ಬೇಗಂ ತಾಲಾಬ್‌ನಲ್ಲಿ ಬೋಟಿಂಗ್ ಶುರು
ಬೋಟಿಂಗ್ ಸೇವೆ ಇಂದು ಉಚಿತಒಂದು ತಿಂಗಳು ಪ್ರಾಯೋಗಿಕ ಪರೀಕ್ಷೆಗೆ ಲಿಖೀತ ಆದೇಶ
Team Udayavani, Sep 27, 2019, 4:27 PM IST
ಜಿ.ಎಸ್. ಕಮತರ
ವಿಜಯಪುರ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಭಾಗವಾಗಿ ಹಲವು ಬೆಳವಣಿಗೆಗಳ ಮಧ್ಯೆ ಐತಿಹಾಸಿಕ ಬೇಗಂ ತಾಲಾಬ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನವಾದ ಸೆ.27ರಂದು ದೋಣಿ ವಿಹಾರ ಆರಂಭಗೊಳ್ಳಲಿದೆ. ಇದಕ್ಕಾಗಿ ಕಾರವಾರದ ಸಂಸ್ಥೆಯೂ ಕಯಾಕಿಂಗ್, ಮೋಟರ್ ಹಾಗೂ ರ್ಯಾಪ್ಟಲ್ ಬೋಟಿಂಗ್ ಆರಂಭಕ್ಕೆ ಬೋಟ್ ಗಳನ್ನು ಕೆರೆ ಪ್ರದೇಶದಲ್ಲಿ ಇಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಬೋಟಿಂಗ್ ಸೇವೆಗೆ ಚಾಲನೆ ದೊರೆಯಲಿದೆ.
ಈಗಾಗಲೇ ಕಾರವಾರ ಜಿಲ್ಲೆಯ ಜೋಯಿಡಾ ತಾಲೂಕಿನ ಇಳವಾ -ಗಣೇಸಗುಡಿಯ ಫ್ಲೈ ಕ್ಯಾಚರ್ ಅಡ್ವೆಂಚರ್ ಸಂಸ್ಥೆ ವಾರ್ಷಿಕ 3 ಲಕ್ಷ ರೂ.ಗೆ ಐತಿಹಾಸಿಕ ಗಗನಮಹಲ್ ಕಂಕದಲ್ಲಿ ಬೋಟಿಂಗ್ ಆರಂಭಕ್ಕೆ ಟೆಂಡರ್ ಅಂತಿಮಗೊಳಿಸುವ ಹಂತದಲ್ಲಿತ್ತು. ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಕರರು ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಉದ್ದೇಶಿತ ಬೋಟಿಂಗ್ ಸೇವೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಇದೀಗ ಐತಿಹಾಸಿಕ ಬೇಗಂ ತಾಲಾಬ್‌ನಲ್ಲಿ ಬೋಟಿಂಗ್ ಆರಂಭಿಸಲು ಮುಂದಾಗಿದೆ.
ಬೇಗಂತಾಲಾಬ್‌ನಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿ ಬೋಟಿಂಗ್ ಸೇವೆ ಬಳಿಕ ಈ ಕೆರೆಯಲ್ಲಿ ಬೋಟಿಂಗ್ ಆರಂಭಕ್ಕೆ ಪ್ರತ್ಯೇಕವಾಗಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ಈ ಕುರಿತು ಟೆಂಡರ್ ಪಡೆದಿರುವ ಸಂಸ್ಥೆಯೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು, ಅಂತಿಮವಾಗಿ ಭೂತನಾಳ ಕೆರೆಯಲ್ಲಿ ಬೋಟಿಂಗ್ ಆರಂಭಿಸಬೇಕು. ಒಂದೊಮ್ಮೆ ಎಎಸ್‌ಐ ಕಂದಕದಲ್ಲಿ ಬೋಟಿಂಗ್ ಆರಂಭಕ್ಕೆ ಪರವಾನಗಿ ನೀಡಿದಲ್ಲಿ ಹಿಂದಿನ ಟೆಂಡರ್‌ನಲ್ಲೇ ನಗರದಲ್ಲೇ ಬೋಟಿಂಗ್ ರಂಭಗೊಳ್ಳಲಿದೆ.
ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನದಂದು ಬೇಗಂ ತಾಲಾಬ್‌ನಲ್ಲಿ ಬೋಟಿಂಗ್ ಸೇವೆ ಆರಂಭಿಸಲು ಫ್ಲೈಕ್ಯಾಚರ್ ಅಡ್ವೆಂಚರ್ ಸಂಸ್ಥೆ 2 ಮೋಟಾರು ಬೋಟ್ ಗಳು, 15 ಕಯಾಕಿಂಗ್ ಹಾಗೂ 2 ರ್ಯಾಪ್ಟಲ್ ಬೋಟ್ ಗಳು ಬೇಗಂ ತಾಲಾಬ್‌ಗ ಬಂದಿಳಿದಿವೆ. ಈ ಕೆರೆಯ ಪ್ರದೇಶದಲ್ಲಿ ಈಗಾಗಲೇ ಪಿಕ್‌ನಿಕ್ ಯೋಗ್ಯ ಸೌಲಭ್ಯಗಳು ಅಭಿವೃದ್ಧಿಗೊಂಡಿದ್ದು, ನಿತ್ಯವೂ ಸಾವಿರಾರು ಜನರು ಬೆಳಿಗ್ಗೆ-ಸಂಜೆ ವಾಯು ವಿಹಾರಕ್ಕೆ ಬರುತ್ತಿದ್ದಾರೆ. ನಗರದಿಂದ ಹೊರ ವಲಯದಲ್ಲಿರುವ ಈ ಕೆರೆಯಲ್ಲಿ ಬೋಟಿಂಗ್ ಆರಂಭಿಸುವುದು ಎಲ್ಲ ರೀತಿಯಿಂದಲೂ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಪ್ರಾಯೋಗಿಕವಾಗಿ ಒಂದು ತಿಂಗಳ ಬೋಟಿಂಗ್ ಆರಂಭಿಸಲು ಲಿಖೀತವಾಗಿ ಫ್ಲೈಕ್ಯಾಚರ್ ಅಡ್ವೆಂಚರ್ ಸಂಸ್ಥೆಗೆ ಸೂಚಿಸಲಾಗಿದೆ. ವಿಶ್ವ ಪ್ರವಾಸೋದ್ಯಮ ದಿನದಂದು ಬೋಟಿಂಗ್ ಆರಂಭಿಸುತ್ತಿರುವ ಕಾರಣ ಅಂದು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ದೋಣಿ ವಿಹಾರ ಮಾಡಬಯಸುವ ಎಲ್ಲರಿಗೂ ಉಚಿತ ಸೇವೆ ಕಲ್ಪಿಸಲಿದೆ. ನಂತರದ ದಿನಗಳಲ್ಲಿ ಪ್ರತಿ ಬೋಟ್‌ಗೆ ಪ್ರತಿ ಅರ್ಧ ಗಂಟೆ ವಿಹಾರಕ್ಕೆ ದರ ನಿಗದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನೇತೃತ್ವದ ಸಮಿತಿ ಚರ್ಚಿಸಿ ದರವನ್ನು ಅಂತಿಮ ಮಾಡಿದೆ.
ದರ ನಿಗದಿ: ಮೋಟರ್ ಬೋಟಿಂಗ್‌ಗೆ ಅರ್ಧ ಗಂಟೆಗೆ 100 ರೂ. ಕಯಾಕಿಂಗ್ ಅರ್ಧ ಗಂಟೆಗೆ ಒಬ್ಬರಿಗೆ 100, ಜೋಡಿ ಇದ್ದರೆ 150 ರೂ. ಹಾಗೂ ರ್ಯಾಪ್ಟಲ್ ಬೋಟಿಂಗ್‌ಗೆ 50 ರೂ. ದರ ನಿಗದಿ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತಿ ಜಲಾಶಯದ ಆವರಣದಲ್ಲಿ ಉದ್ಯಾನವನ ಆವರಣದಲ್ಲಿ ಬೋಟಿಂಗ್ ಇದೆ.ವಿಜಯಪುರ ನಗರದಲ್ಲಿ ಆರಂಭಗೊಳ್ಳುತ್ತಿರುವ ಬೋಟಿಂಗ್ ಎರಡನೇಯದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.