿ: ವಿಜಯಪುರ ಜಿಲ್ಲೆಯಲ್ಲಿ ವೃದ್ಧರು, ವಿಕಲಚೇತನರು ಸುಲಭವಾಗಿ ಏರಲು ಸಾಧ್ಯವಾಗದ ಹಲವು ಸ್ಮಾರಕಗಳಿವೆ. ಈ ಸ್ಮಾರಕ ಏರಲಾಗದ ಕೊರಗು ವಿಕಲಚೇತನರನ್ನು ಕಾಡುತ್ತವೆ. ಮತ್ತೂಂದೆಡೆ ಪ್ರವಾಸಕ್ಕೆ ಬರುವರೊಂದಿಗೆ ವಿಕಲಚೇತನರಿದ್ದಲ್ಲಿ ಅವರನ್ನು ಸ್ಮಾರಕದ ಬಳಿ ಬಿಟ್ಟು ಹೋಗಲು ತೊಂದರೆ ಆಗುತ್ತದೆ. ಆಗ ವರ್ಚ್ಯೂ ವಲ್‌ ರಿಯಾಲಿಟಿ ವಿಡಿಯೋ ಬಾಕ್ಸ್ ನಲ್ಲಿ ಹಾಕಿಕೊಂಡು ಮೊಬೈಲ್‌ನಲ್ಲೇ ಸ್ಮಾರಕಗಳ ವಿಶಿಷ್ಟ ದರ್ಶನ ಮಾಡಲು ಸಾಧ್ಯವಿದೆ. ವಿಡಿಯೋ ಜೊತೆಗೆ ಹಿನ್ನೆಲೆಯಾಗಿ ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ಆಯಾ ಸ್ಮಾರಕಗಳ ವಿಶ್ಲೇಷಣೆ ನೀಡುವ ಉದ್ದೇಶವಿದ್ದು, ಇದು
ಈಡೇರಿದಲ್ಲಿ ವಿಜಯಪುರ ಪ್ರವಾಸ ಮಾಡುವ ವಿಕಲಚೇತನರು ಕೂಡ ಪುಳಕಗೊಳ್ಳಲಿದ್ದಾರೆ.

ಇದರಿಂದ ವಿಜಯಪುರ ಪಾರಂಪರಿಕ ಸ್ಮಾರಕಗಳ ನೈಜ ದರ್ಶನ ಮಾಡಿಕೊಳ್ಳಲು ಸಾಧ್ಯವಿದೆ. ಗೈಡ್‌ಗಳು ಕೂಡ ಇದನ್ನು ಬಳಸಿಕೊಂಡು ಪ್ರವಾಸಿಗರನ್ನು ಸೆಳೆಯಲು ಸಹಕಾರಿ ಆಗಲಿದೆ. ನೀವು ಮುಖವನ್ನು ತಿರುಗಿಸಿದಂತೆ ಈ ವಿಡಿಯೋ ತಿರುಗಲಿದ್ದು, ಕೆಳಗೆ ಮುಖ ಮಾಡಿದರೆ ಸ್ಮಾರಕಗಳನ್ನು ಮೇಲಿನಂದ ಕೆಳಕ್ಕೆ ದರ್ಶನ ಮಾಡಿಲಿವೆ. ಈ ರೀತಿಯ ಸಾಧನ ರೂಪುಗೊಳ್ಳುತ್ತಿರುವುದು ರಾಜ್ಯದಲ್ಲೇ ಇದೇ ಮೊದಲ ಬಾರಿ ಎಂಬುದು ಕಿರಣ
ಮಾತು.

ಇದಲ್ಲದೇ ಅಂಧರು ಜಿಲ್ಲೆಯ ಪ್ರವಾಸಕ್ಕೆ ಬಂದಾಗ ಸುಲಭವಾಗಿ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಮಹತ್ವದ ಕುರಿತು ತಿಳಿದುಕೊಳ್ಳಲು ಸಹಕಾರಿ ಆಗಲು ಪ್ರವಾಸಿ ಧ್ವನಿ ಮಾರ್ಗದರ್ಶಿ ಎಂಬ ವಿಶಿಷ್ಟ ಧ್ವನಿ ಮುದ್ರಿಕೆ ಆ್ಯಪ್‌ ರೂಪಿಸಲಾಗುತ್ತಿದೆ. ಅಂಧರು ಮಾತ್ರವಲ್ಲ, ಪ್ರವಾಸಿ ಮಾರ್ಗದರ್ಶಿಗಳು ಬೇಕಿಲ್ಲದ ಅದರಲ್ಲೂ ಹವ್ಯಾಸಿ ಪ್ರವಾಸಿಗಳಿಗೆ ಈ ಆ್ಯಪ್‌ ಅತ್ಯಂತ ಸಹಕಾರಿ ಅಗಲಿದೆ. ಈ ಯೋಜನೆಯಲ್ಲಿ ಈಗಾಗಲೇ ಗೋಲಗುಮ್ಮಟ ಸ್ಮಾರಕದ ಹಿನ್ನೆಲೆ ಹೇಳುವ ಧ್ವನಿಮುದ್ರಣಕ್ಕೆ ಸಿದ್ಧತೆ ನಡೆದಿದೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ ಮೂರು ಭಾಷೆಗಳ ಪ್ರಾಯೋಗಿಕವಾಗಿರುವ ಯೋಜನೆ ಯಶಸ್ವಿಯಾದಲ್ಲಿ ಜಿಲ್ಲೆಯ ಎಲ್ಲ ಸ್ಮಾರಕಗಳ ಕುರಿತೂ ಆಡಿಯೋ ಟೂರ್‌ ಗೈಡ್‌ ರೂಪುಗೊಳ್ಳಲಿವೆ.

ಇದಲ್ಲದೇ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪ್ರತ್ಯೇಕವಾಗಿ www.vijayapuratourism.in ವೆಬ್‌ ಸೈಟ್‌ ರೂಪಿಸಿದ್ದು, ವಿಜಯಪುರ ಜಿಲ್ಲೆಯ ಇತಿಹಾಸ, ಹಿನ್ನೆಲೆ, ಮಹತ್ವ, ವಿಶೇಷತೆಯಂತ ವಿಷಯಗಳು ಅಡಕವಾಗಲಿದೆ. ವಿಶ್ವ ಪ್ರವಾಸೋದ್ಯಮ ದಿನವಾದ ಸೆ. 27ರಂದು ಲೋಕಾರ್ಪಣೆಗೊಳ್ಳಲಿರುವ ಈ ವೆಬ್‌ಸೈಟ್‌ ನಲ್ಲಿ ಜಿಲ್ಲೆಯ ಸಮಗ್ರ ಮಾಹಿತಿ ಸಂಗ್ರಹಿಸಿ ನೀಡುವ ಗುರಿಯೂ ಜಿಲ್ಲಾಡಳಿತಕ್ಕಿದೆ.

ಸದರಿ ವೆಬ್‌ಸೈಟ್‌ನಲ್ಲಿ ನಗರಲ್ಲಿರುವ ಐತಿಹಾಸಿಕ ಪ್ರಮುಖ 22 ಸ್ಮಾರಕಗಳ ಸ್ಥಳಗಳನ್ನು ನಕ್ಷೆಗೆ ಜೋಡಿಸಲಾಗಿದೆ. ನಕ್ಷೆಯಲ್ಲಿ ತಮಗೆ ಬೇಕಿರುವ ಸ್ಮಾರಕದ ಮೇಲೆ ಕ್ಲಿಕ್‌ ಮಾಡಿದಲ್ಲಿ ಸ್ಮಾರಕದಿಂದ ಸ್ಮಾರಕಕ್ಕೆ ಹೋಗುವ ಮಾರ್ಗ, ಅಂತರ ಹಾಗೂ ಸ್ಮಾರಕಗಳ ಹಿನ್ನೆಲೆ ಕುರಿತು ವಿವರ ಲಭ್ಯವಾಗಲಿದೆ. ಇದರಿಂದ ಗೈಡ್‌ಗಳು ಮಾತ್ರವಲ್ಲ ಅನ್ಯರ ಸಹಾಯ ಇಲ್ಲದೇ
ವಿಜಯಪುರ ಪ್ರವಾಸವನ್ನು ಸ್ವಯಂ ಸಂಭ್ರಮಿಸಲು ಅವಕಾಶ ಕಲ್ಪಿಸಲಾಗಿದೆ.

ಸಂವಾದ ನಡೆ ಸಲು ಸಹ ಕಾ ರಿ: 360 ಡಿಗ್ರಿ ವರ್ಚ್ಯೂವಲ್‌ ರಿಯಾಲಿಟಿ ಟೂರ್‌ ವಿಡಿಯೋ, ವಸತಿ-ಊಟಕ್ಕಾಗಿ ಹೊಟೇಲ್‌ಗ‌ಳು, ಪ್ರವಾಸಿ ಗೈಡ್‌ಗಳು, ಆಯ್ದ ಪ್ರವಾಸಿ ತಾಣಗಳ ಕುರಿತು ಸಂಕ್ಷಿಪ್ತ ಮಾಹಿತಿಗಾಗಿ ಪ್ರತ್ಯೇಕ ಗ್ಯಾಲರಿಗಳನ್ನು ತೆರೆಯಲಾಗಿದೆ. ಇದಲ್ಲದೇ ದೂರದ ಪ್ರವಾಸಿಗರು ಈ ವೆಬ್‌ಸೈಟ್‌ನಲ್ಲಿ ಸಂಕ್ಷಿಪ್ತ ಸಂವಾದ ನಡೆಸಲು ಬಳಕೆದಾರರ ಸಂವಾದ
ಗ್ಯಾಲರಿಯೂ ಇರಲಿದೆ. ಭವಿಷ್ಯದಲ್ಲಿ ವೆಬ್‌ಸೈಟ್‌ನ್ನು ಇನ್ನಷ್ಟು ಉನ್ನತೀಕರಿಸಿ ಇನ್ನೂ ಮುಂದುವರಿದ ವಿಷಯಗಳೊಂದಿಗೆ ಅಭಿವೃದ್ಧಿ ಪಡಿಸುವ ಗುರಿಯೂ ಇದೆ. ಒಟ್ಟಾರೆ ಮಂಕಾಗಿರುವ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಏಕ ಕಾಲದಲ್ಲೆ ವೆಬ್‌ಸೈಟ್‌, ವಿ.ಆರ್‌. ಹಾಗೂ ಆಡಿಯೋಗ ಗೈಡ್‌ಗಳಂಥ ಆಧುನಿಕ ತಂತ್ರಜ್ಞಾನಗಳ ಮೂಲಕ ಜಗತ್ತಿನ ಪ್ರವಾಸಿಗರನ್ನು ಸೆಳೆಯಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಜಿಲ್ಲೆಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.