ಸಮಾನತೆಗೆ ಹೋರಾಡಿದ ನಿಜಶರಣ ಚೌಡಯ್ಯ
ಸರ್ವರೂ ಸಮಾನರು ಎಂಬ ಸಂದೇಶ ಸಾರಿದ ವಚನಕಾರರುಜಾತಿ-ಧರ್ಮಗಳಿಲ್ಲದ ಸಮಾಜ ಕಟ್ಟಿದ ಕೀರ್ತಿ
Team Udayavani, Aug 30, 2019, 11:11 AM IST
ವಿಜಯಪುರ: ಅಂಬಿಗರ ಚೌಡಯ್ಯ ಶರಣರ ಜಯಂತಿ ಕಾರ್ಯಕ್ರಮಕ್ಕೆ ಯರನಾಳ ಶ್ರೀಗಳು ಚಾಲನೆ ನೀಡಿದರು.
ವಿಜಯಪುರ: ನಿಜಶರಣ ಅಂಬಿಗರ ಚೌಡಯ್ಯ ಶರಣರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಧರ್ಮ ನೆಲೆಯಲ್ಲಿ ನಿಂತವರು ಅಂಬಿಗರ ಚೌಡಯ್ಯ ಶರಣರು. ಇತರೆ ಶರಣರಂತೆ ಚೌಡಯ್ಯ ಶರಣರು ದೇವರ ಕುರಿತು ವಚನಗಳಿಗಿಂತ ನಿಜಶರಣ ಅಂಬಿಗರ ಚೌಡಯ್ಯ ಶರಣರು ದೇಔದರ್ಶನವಿಲ್ಲದೇ ದೇವರ ಕುರಿತು ವಚನ ರಚಿಸಿದ ಮೊದಲಿಗರು ಎಂದು ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀಗಳು ಅಭಿಪ್ರಾಯಪಟ್ಟರು.
ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೆಂಕಟೇಶ ನಗರ ಬಡಾವಣೆಯ ಶ್ರೀ ಮಹಾಲಕ್ಷಿ ್ಮೕ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಗರ ಚೌಡಯ್ಯ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತರೆ ವಚನಕಾರರಿಗಿಂತ ಅಂಬಿಗರ ಚೌಡಯ್ಯ ಶರಣರು ರಚಿಸಿದ ವಚನಗಳು ವಿಭಿನ್ನವಾಗಿರುವುದು ಅವರಲ್ಲಿದ್ದ ವಿಶಿಷ್ಟ ಅನುಭಾವದ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದರು.
ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಆನಂದ ಔದಿ ಮಾತನಾಡಿ, ಸಮಾಜದಲ್ಲಿ ಮೇಲು-ಕೀಳು ಎಂಬ ಭಾವ ಮರೆತು ಸರ್ವರು ಸಮಾನರು ಎಂಬ ಭಾವ ನ್ಯೆಜವಾಗಿ ಮೆಳ್ಯೆಸಿದಾಗ ಜಾತಿ-ಮತ-ಧರ್ಮ ಬೇಧಗಳಿಲ್ಲದ ಸಮಾಜ ಕಟ್ಟುವಲ್ಲಿ ಶ್ರಮಿಸಿದ ನಿಜ ಶರಣ ಅಂಬಿಗರ ಚೌಡಯ್ಯ ಶರಣರ ಆಶಯಗಳಿಗೆ ಅರ್ಥ ಬರುತ್ತದೆ ಎಂದರು.
ಉಪನ್ಯಾಸಕ ರಾಜೇಂದ್ರಕುಮಾರ ಬಿರಾದಾರ ಮಾತನಾಡಿ, ಮನುಷ್ಯ ಭೂಮಿಗೆ ಬರುವಾಗ ಜಾತಿ, ಧರ್ಮ, ಬೇಧ, ಭಾವಗಳಿಲ್ಲದೇ ಬರುತ್ತಾನೆ. ಆದರೆ ಭೂಮಿಗೆ ಬಂದಾದ ಮೇಲೆ ಜಾತಿಯ ಕೀಳು-ಮೇಳರಿಮೆ ಮ್ಯೆಗೂಡಿಸಿಕೊಳ್ಳುತ್ತಾನೆ. ಇಂತ ವ್ಯವಸ್ಥೆಯನ್ನು ಧಿಕ್ಕರಿಸಿಯೇ ನಿಜಶರಣ ಅಂಬಿಗರ ಚೌಡಯ್ಯನವರು ಜಾತಿ ಮೇಲು ಕೀಳು ಎನ್ನದೇ ಸರ್ವರನ್ನು ಸಮಾನವಾಗಿ ಕಂಡ ಕಲ್ಯಾಣದ ಅನುಭವ ಮಂಟಪದ ಬಸವಣ್ಣನವರ ಅನುಯಾಯಿಯಾಗಿ ಶರಣರ ಸಂಕುಲನತೆಗೆ ಹೋರಾಡಿದರು ಎಂದು ವಿಶ್ಲೇಷಿಸಿದರು.
ಸಮಿತಿ ಅಧ್ಯಕ್ಷ ಬಸವರಾಜ ಶಿವಶರಣರ ಮಾತನಾಡಿ, ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳನ್ನು ಆಲಿಸುವ ಮೂಲಕ ಜೀವನದ ಸಾರ್ಥಕತೆ ವಿಚಾರಗಳು ಎಲ್ಲರಲ್ಲಿಯೂ ಒಡಮೂಡುತ್ತವೆ. ಶರಣರ ಆದರ್ಶವೇ ನಮಗೆ ದಾರಿ ದೀಪ. ಇಂದಿನ ಸಮಾಜಕ್ಕೆ ಯುವಕರಿಗೆ ತಾಯಂದಿರರಿಗೆ, ರೈತರಿಗೆ ಸಂಸ್ಕಾರವನ್ನು ಕೊಡುವ ಕೇಂದ್ರವೆಂದರೆ ಮಠ, ಮಂದಿರಗಳು ಹಾಗಂತ ನಿಜ ಶರಣ ಅಂಬಿಗರ ಚೌಡಯ್ಯನವರ ಅಧ್ಯಾತ್ಮಿಕ ನಾಟಕ ನೋಡುವುದರೊಂದಿಗೆ ಪುಣ್ಯಕ್ಕೆ ಮೊರೆ ಹೋದಂತಾಗುತ್ತದೆ ಎಂದರು.
ವಿದ್ಯಾವತಿ ಅಂಕಲಗಿ, ಮಾತಾ ಮಾಣೀಕೇಶ್ವರ ಬ್ಯಾಂಕ್ ಅಧ್ಯಕ್ಷ ಶಂಕರ ನಾಟೀಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಅಧಿಧೀಕ್ಷಕ ಎಂ.ಎಚ್. ಸಂಗಣ್ಣ, ಭೀಮಣ್ಣ ಕತಕನಹಳ್ಳಿ, ಗುರಲಿಂಗಪ್ಪ ಹಡಪದ, ಅಪ್ಪುಗೌಡ ಪಾಟೀಲ, ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ತಾಲೂಕು ಅಧ್ಯಕ್ಷ ಭರತ ಕೋಳಿ, ಶಿವಾನಂದ ಭುಯ್ನಾರ, ಅರವಿಂದ ಕೋಲಕಾರ, ಡಿ.ಕೆ.ರಾಠೊಡ, ಚಂದ್ರಶೇಖರ ಮೈಲಿಕರ, ಹರಿದಾಸ ವಾಲಿಕಾರ, ಸಂತೋಷ ಮೈಲಿಕರ, ರಂಗಪ್ಪ ಕಾಮರಡ್ಡಿ, ಅಶೋಕ ನಾಟೀಕಾರ, ರಾಮಚಂದ್ರ ವಾಘ್ಮೋರೆ, ರುದ್ರಪ್ಪ ಪಟ್ಟಣ, ಗಿರೀಶ ಕವಟಗಿ ಇತರರು ಉಪಸ್ಥಿತರಿದ್ದರು.
ಡಿ.ಎಚ್. ಕೊಲ್ಹಾರ ನಿರ್ದೇಶನದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ನಾಟಕ ಅದ್ದೂರಿ ಪ್ರದರ್ಶನಗೊಂಡಿತು. ಮಂಜುಳಾ ಹಿಪ್ಪರಗಿ, ರಾಜೇಶ್ವರಿ ಚೋಳಕೆ, ರವೀಂದ್ರ ಮೇಂಡೆಗಾರ, ಬಾಬು ಅವತಾಡೆ, ಓಂಪ್ರಕಾಶ ಕನ್ನೂರ, ಸಂಜಯ ಸ್ವಾಮಿ, ದತ್ತಾತ್ರೆಯ ಹಿಪ್ಪರಗಿ, ಮುತ್ತುರಾಜ ಸಂಕಣ್ಣನವರ ವಿವಿಧ ಪಾತ್ರಗಳಲ್ಲಿ ಮಿಂಚಿದರು. ಬಸವರಾಜ ಶಿವಶರಣರ ಸ್ವಾಗತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.