ಸಹಕಾರಿ ಬ್ಯಾಂಕ್‌ನಲ್ಲಿ ಅವ್ಯವಹಾರ ವಾಸನೆ
ನೌಕರರ ಸಂಘದ ಚುನಾವಣೆ ಹಂತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ದೂರು-ದಾಖಲೆ ಹರಿದಾಟ
Team Udayavani, Jun 13, 2019, 10:48 AM IST
ವಿಜಯಪುರ: ನಗರದಲ್ಲಿ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ಆಡಳಿತ ಕಚೇರಿ.
ಜಿ.ಎಸ್. ಕಮತರ
ವಿಜಯಪುರ: ಸರ್ಕಾರಿ ನೌಕರರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆಗೆ ಕ್ಷಣಗಣನೆ ಹಂತದಲ್ಲಿ ನೌಕರರ ಸಹಕಾರಿ ಬ್ಯಾಂಕ್‌ನ ಅವ್ಯವಹಾರದ ದಾಖಲೆಗಳು ಹೊರ ಬಿದ್ದಿವೆ. ಈ ಕುರಿತು ಹಲವು ಇಲಾಖೆಗಳಿಗೆ ದೂರು ನೀಡಿರುವ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಶೇಷವಾಗಿ ನೌಕರರ ಸಂಘದ ಹಾಲಿ ಜಿಲ್ಲಾಧ್ಯಕ್ಷ ಸುರೇಶ ಶೇಡಶಾಳ ಸೇರಿದಂತೆ ಹಲವು ಶಿಕ್ಷಕರ ವಿರುದ್ಧ ಅವ್ಯವಹಾರ ನಡೆಸಿರುವ ಕುರಿತು ನೌಕರರಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶಾಳ ಇವರ ಬಣದವರಾದ ಅರ್ಜುನ ಗಂಗು ಲಮಾಣಿ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಅರ್ಜುನ ಲಮಾಣಿ ಆಡಳಿತದ ಆವಧಿಯಲ್ಲಿ ಹಲವು ನೌಕರರರ ಹೆಸರಿನಲ್ಲಿ ಅಕ್ರಮವಾಗಿ ಕೋಟ್ಯಂತರ ರೂ. ಹಣಕಾಸಿನ ವಹಿವಾಟು ನಡೆದಿದೆ. ಸರ್ಕಾರಿ ನೌಕರರರು ನಿಯಮ ಬಾಹೀರವಾಗಿ ಹಲವು ಲಕ್ಷ ಮೊತ್ತದಿಂದ ಕೋಟಿ ರೂ. ಹಂತದವರೆಗೆ ವಹಿವಾಟು ನಡೆಸಿದ್ದು ಇಂತಹ ನೌಕರರ ಆದಾಯದ ಮೂಲ ಯಾವುದು ಎಂದು ದೂರಲಾಗಿದೆ.
ಸಾಮಾನ್ಯ ಶಿಕ್ಷಕರಾಗಿರುವ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶಾಳ, ನೌಕರರ ಸಹಕಾರಿ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ, ನಿರ್ದೇಶಕ ಹನುಮಂತ ಕೊಣದಿ, ಸೈಯದ್ ಜುಬೇರ ಕೆರೂರ, ಶಿಕ್ಷಕ ಬಸವರಾಜ ಹಡಲಂಗ, ರೀಟಾ ಕುಲಕರ್ಣಿ, ಈರಣ್ಣ ತೇಲಿ ಸೇರಿದಂತೆ ಹಲವರ ಹೆಸರಿನಲ್ಲಿ ನಿಯಮ ಬಾಹೀರವಾಗಿ 2006ರಿಂದ 2019ರವರೆಗೆ ನೌಕರರ ಸಹಕಾರಿ ಬ್ಯಾಂಕ್‌ನಲ್ಲಿ ವಹಿವಾಟು ನಡೆಸಲಾಗಿದೆ ಎಂದು ಎಸ್.ಎ. ಪಾಟೀಲ ಎಂಬುವರು ಶಿಕ್ಷಣ ಇಲಾಖೆ ಧಾರವಾಡ ಆಯುಕ್ತರ ಕಚೇರಿಗೆ, ನೀಡಿದ ದೂರಿನ ಕುರಿತು ಡಿಡಿಪಿಐ ಅವರಿಗೆ ಸದರಿ ಅವ್ಯವಹಾರದ ಕುರಿತು ತನಿಖೆ ನಡೆಸಿ, ಶಿಸ್ತು ಕ್ರಮ ಜರುಗಿಸುವಂತೆ ಕಳೆದ ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಲಿಖೀತ ಆದೇಶ ನೀಡಲಾಗಿದೆ.
ಆರೋಪ ಹೊತ್ತಿರುವ ಶಿಕ್ಷಕರ ಆದಾಯದ ಮೂಲವೇನು, ಇವರ ಎಲ್ಲ ಬ್ಯಾಂಕ್ ಖಾತೆಗಳ ವಿವರ, ಅರೋಪಿತ ಶಿಕ್ಷಕರು 2006ರಿಂದ ಈವರೆಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆಯೇ, ಆದಾಯ ತೆರಿಗೆ ಪಾವತಿಸಿದ್ದಾರೆಯೇ, 10 ಸಾವಿರಕ್ಕಿಂತ ಹೆಚ್ಚಿನ ಆರ್ಥಿಕ ವಹಿವಾಟಿಗೆ ಇಲಾಖೆಯು ಅನುಮತಿ ಪಡೆದಿದ್ದಾರೆಯೇ ಎಂಬ ಹಲವು ಮಗ್ಗುಲಗಳಲ್ಲಿ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಅಯುಕ್ತರ ಕಚೇರಿಯ ಪರ ಆಯುಕ್ತ ಮೇ| ಸಿದ್ದಲಿಂಗಯ್ಯ ಹಿರೇಮಠ ಆದೇಶಿಸಿದ್ದಾರೆ.
ಮತ್ತೂಂದೆಡೆ ಎಸಿಬಿ, ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಸದರಿ ಪ್ರಕರಣವನ್ನು ಎಸಿಬಿ ಅಧಿಕಾರಿಗಳು ಸಹಕಾರಿ ಸಂಘಗಗಳ ಜಂಟಿ ನಿಬಂಧಕರಿಗೆ ತನಿಖೆಗೆ ವಹಿಸಿದ್ದಾರೆ. ಸದರಿ ಪ್ರಕರಣ ತನಿಖೆ ವಿಚಾರಣೆ ಹಂತದಲ್ಲಿದೆ.
ಇದೇ ವೇಳೆ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆದಿದ್ದು, ಹಲವರು ನೌಕರರ ಸಂಘ ಹಾಗೂ ನೌಕರರ ಸಹಕಾರಿ ಬ್ಯಾಂಕ್ ಎರಡರಲ್ಲೂ ಸದಸ್ಯತ್ವ ಹೊಂದಿದ್ದಾರೆ. ಹೀಗಾಗಿ ಸದರಿ ಅವ್ಯವಹಾರ ನಡೆಸಿದ್ದಾರೆ ಎನ್ನಲಾದ ನೌಕರರ ವಿರುದ್ಧದ ಆರೋಪದ ಕುರಿತು ಬ್ಯಾಂಕ್ ವಹಿವಾಟಿನ ದಾಖಲೆಗಳು, ವಿವಿಧ ಇಲಾಖೆಗಳಿಂದ ತನಿಖೆಗೆ ಸೂಚಿಸಿರುವ ದಾಖಲೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡಲಾಗಿದ್ದು, ಸರ್ಕಾರಿ ನೌಕರರ ವಲದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
ಮತ್ತೂಂದೆಡೆ ಸರ್ಕಾರಿ ನೌಕರರ ಸಂಘದ ಕಟ್ಟಡ ಸುತ್ತ ಅಕ್ರಮವಾಗಿ ಹಾಗೂ ನಿಯಮ ಬಾಹೀರವಾಗಿ ವಾಣಿಜ್ಯ ಮಳಿಗೆಗಳನ್ನು ಕಟ್ಟಿದ್ದು, ಇದರಿಂದ ಮಾಸಿಕ ಲಕ್ಷಾಂತರ ರೂ. ಆದಾಯ ಬರುತ್ತಿದೆ. ಈ ಆದಾಯದ ಕುರಿತು ನೌಕರರ ಸಂಘದಲ್ಲಿ ಲೆಕ್ಕಪತ್ರ ಇರಿಸಿಲ್ಲ, ನೌಕರರ ಸಂಘದಲ್ಲಿ ಸದಸ್ಯರಾಗಿರುವ ಯಾರಿಗೂ ಇಲ್ಲಿ ನಡೆಯುತ್ತಿರುವ ವ್ಯವಹಾರದ ಕುರಿತು ಮಾಹಿತಿ ನೀಡಿಲ್ಲ. ಪ್ರತಿ ವರ್ಷ ನೌಕರರಿಂದ ಪ್ರತಿಯೊಬ್ಬರಿಂದ 100 ರೂ. ಸಂಗ್ರಹಿಸುತ್ತಿದ್ದು, ಈ ಹಣ ಎಲ್ಲಿದೆ ಎಂದು ಯಾವ ನೌಕರರಿಗೆ ಮಾಹಿತಿ ನೀಡಿಲ್ಲ.
ಇನ್ನು ವಿಜಯಪುರ ನಗರದಲ್ಲಿ ಜರುಗಿದ ಅಖೀಲ ಭಾರತ ಕನ್ನಡ ಸಾಹಿತ್ಯ 79ನೇ ಸಮ್ಮೇಳನ ನೌಕರರ ಸಂಘದಿಂದ ಜಿಲ್ಲೆಯ ನೌಕರರಿಂದ ಒಂದು ದಿನದ ವೇತನ ಪಡೆದಿದ್ದು, ಈ ಹಣದಲ್ಲಿ ಶೇ. 25ಹಣ 34 ಲಕ್ಷ ರೂ.ಯನ್ನು ನೌಕರರ ಸಭಾಂಗಣ ನಿರ್ಮಾಣದ ವೆಚ್ಚಕ್ಕೆ ಬಳಸಿಕೊಳ್ಳುವುದಾಗಿ ಹೇಳಿದ್ದರು. ಈ ಹಣದ ಲೆಕ್ಕವನ್ನು ಈವರೆಗೆ ನೌಕರರಿಗೆ ನೀಡಿಲ್ಲ ಎಂಬ ಆರೋಪಗಳನ್ನು ಹಾಲಿ ಆಡಳಿತ ಮಂಡಳಿ ವಿರುದ್ಧ ಹೊರಿಸಿ ಪ್ರಚಾರ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.