ಮಹಿಳಾ ಆಸ್ಮಿತೆ ಬಿಚ್ಚಿಟ್ಟ ಕವಯತ್ರಿಯರು
Team Udayavani, Nov 17, 2019, 3:50 PM IST
ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹಿರಿಯ-ಕಿರಿಯ ಕವಯಿತ್ರಿಯರ ಅಪೂರ್ವ ಸಂಗಮವು ಸಾಹಿತ್ಯಾಸಕ್ತರ ಗಮನ ಸೆಳೆಯಿತು. ನವ ಕವಯತ್ರಿಯರು ಮಹಿಳಾ ಲೋಕದ ಬಿಕ್ಕಟ್ಟು, ಶೋಷಣೆ, ದುಃಖ-ದುಮ್ಮಾನಗಳ, ಲೈಂಗಿಕತೆಯ ಪ್ರಜ್ಞೆ, ಸಶಕ್ತಿಕರಣದ ಕುರಿತಾದ ಹಲವಾರು ಕವಿತೆ ವಾಚಿಸಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಭಾಂಗಣದಲ್ಲಿ ಅಹಲ್ಯಾಬಾಯಿ ಮಹಿಳಾ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಕವಲಕ್ಕಿಯ ಕವಿ ಪ್ರಕಾಶನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅನೇಕ ಕವಿಯತ್ರಿಯರು ತಮ್ಮ ಕವನ ವಾಚಿಸಿದರು.
ಇಂದುಮತಿ ಲಮಾಣಿ ವಾಚಿಸಿದ ದಿವ್ಯಜ್ಯೋತಿ ಕವಿತೆ ಬಡತನ-ಶ್ರೀಮಂತಿಕೆ, ಹೆಣ್ಣು-ಗಂಡು, ಸ್ಥಾವರ-ಜಂಗಮದ ಪರಸ್ಪರ ಪ್ರತಿರೋಧ ತೆರೆದಿಟ್ಟಿತ್ತು. ತಮ್ಮ ತೀರ್ಮಾನ ಸಮರ್ಥಿಸಲು ಪುರಾಣ ಮತ್ತು ಚರಿತ್ರೆಯ ಪಾತ್ರಗಳನ್ನು ಬಳಸಿಕೊಂಡಿದ್ದರು. ಒಟ್ಟಾರೆಯಾಗಿ ವೈಯಕ್ತಿಕ ತುರ್ತಿನಿಂದ ಸಮುದಾಯಿ ದೆಡೆಗೆ ಹೊರಳಿತ್ತು ಈ ಕವಿತೆ. ಲಲಿತಾ ಹೊಸಪೇಟೆ ವಾಚಿಸಿದ ಗುಳೇದಗುಬ್ಬಿ ಕವಿತೆ, ದೈನಂದಿನ ಜೀವನದಲ್ಲಿ ಕಾಣಬರುವ ಪರಿಕರಗಳನ್ನು ವಿಷಯ ವಸ್ತುವಾಗಿಸಿ, ಬದುಕನ್ನು ವಿವರಿಸುವ ವಿಧಾನವನ್ನು ವಿಶ್ಲೇಷಿಸಿ, ಹೆಣ್ಣಿಗೆ ಗುಬ್ಬಿಯನ್ನು ಸಮೀಕರಿಸಿದ್ದು ವಿಶೇಷವಾಗಿತ್ತು. ಪುರುಷ ಲೋಕದ ಶಂಕೆ, ಹೆಣ್ಣಿನ ಲೋಕದ ನಂಬಿಕೆಗಳು ಪರಸ್ಪರ ಮುಖಾಮುಖೀಯಾಗಿದ್ದು, ನೆನಪಿನ ಹಳದಂಡದ ಜೊತೆ ಜೊತೆಗೆ ಆಶಾವಾದವನ್ನು ಕವಿತೆ ಕಟ್ಟಿಕೊಟ್ಟಿತು. ಹೇಮಲತಾ ವಸ್ತ್ರದ ಅವರ ಗಜಲ್ ಬೆತ್ತಲೆ ಮತ್ತು ಬಯಲು ಸಂಕೇತಗಳನ್ನು ಬಳಸಿ ಪುರುಷಲೋಕದ ಲೈಂಗಿಕತೆಯ ಪ್ರವೃತ್ತಿಯನ್ನು ಪ್ರಶ್ನಿಸುವ ದಾಟಿ ಎಚ್ಚರಿಸಿತ್ತು.
ಕೌದಿ ಕಾವ್ಯ ವಾಚಿಸಿದ ಗೀತಾ ಅಥರ್ಗಾ ಅವರು, ವಾಸ್ತವದ ನಿರೂಪಣೆಗಳ ಮೂಲಕ, ಶೋಷಣೆಗಳ ಮಾಯಕದ ನೆಲೆಯನ್ನು ಒಳಿತು-ಕೇಡುಗಳ ನಡುವಿನ ಒಳಸಂಬಂಧಗಳನ್ನು ಕೌದಿ ಕವಿತೆ ಸಮರ್ಥವಾಗಿ ಧ್ವನಿಸಿತ್ತು. ಭಾಗ್ಯಶ್ರೀ ದೊಡ್ಡಮನಿ ನ್ಯಾಯದ ಧ್ವನಿ ಎಂಬ ಶೀರ್ಷಿಕೆಯ ಕವಿತೆಯನ್ನು ಓದಿದರು.
ಪುರಾಣಗಳಲ್ಲಿ ಹಾಸುಹೊಕ್ಕಾಗಿರುವ ಹೆಣ್ಣು ಪಾತ್ರಗಳ ಮೂಲಕ ವರ್ತಮಾನದ ಹೆಣ್ಣಿನ ಅನ್ಯಾಯದ ನೆಲೆಯನ್ನು ಚಿತ್ರಿಸುವ ಪ್ರಯತ್ನ ಮಾಡಿದರು. ಮನುವಿನ ತಿರಸ್ಕಾರ ಹೆಣ್ಣಿನ ಚೈತನ್ಯವನ್ನು ಹತ್ತಿಕ್ಕಲಾಗದು ಎಂಬ ನಂಬಿಕೆ ಈ ಕವಿತೆಯನ್ನು ನಮ್ಮ ಹಾಡೇ ಬೇರೆ ಎಂಬ ಮಾತಿಗೆ ಸಮರ್ಥನೆ ಒದಗಿಸುವಂತಿತ್ತು.
ಜ್ಯೋತಿ ಮೇಟಿ ಅವರ ಜಾದುಗಾರ್ತಿ ಕವಿತೆ ಹೆಣ್ಣು ತನ್ನ ಅಸ್ತಿತ್ವ ಕಂಡುಕೊಳ್ಳುವ ತವಕ ಪ್ರೇಮವು ಸಂಕೋಲೆಯಲ್ಲಿ ಖೈದಿಯಾಗುವ ವಿಷಾದ ಭಾವ ಬಿಂಬಿಸಿತ್ತು. ಜೊತೆಗೆ ಹೆಣ್ಣಿನ ಲೈಂಗಿಕತೆಯ ಅಭಿವ್ಯಕ್ತಿಗೆ ಪದ ಹುಡುಕುವ ಪ್ರಯತ್ನ ಮಾಡಿಸಿತು. ಸುಜಾತಾ ಚಲವಾದಿ ವಾಚಿಸಿದ ಹೆಜ್ಜೆ ಕವಿತೆ, ಪುರುಷ ಸಮಾಜದಲ್ಲಿ ಹೆಣ್ಣು ತನ್ನನ್ನು ಮೌನವಾಗಿಸುತ್ತಿರುವ, ಬಂಸುತ್ತಿರುವ ಏರಿಕೆಗಳನ್ನು ಪ್ರಶ್ನಿಸುವಂತೆ ಭಾಸವಾಗುವ ಈ ಕವಿತೆ ಹೆಣ್ಣಿನ ಮೌನ, ಅಸಹಾಯಕತೆಯಲ್ಲಿ ಸೋಟದ ಮುನ್ನ ಸ್ಥಿತಿ ಎಂದು ಎಚ್ಚರಿಸುತ್ತಾಳೆ.
ದಾಕ್ಷಾಯಣಿ ಹುಡೇದ ಅವರ ಕವಿತೆ ಹೆಣ್ಣಿನ ಶೋಷಣೆ, ಗೊಂದಲದಾಚೆಗೂ ಗಂಡು ಸಾಂಗತ್ಯದ ಅನಿವಾರ್ಯತೆಯನ್ನು ತೆರೆದಿರಿಸಿತು. ಹೆಣ್ಣು-ಗಂಡು ಎಂಬ ಪ್ರಾಕೃತಿಕ ಅಸ್ತಿತ್ವಗಳ ನಡುವೆ ಏರ್ಪಟ್ಟಿರುವ ಅಸಹಜ ಸಂಬಂಧಗಳನ್ನು ಪರೀಕ್ಷೆಗೊಡ್ಡುವ ಪರಿಯನ್ನು ನಿರೂಪಣೆ ಮಾಡಿಸಿತ್ತು. ಚಂದ್ರಪ್ರಭಾ ಬಾಗಲಕೋಟ ನಿಲುಕದ ನೋಟ ಕವಿತೆ ಲೈಂಗಿಕತೆಯ ಅನುಭೂತಿಯನ್ನು ಹೆಣ್ಣಿನ ನೋಟಕ್ರಮದಲ್ಲಿ ನಿರೂಪಿಸುವಲ್ಲಿ ಪ್ರಯತ್ನಿಸಿತು. ಕಾಮದ ಉತ್ಕಟತೆಯಿಂದ ಆರಂಭವಾದ ನಿರೂಪಣೆ ಪ್ರೇಮದ ದಾರಿ ಹಿಡಿದು ವಾತ್ಸಲ್ಯವಾಗುವ ಮಾಯಕದ ದಾರಿ ತೆರೆದಿರಿಸಿತ್ತು. ಮಹಿಳಾ ಅಧ್ಯಯನ ವಿಭಾಗದ ಸಂಶೋಧಕಿ ಸುರೇಖಾ ರಾಠೊಡ ಪರಿಚಯಿಸಿ, ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Malpe: ಡ್ರಗ್ಸ್ ಪಾರ್ಸೆಲ್ ಹೆಸರಲ್ಲಿ ಬೆದರಿಸಿ 20 ಲ.ರೂ. ವಂಚನೆ
Udupi: ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.