ಆನಂದ ಮಹಲ್‌ನಲ್ಲಿ ಕಿನ್ನರ ಲೋಕ

ಧ್ವನಿ-ಬೆಳಕು-ಸಂಗೀತ-ನೃತ್ಯದ ಸಾಂಸ್ಕೃತಿಕ ವೈಭವಮೊದಲ ದಿನವೇ ಉತ್ತಮ ಸ್ಪಂದನೆ

Team Udayavani, Nov 11, 2019, 12:09 PM IST

11-November-5

ವಿಜಯಪುರ: ಪಾಳು ಬಿದ್ದಿದ್ದ ಆದಿಲ್‌ ಶಾಹಿ ಅರಸರು ವಿದೇಶಿ ರಾಯಭಾರಿಗಳನ್ನು ಸ್ವಾಗತಿಸಲು ನಿರ್ಮಿಸಿದ್ದ ಆನಂದ ಮಹಲ್‌ನಲ್ಲಿ ಕೊನೆಗೂ ಸಾಂಸ್ಕೃತಿಕ ಲೋಕ ತೆರೆದುಕೊಂಡಿದೆ. ಮಿಣುಕಿನ ಹೊದಿಕೆಯೊಂದಿಗೆ ಬೆಳಕಿನ ಮೋಡಿ ಮಾಡುತ್ತಿದ್ದ ಆನಂದ ಮಹಲ್‌ನಲ್ಲಿ ಪಾರಂಪರಿಕ ಸಂಗೀತದಿಂದಲೇ ವಿಶ್ವದ ಗಮನ ಸೆಳೆದಿರುವ ವಿಜಯಪುರ ನಗರದಲ್ಲಿ ನಿರಂತರ ನವರಸಪುರ ಉತ್ಸವದ ವೈಭವ ಮೇಳೈಸಿತ್ತು.

ಜಿಲ್ಲೆಯಲ್ಲಿ ಜಿಲ್ಲಾಡಳಿತದ ಸುಪರ್ದಿಯಲ್ಲಿ ಜನ್ಮ ತಳೆದಿರುವ ವಿಜಯಪುರ ನಗರದ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಸಮಿತಿ ಸದ್ದು ಗದ್ದಲ ಇಲ್ಲದೇ ಅನಂದ ಮಹಲ್‌ನಲ್ಲಿ ಶನಿವಾರದಿಂದ ಆರಂಭಿಸಿದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೊದಲ ದಿನವೇ ನಗರದ ಜನತೆಯಿಂದ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿತ್ತು.

ಆಡಂಬರದ ಉದ್ಘಾಟನೆ ಇಲ್ಲದೇ ಕೇವಲ ಕಲಾವಿದರು ನೇರವಾಗಿ ಕಾರ್ಯಕ್ರಮ ನೀಡುವ ಮೂಲಕ ಸಂಗೀತ ಲೋಕಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಆಪರ ಜಿಲ್ಲಾಧಿಕಾರಿ ಪ್ರಸನ್ನ, ವೂಡಾ ಆಯುಕ್ತ ಡಾ| ಔದ್ರಾಮ್‌, ಸಹಾಯಕ ಆಯುಕ್ತ ಸೋಮಲಿಂಗ ಗೆಣ್ಣೂರ, ಪ್ರವಾಸೋದ್ಯಮ ಇಲಾಖೆ ನೂತನ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡದ ಪರಿಶ್ರಮದ ಫಲವಾಗಿ ಪ್ರತಿ ವಾರದ ಕೊನೆಯಲ್ಲಿ ಶನಿವಾರ-ರವಿವಾರ ಸಂಜೆ 7ರಿಂದ 9 ರವರೆಗೆ ಆನಂದ  ಗಮನ ಸೆಳೆದ ಭಿಸೆ ಸಹೋದರಿಯರ ಭರತನಾಟ್ಯ  ಸಂಗೀತ ಪ್ರಿಯರ ಮನ ಸೂರೆಗೊಳಿಸಿದ ಲತಾ ಜಹಗೀರದಾರ ಸಂಗೀತ  ಈಶ್ವರ ಸ್ಯಾಕ್ಸೋಫೋನ್‌-ಕೃತಿಕಾ ಜಂಗಿನಮಠ ಕೊಳಲ ಜುಗಲ್‌ ಬಂದಿ  ಡೋಲಕ್‌ ಝಲಕ್‌ ಮೂಡಿಸಿದ ಇಸ್ಮಾಯಿಲ್‌ ಖಾಜಿ  ತಬಲಾ ಮೋಡಿ ಮಾಡಿದ ಕಾಶೀನಾಥ ಗಾಯಕವಾಡ ಮಹಲ್‌ನಲ್ಲಿ ಧ್ವನಿ-ಬೆಳಕಿನ ಹೊನಲಿನೊಂದಿಗೆ ಸಂಗೀತ-ನೃತ್ಯಗಳ ವೈಭವಕ್ಕೆ ಚಾಲನೆ ದೊರಕಿದೆ.

ಮೊದಲ ದಿನ ಪ್ರದರ್ಶನ ನೀಡಿದ ನಗರದ ಖ್ಯಾತ ವಿದೂಷಿ ಲತಾ ಜಹಗೀರದಾರ ಅವರ ಸಂಗೀತ ಕಚೇರಿ ಆನಂದ ಮಹಲ್‌ ಸ್ಮಾರಕದಲ್ಲಿ ಮಾರ್ಧನಿಸಿತ್ತು. ನಂತರ ವೇದಿಕೆ ಏರಿ ಭರತನಾಟ್ಯ ಪ್ರದರ್ಶನ ನೀಡಿದ ಭಿಸೆ ಸಹೋದರಿಯರಾದ ದೀಕ್ಷಾ ಹಾಗೂ ದಿವ್ಯಾ ಆವರು ನೆರೆದ ಕಲಾ ರಸಿಕರ ಮನಸೂರೆಗೊಂಡರು. ಸಂಗೀತಕ್ಕೆ ತಕ್ಕಂತೆ ಭರತ ನಾಟ್ಯಕ್ಕೆ ಹೆಜ್ಜೆ-ಗೆಜ್ಜೆ ನಾದದ ನಿನಾದ ಮೂಡಿಸಿ ಚಪ್ಪಾಳೆ ಗಿಟ್ಟಿಸಿದರು.

ಇದಾದ ಬಳಿಕ ಕೊಳಲು ಹಿಡಿದು ವೇದಿಕೆ ಬಂದ ಕೃತಿಕಾ ಜಂಗಿನಮಠ ನುಡಿಸಿದ ಹಿಂದಿ-ಕನ್ನಡ ಹಳೆ ಚಲನಚಿತ್ರಗಳ ಗೀತೆಗಳು ಸಂಗೀತ ಪ್ರೇಮಿಗಳ ಮನ ಮುದಗೊಳಿಸಿತ್ತು. ಆಂಧ ಕಲಾವಿದೆಯ ಮುಗ್ಧ ಉಸಿರಿನಿಂದ ಹೊರ ಹೊಮ್ಮುತ್ತಿದ್ದ ಕೊಳಲಿನ ನಿನಾದಕ್ಕೆ ನೆರೆದ ಸಂಗೀತ ಪ್ರೇಕ್ಷಕರು ಚಪ್ಪಾಳೆ ಹೊಡೆದದ್ದೇ ಹೊಡೆದದ್ದು. ಕೃತಿಕಾಳ ಕೊಳಲ ಗಾನಕ್ಕೆ ಸಾಥ್‌ ನೀಡಿದ್ದ ಈ ಯುವ ಪ್ರತಿಭೆಯ ಕೊಳಲಿನ ಗಾನಕ್ಕೆ ತಮ್ಮ ಸಾರವಾಡದ ಈಶ್ವರ ಭಜಂತ್ರಿ ಸ್ಯಾಕ್ಸೋಫೋನ್‌ ಮೂಲಕ ಗಮನ ಸೆಳೆದರು.

ಕೃತಿಕಾಳ ಕೊಳಲು ಹಾಗೂ ಈಶ್ವರ ಅವರ ಸ್ಯಾಕ್ಸೋಫೋನ್‌ ವ್ಯಕ್ತಿಗತ ವಾದನಗಳ ಪ್ರದರ್ಶನ ಬಳಿಕ ಈ ಇಬ್ಬರು ನುಡಿಸಿದ ದೇಶಿ ಕೊಳಲು-ವಿದೇಶ ಸ್ಯಾಕ್ಸೋಫೋನ್‌ ಜುಗಲ್‌ ಬಂದಿ ಮೋಡಿ ಮಾಡಿತು. ಕೃತಿಕಾ ಜಂಗಿನಮಠ ಕೊಳಲಿನಲ್ಲಿ ಸಂಗೀತದ ಮೋಡಿ ಮಾಡಿದರೆ, ಈಶ್ವರ ಭಜಂತ್ರಿ ಅವರ ಸ್ಯಾಕ್ಸೋಫೋನ್‌ ಎಂಬ ವಿದೇಶಿ ವಾದನದಲ್ಲಿ ತಾವು ಪಡೆದಿರುವ ವಿಶಿಷ್ಟ ಪ್ರತಿಭೆಯನ್ನು ಅನಾವರಣ ಮಾಡಿದರು.

ಇವರಿಬ್ಬರಿಗಿಂತ ಜುಗಲ್‌ ಬಂದಿ ನಂತರ ತಾವೇನು ಕಮ್ಮಿ ಇಲ್ಲ ಎಂಬಂತೆ ತಮ್ಮ ಬೆರಳಿಂದ ತಬಲಾ ನುಡಿಸಿ ವೈವಿಧ್ಯಮಯ ಪ್ರತಿಭೆ ಪ್ರದರ್ಶಿಸಿದ ಕಾಶೀನಾಥ ಗಾಯಕವಾಡ ಯುವ ಸಮೂಹದ ಸಿಳ್ಳೆಗಳ ಸುರಿಮಳೆ ಗಿಟ್ಟಿಸಿದರು.

ಈ ಯುವ ಕಲಾವಿದರೊಂದಿಗೆ ಡೋಲಕ್‌ ಝಲಕ್‌ ಮೂಡಿಸಿದ ಇಸ್ಮಾಯಿಲ್‌ ಗಮನ ಸೆಳೆದರು. ರಿದಮ್‌ ಪ್ಯಾಡ್‌ ರಮೇಶ ರತ್ನಾಕರ, ಪರಶುರಾಮ ಭಜಂತ್ರಿ ಕೀ ಬೋರ್ಡ್‌ ಮೂಲಕ ಉತ್ತಮ ಸಾಥ್‌ ನೀಡಿದ್ದರಿಂದ ಐತಿಹಾಸಿಕ ಆನಂದ ಮಹಲ್‌ ಸ್ಮಾರಕದ ಎದುರು ಮೊದಲ ಬಾರಿಗೆ ಕಿನ್ನರ ಲೋಕವೇ ಧರೆಗೆ ಇಳಿದಂತಾಗಿತ್ತು.

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.